ಕೋವಿಡ್ ಹಗರಣದಲ್ಲಿ ನನ್ನ ಪಾತ್ರವಿಲ್ಲ- ಸಂಸದ ಡಾ.ಸಿ.ಎನ್ ಮಂಜುನಾಥ್ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್





ಮೈಸೂರು,ನವೆಂಬರ್,18, 2024 (www.justkannada.in):  ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ ಐಟಿ ರಚನೆ ಹಿನ್ನೆಲೆಯಲ್ಲಿ  ಈ ಕುರಿತು ಸಂಸದ ಡಾ.ಸಿ.ಎನ್ ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಸಂಸದ ಸಿ.ಎನ್ ಮಂಜುನಾಥ್, ಕೋವಿಡ್ ಹಗರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಟಾಸ್ಕ್ ಫೋರ್ಸ್ ಗೆ ಮುಖ್ಯಸ್ಥ ಅಲ್ಲ. ಕೋವಿಡ್ ಹಗರಣದ ಕುರಿತು ನನಗೆ ಗೊತ್ತಿಲ್ಲ. ನಾನು ಕೋವಿಡ್ ಕಮಿಟಿಗೆ ಆಹ್ವಾನಿತ ಸದಸ್ಯನಷ್ಟೆ. ಕೆಲವೊಂದು ಸಲಹೆ ಸೂಚನೆಗಳನ್ನು ನೀಡರಬಹುದು. ನಾನು ಟಾಸ್ಕ್ ಪೋರ್ಸ್ ಮುಖ್ಯಸ್ಥ ಅಲ್ಲವೇ ಅಲ್ಲ. ಬೆಡ್ ಖರೀದಿ , ಮೆಡಿಸಿನ್ ಖರೀದಿ ವಿಚಾರದಲ್ಲಿ ನನ್ನ ಪಾತ್ರವಿಲ್ಲ.  ಕಮಿಟಿಯಲ್ಲಿ ಸಾಕಷ್ಟು ಮಂದಿ ತಜ್ಞರು ಹಿರಿಯ ಅಧಿಕಾರಿಗಳು ಇದ್ದರು. ಅದು ಮೆಡಿಕಲ್ ಎಮರ್ಜೆನ್ಸಿ ಆದ ಕಾರಣ ಹಲವು ಸಂಸ್ಥೆಗಳು ಪಾಲ್ಗೊಂಡಿದ್ದವು. ನಮಗೆ ಯಾವುದೇ ಅಡ್ಮಿನಿಸ್ಟ್ರೇಷನ್ ಹಾಗೂ ಫೈನಾನ್ಸಿಯಲ್ ಪವರ್ ನೀಡಿರಲಿಲ್ಲ. ನಾನೊಬ್ಬ ಸ್ಪೆಷಲಿಸ್ಟ್ ಆಗಿ ಸದಸ್ಯನಾಗಿದ್ದೆ ಅಷ್ಟೇ. ಕೋವಿಡ್ ಹಗರಣ ಪ್ರಕರಣದಲ್ಲಿ ನಮ್ಮದೇನೂ ಇದ್ರು ಸಲಹೆ ನೀಡೋದಷ್ಟೆ. ಇದರಲ್ಲಿ ನಮ್ಮ ನೇರ ಪಾತ್ರವಿಲ್ಲ. ತನಿಖೆ ಏನಾಗುತ್ತೆ ಮುಂದೆ ನೋಡಣ ಬಿಡಿ. ಮೊದಲು ತನಿಖೆಗೆ ಆದೇಶ ಮಾಡಲಿ ಆಮೇಲೆ ನೋಡಿಕೊಳ್ಳೋಣ ಎಂದರು.

ಚನ್ನಪಟ್ಟಣ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸಂಸದ ಸಿ.ಎನ್ ಮಂಜುನಾಥ್, ಚನ್ನಪಟ್ಟಣ ಉಪ ಚುನಾವಣೆ ಈಗಾಗಲೇ ಮುಗಿದು ಹೋಗಿದೆ. ಕಾರ್ಯಕರ್ತರ ಅಭಿಪ್ರಾಯದಂತೆ ಜೆಡಿಎಸ್ ಬಿಜೆಪಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವ ವಿಶ್ವಾಸ ಇದೆ. ಜೆಡಿಎಸ್ – ಬಿಜೆಪಿ ಮೈತ್ರಿಗೆ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: no role, Covid scam, MP, Dr. CN Manjunath






Previous articleರಾಜ್ಯದಲ್ಲಿ ಶೇ 80 ರಷ್ಟು ಬಿಪಿಎಲ್ ಕಾರ್ಡುಗಳಿವೆ- ಸಚಿವ ಕೆಎಚ್ ಮುನಿಯಪ್ಪ


Font Awesome Icons

Leave a Reply

Your email address will not be published. Required fields are marked *