ಮುಡಾ ಹಗರಣ : ತನಿಖೆಗೆ ನೇಮಕಗೊಂಡದ್ದು FIRST, ಸ್ಥಳಕ್ಕಾಗಮಿಸಿದ್ದು LAST » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 ಮೈಸೂರು, ನ.12,2024: (www.justkannada.in news)  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿರುವ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ನಾಲ್ಕು ತಿಂಗಳ ಹಿಂದೆ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.  ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗ ರಚನೆ ಮಾಡಿತ್ತು. ಇಂದು ಆಯೋಗದ ಮುಖ್ಯಸ್ಥರಾದ ಪಿ.ಎನ್.ದೇಸಾಯಿ ಮುಡಾ ಕಚೇರಿಗೆ ಆಗಮಿಸಿದ್ದರು.

ಮುಡಾ ನಿವೇಶನ​ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧವೇ ಆರೋಪಗಳು ಕೇಳಿ ಬಂದಿದ್ದು, ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ವಿಪಕ್ಷಗಳಿಗೆ ಪ್ರತ್ಯಾಸ್ತ್ರವಾಗಿ ಭಾರೀ ಸದ್ದು ಮಾಡುತ್ತಿದೆ.

ರಾಜ್ಯ ಸರ್ಕಾರ ಮುಡಾ ಅಕ್ರಮದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ಆದೇಶ ಹೊರಡಿಸಿದ್ದು, 6 ತಿಂಗಳೊಳಗೆ ವರದಿ ನೀಡುವಂತೆ ವಿಚಾರಣಾ ಆಯೋಗಕ್ಕೆ ಸೂಚನೆ ನೀಡಲಾಗಿದೆ.

ವಿಚಾರಣಾ ಆಯೋಗಕ್ಕೆ ಸಮಗ್ರ ಮಾಹಿತಿ, ದಾಖಲೆಗಳನ್ನು ಒದಗಿಸಿ ಆಯೋಗ ವಿಚಾರಣೆ ಪೂರ್ಣಗೊಳಿಸಲು ಹಾಗೂ ತಾಂತ್ರಿಕ ಸಲಹೆಗಾರರು, ಆರ್ಥಿಕ ಸಲಹೆಗಾರರು, ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲು ನಗರಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಕರಿಸುವಂತೆ ರಾಜ್ಯ ಸರಕಾರ ಸೂಚನೆ ನೀಡಿತ್ತು.

ವಿಪರ್ಯಾಸವೆಂದರೆ, ಆಯೋಗ ರಚನೆಗೊಂಡು ನಾಲ್ಕು ತಿಂಗಳ ಬಳಿಕ ಆಯೋಗದ ಮುಖ್ಯಸ್ಥರು ಮುಡಾ ಕಚೇರಿಗೆ ಆಗಮಿಸಿದ್ದಾರೆ. ಈ ತನಕ ಬೆಂಗಳೂರಿನಲ್ಲಿ ಕಚೇರಿ ತೆರೆದು ಸಾರ್ವಜನಿಕರಿಂದ ಅಗತ್ಯ ದಾಖಲೆಗಳನ್ನು ಆಹ್ವಾನಿಸಲಾಗಿತ್ತು.

ಸರಕಾರ ಆಯೋಗ ರಚಿಸಿದ ಬಳಿಕ, ರಾಜ್ಯಪಾಲರ ಶಿಫಾರಸ್ಸಿನ ಮೇರೆಗೆ ಹೈಕೋರ್ಟ್‌ ಆದೇಶದಂತೆ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುತ್ತಿದೆ. ಈ ನಡುವೆ, ಆರ್.ಟಿ.ಐ. ಕಾರ್ಯಕರ್ತರ ದೂರಿನ ಅನ್ವಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣದಲ್ಲಿ ಪ್ರವೇಶಿಸಿ ತನಿಖೆ ನಡೆಸುತ್ತಿದ್ದಾರೆ. ಆದರೆ ಆಯೋಗ ರಚನೆಗೊಂಡ ನಾಲ್ಕು ತಿಂಗಳುಗಳ ಬಳಿಕ ಆಯೋಗದ ಮುಖ್ಯಸ್ಥರು ಮುಡಾ ಕಚೇರಿಗೆ ಆಗಮಿಸಿರುವುದು.

key words: MUDA, site controversy, retired judge P.N. Desai, commission, Mysore

MUDA site controversy retired judge P.N. Desai commission visited Mysore

 

Font Awesome Icons

Leave a Reply

Your email address will not be published. Required fields are marked *