ಲವಂಗ ನೀರನ್ನು ಕುಡಿಯುವುದರಿಂದ ಈ ರೋಗಗಳು ಬರಲ್ಲ

ಚಳಿಗಾಲದಲ್ಲಿ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದರೆ ಆರೋಗ್ಯವನ್ನ ಸದೃಢವಾಗಿ ಕಾಪಾಡಿಕೊಳ್ಳಬಹುದು. ಚಳಿ ಬಂದರೆ ಸಾಕು ಶೀತ, ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳು ಬರಲು ಪ್ರಾರಂಭಿಸುತ್ತವೆ. ಇದಕ್ಕೆ ಇಂದಿನ ಪರಿಸರ ಮಾಲಿನ್ಯ ಕೂಡ ಕಾರಣವಾಗಬಹುದು. ಇಂತಹ ಸಮಯದಲ್ಲಿ ಮನೆಮದ್ದುಗಳ ಮೊರೆ ಹೋಗುವುದು ಸಾಮಾನ್ಯ. ಆಯುರ್ವೇದ ಚಿಕಿತ್ಸೆಯು ದೇಹದಲ್ಲಿನ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಿಸುತ್ತದೆ.

ಅದರಂತೆ ಚಳಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಮಸಾಲೆ ಪದಾರ್ಥಗಳಲ್ಲಿ ಒಂದಾಗಿರುವ ಲವಂಗ ಕೂಡ ಒಂದಾಗಿದೆ. ಚಳಿಗಾಲದಲ್ಲಿ ಲವಂಗವನ್ನ ನೀರಿನ ಜೊತೆ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ದೇಹಕ್ಕೆ ಅನೇಕ ಉಪಯೋಗವಿದೆ.

ವಾತ, ಪಿತ್ತ ಮತ್ತು ಕಫದಿಂದ ನಮ್ಮ ದೇಹ ತೊಂದರೆಗೆ ಒಳಗಾದಾಗ, ಅನೇಕ ರೀತಿಯ ಬೇರೆ ರೋಗಗಳು ಉದ್ಭವಿಸುತ್ತವೆ. ಇದನ್ನು ತಡೆಯಬೇಕು ಎಂದರೆ ಕಾಲಿ ಹೊಟ್ಟೆಯಲ್ಲಿ ಲವಂಗ ನೀರನ್ನು ಕುಡಿಯಬೇಕು. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ಹೊಟ್ಟೆಯನ್ನ ತಂಪಾಗಿರುತ್ತದೆ.

ಲವಂಗ ನೀರು ಗ್ಯಾಸ್ಟಿಕ್, ಆಮ್ಲೀಯತೆ, ಹೊಟ್ಟೆ ಉಬ್ಬುವುದು ಹಾಗೂ ಅಜೀರ್ಣದಂತಹ ಹೊಟ್ಟೆಯ ಕಾಯಿಲೆಗಳನ್ನು ಗುಣಪಡಿಸುತ್ತದೆ. ಲವಂಗದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಕಿಣ್ವಗಳು ಹೆಚ್ಚಾಗುವುದರಿಂದ ಆಹಾರದ ಜೀರ್ಣ ಸುಲಭವಾಗುತ್ತದೆ.

ಲವಂಗವನ್ನು ನೀರಿಗೆ ಹಾಕಿದಾಗ ಅದರೊಂದಿಗೆ ಬೆರೆತು ನೈಸರ್ಗಿಕವಾಗಿ ತಂಪು ಆಗುತ್ತದೆ. ಇದು ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಹೊಟ್ಟೆಯಲ್ಲಿ ಸುಡುವ ಸಂವೇದನೆ ಇದ್ದರೇ ಅದನ್ನು ನಿವಾರಿಸುತ್ತದೆ. ಲವಂಗ ನೀರು ದೇಹದ ತೇವಾಂಶವನ್ನ ಕಾಪಾಡುತ್ತದೆ.

ಬದಲಾಗುತ್ತಿರುವ ಹವಾಮಾನದಲ್ಲಿ ಶೀತ, ಕೆಮ್ಮು ಮತ್ತು ಕಫದಂತಹ ಸಮಸ್ಯೆಗಳಿಂದ ಲವಂಗ ನೀರು ಪರಿಹಾರವನ್ನು ನೀಡುತ್ತದೆ. ಆಂಟಿಬ್ಯಾಕ್ಟೀರಿಯಲ್  ಮತ್ತು ಆಂಟಿವೈರಲ್  ಗುಣಲಕ್ಷಣಗಳನ್ನು ಲವಂಗ ಹೊಂದಿದೆ. ಯಾವುದೇ ಸೋಂಕನ್ನು ತಡೆಯಲು ಲವಂಗ ಸಹಾಯ ಮಾಡುತ್ತೆ. ಋತುಮಾನದ ರೋಗಗಳನ್ನು ದೂರ ಇಡುವಲ್ಲಿ ಲವಂಗ ಬಹುಮುಖ್ಯ ಪಾತ್ರವಹಿಸುತ್ತದೆ.

Font Awesome Icons

Leave a Reply

Your email address will not be published. Required fields are marked *