ಪೊಲೀಸರ ಕಾರ್ಯಾಚರಣೆ: 154 ಕೆಜಿ ಗಾಂಜಾ ವಶಕ್ಕೆ; ಇಬ್ಬರ ಬಂಧನ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ನವೆಂಬರ್,13,2024 (www.justkannada.in): ನಗರದ ಉದಯಗಿರಿ ಠಾಣೆ ಪೊಲೀಸರು ಅಕ್ರಮವಾಗಿ ಗಾಂಜಾ ಸಂಗ್ರಹಿಸಿದ್ದ ಮನೆಯ ಮೇಲೆ ದಾಳಿ ನಡೆಸಿ ಒಟ್ಟು 154 ಕೆ.ಜಿ 450 ಗ್ರಾಂ ಗಾಂಜಾ ವಶಕ್ಕೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೈಸೂರು ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣಗಿರಿ. ಕೆ.ಹೆಚ್.ಬಿ ಕಾಲೋನಿಯ ಮನೆಯೊಂದರಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿರುವ ಬಗ್ಗೆ ಉದಯಗಿರಿ ಠಾಣಾ ಪೊಲೀಸರಿಗೆ  ನಿನ್ನೆ ರಂದು ಮಾಹಿತಿ ಸಿಕ್ಕಿದ್ದು ಖಚಿತ ಮಾಹಿತಿಯ ಮೇರೆಗೆ  ಪೊಲೀಸರು ಸದರಿ ಮನೆಯ ಮೇಲೆ ಇಂದು ದಾಳಿ ಮಾಡಿದ್ದಾರೆ.

ಈ ವೇಳೆ  8 ಪ್ಲಾಸ್ಟಿಕ್ ಚೀಲದಲ್ಲಿ ಹಲವು ಪೊಟ್ಟಣ್ಣಗಳನ್ನಾಗಿಟ್ಟಿದ್ದ ಒಟ್ಟು 154 ಕೆ.ಜಿ 450ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಹಾಜರು ಪಡಿಸಿದ್ದಾರೆ.

ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮೇಲ್ಕಂಡ ಆರೋಪಿಗಳ ವಿಚಾರಣಾ ಕಾಲದಲ್ಲಿ ಮತ್ತೊಬ್ಬ ಪ್ರಮುಖ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದು, ಸದರಿ ಆರೋಪಿಯ ಪತ್ತೆ ಕಾರ್ಯ ಮುಂದುವರೆದಿದೆ.

ಈ ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರವರ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ್ಪ ಅವರ ನೇತೃತ್ವದಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅವರಾದ ಸುಧಾಕರ್ ಕೆ.ಎನ್. ಪಿ.ಎಸ್.ಐ ರವರಾದ ಸುನೀಲ್ ಸಿ.ಎನ್. ಆನಂದ್ ಹೆಚ್.ಎಂ. ನಾಗರಾಜ ನಾಯಕ ಬಿ.ಜಿ. ರೂಪೇಶ್ ಸಿ.ಎಂ ಸಿಬ್ಬಂದಿಯವರುಗಳಾದ ರಾಜು ಸಿ. ಮಹೇಶ, ಶಿವಪ್ರಸಾದ್, ರಾಜೇ ಸಾಬ್, ಕರಿಯಪ್ಪ, ಪ್ರಕಾಶ್ ರಾಠೋಡ್. ಸಂತೋಷ್ ಪವಾರ್, ಸುಹೇಲ್, ರಾಜೇಶ್, ಆದಶ್, ನಂದಿತ, ನಾಜೀಯಾ ಶರೀಫ್ ರವರು ಕೈಗೊಂಡಿದ್ದರು.

Key words: mysore,  Police, 154 kg, ganja, seized, arrest

Font Awesome Icons

Leave a Reply

Your email address will not be published. Required fields are marked *