ಮೈಸೂರು,ನವೆಂಬರ್,19,2024 (www.justkannada.in): ಜಾನುವಾರು ಮೇಲೆ ಹುಲಿ ದಾಳಿ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನಾಗಣಾಪುರದಲ್ಲಿ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವಲಯ ವ್ಯಾಪ್ತಿಯಲ್ಲಿ ಹುಲಿ ಹಸುವಿನ ಮೇಲೆ ದಾಳಿ ನಡೆಸಿದ್ದು, ಹುಲಿ ಸೆರೆ ಹಿಡಿಯದ ಅರಣ್ಯಾಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಪದೇ ಪದೇ ಹುಲಿ ಕಾಣಿಸಿಕೊಳ್ಳುತ್ತಿದ್ದು, ಕಳೆದ ವರ್ಷ ಇದೇ ಸ್ಥಳದಲ್ಲಿ ಹುಲಿ ಮಹಿಳೆಯನ್ನು ಕೊಂದಿತ್ತು.ಇದೀಗ ಮತ್ತೆ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿದ್ದು, ಹುಲಿ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಈ ವೇಳೆ ಅರಣ್ಯಧಿಕಾರಿಯನ್ನ ಯುವಕರು ತರಾಟೆ ತೆಗೆದುಕೊಂಡಿದ್ದು, ನಿಮ್ಮಿಂದ ಹುಲಿಯನ್ನ ಕಾಡಿಗಟ್ಟಲು ಸಾಧ್ಯವಿಲ್ಲ ಅಂದ್ರೆ ನಾವೇ ಓಡಿಸುತ್ತೇವೆ ಎಂದು ಅಧಿಕಾರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹುಲಿ ದಾಳಿಯಿಂದ ಯಾರದರೂ ಸತ್ತ ಮೇಲೆ ಬಂದು ನೀವು ಮೌನಾಚರಣೆ ಮಾಡೋದು ಬೇಡ. ನಾಳೆ ನೀವು ಬಂದು ಪರಿಹಾರ ಕೊಡುವುದು ಬೇಡ. ನೀವು ಹುಲಿ ಬಗ್ಗೆ ಓದಿಕೊಂಡಿದ್ದೀರಾ ನಾವು ಅನುಭವಿಸುತ್ತಿದ್ದೇವೆ. ನಿಮ್ಮ ಕೈಯಲ್ಲಿ ಶಾಶ್ವತ ಪರಿಹಾರ ಕೊಡಲು ಸಾಧ್ಯವಿಲ್ಲ. ಕಳೆದ ವರ್ಷ ಹುಲಿ ದಾಳಿಯಾಗಿ ಮಹಿಳೆ ಸಾವನಪ್ಪಿದ್ದರು. ಈಗ ಮತ್ತೆ ಜಾನುವಾರು ಮೇಲೆ ದಾಳಿಯಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
Key words: mysore, Tiger, attack, cattle, Villagers, forest officials