ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಜಾಗ ಕಬಳಿಸಲು ಕಾಂಗ್ರೆಸ್ ಹುನ್ನಾರ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಗೆ ಕಾದಿರಿಸಿದ 39 ಸೆಂಟ್ಸ್ ಜಮೀನು ಪ್ರೀಯದರ್ಶಿನಿ ಟ್ರಸ್ಟ್ ಗೆ ನೀಡುವಂತೆ ಶಾಸಕ ಅಶೋಕ್ ಕುಮಾರ್ ರೈ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಮನವಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಕ್ಷಣ ಸ್ಪಂದಿಸಿದ್ದಾರೆ. ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಗಾಗಿ ಜಮೀನು ಕಾದಿರಿಸಲು ಮನವಿ ಮಾಡಲಾಗಿದೆ.

ಕಾಂಗ್ರೆಸ್ ಸರ್ಕಾರದ ಮೇಲೆ ಮಾಜಿ ಶಾಸಕ ಸಂಜೀವ ಮಠಂದೂರು ಗಂಭೀರ ಆರೋಪ ಮಾಡಿದ್ದಾರೆ. 6 ಎಕರೆ ಜಮೀನು ಹೊಂದಿರುವ ಸರಕಾರಿ ಆಸ್ಪತ್ರೆಯುನ ಪುತ್ತೂರು ನಗರದ ಹೃದಯ ಭಾಗದಲ್ಲಿದೆ. ಮುಖ್ಯಮಂತ್ರಿಯಿಂದ ಅಪರ ಮುಖ್ಯ ಕಾರ್ಯದರ್ಶಿಗೆ ಜಮೀನು ಮಂಜೂರು ಮಾಡಲು ಸೂಚನೆ ನೀಡಲಾಗಿದೆ.

30 ಸೆಂಟ್ಸ್ ಜಾಗದ ಮನವಿಯನ್ನು 10 ಸೆಂಟ್ಸ್ ಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಇಳಿಸಿದ್ದಾರೆ. ಜಿಲ್ಲಾಧಿಕಾರಿ ಕಛೇರಿಯಿಂದ ಪುತ್ತೂರು ತಹಶೀಲ್ದಾರ್ ಗೆ ರವಾನೆ ಮಾಡಲಾಗಿದೆ. ಸ.ನಂ. 131/14ಎ1 ರಲ್ಲಿ 80 ಸೆಂಟ್ಸ್ ಖಾಲಿ ಜಾಗವಿದ್ದು, ಸದ್ಯ ಟ್ರಸ್ಟ್ ಗೆ ಮಂಜೂರು ಮಾಡುವ ಕುರಿತ ದಾಖಲೆಗಳು ಪುತ್ತೂರು ತಹಶೀಲ್ದಾರ್ ಅಂಗಳದಲ್ಲಿದೆ.

ಗ

ಇಲಾಖಾ ಅಭಿಪ್ರಾಯ ಕೇಳುವಂತೆ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗೆ ಪತ್ರದ ಪ್ರತಿ ರವಾನೆಯಾಗಿದೆ. ಪಹಣಿ ಹಾಗೂ ನಕ್ಷೆಯ ಪ್ರತಿಯನ್ನ ಲಗತ್ತಿಸಿ ತಹಶೀಲ್ದಾರ್ ರವಾನಿಸಿದ್ದಾರೆ. ಶೀಘ್ರದಲ್ಲಿ ಇಲಾಖಾ ಅಭಿಪ್ರಾಯವನ್ನ ಕಚೇರಿಗೆ ಸಲ್ಲಿಸುವಂತೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ. ಪುತ್ತೂರು ಸರ್ಕಾರಿ ಆಸ್ಪತ್ರೆಯನ್ನ ಹೈಟೆಕ್ ಆಸ್ಪತ್ರೆಯನ್ನಾಗಿ ಮಾಡಲು ಜಾಗ ಕಾಯ್ದಿರಸಲಾಗಿತ್ತು.

ಅಂದಿನ ಶಾಸಕ ಸಂಜೀವ ಮಠಂದೂರು ಆಸ್ಪತ್ರೆ ಸುತ್ತಮುತ್ತಲಿನ ಜಾಗ ಸುಪರ್ದಿಗೆ ಪಡೆದುಕೊಳ್ಳಲು ಸೂಚಿಸಿದ್ದರು. ಆದ್ರೆ ಈಗಿನ ಶಾಸಕ ಅಶೋಕ್ ಕುಮಾರ್ ರೈ ಖಾಸಗಿ ಟ್ರಸ್ಟ್ ಗೆ ನೀಡಲು ಸೂಚನೆ ನೀಡಿದ್ದಾರೆ. ಈ ಮೂಲಕ ಸರ್ಕಾರಿ ಆಸ್ಪತ್ರೆಯ ಜಾಗವನ್ನೇ ಕಬಳಿಸಲು ಹುನ್ನಾರ ಹೂಡಿದ್ದಾರೆ. ಮೆಡಿಕಲ್ ಕಾಲೇಜಿನ ಕನಸಿಗೂ ಕಾಂಗ್ರೆಸ್ ತನ್ನೀರೆರಚಿದೆ.

ಪ (1)

ಆಸ್ಪತ್ರೆಯ ಜಾಗವನ್ನ ಖಾಸಗಿ ಟ್ರಸ್ಟ್ ಗೆ ನೀಡುವ ವಿಚಾರಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. 10 ಸೆಂಟ್ಸ್ ಜಾಗ ಪ್ರೀಯದರ್ಶಿನಿ ಟ್ರಸ್ಟ್ ಗೆ ನೀಡಿದ್ದಲ್ಲಿ ಬಿಜೆಪಿಯಿಂದ ಹೋರಾಟ ನಡೆಯಲಿದೆ. ಪ್ರಿಯದರ್ಶಿನಿ ಟ್ರಸ್ಟ್ ಹೆಸರಿನಲ್ಲಿ ಕಾಂಗ್ರೇಸ್ ಕಛೇರಿ ನಿರ್ಮಿಸುವ ಲೆಕ್ಕಾಚಾರದಲ್ಲಿ ಕಾಂಗ್ರೇಸ್ ಇದೆ. ಮಂಗಳೂರಿನಲ್ಲಿರುವ ಕಾಂಗ್ರೇಸ್ ಕಛೇರಿಯೂ ಇದೇ ಪ್ರಿಯದರ್ಶಿನಿ ಟ್ರಸ್ಟ್ ಗೆ ಸಂಬಂಧಿಸಿದ ಜಾಗ. ಸರಕಾರಿ ಆಸ್ಪತ್ರೆಯ ಜಾಗದ ಕಬಳಿಕೆ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಚರ್ಚೆಗೆ ಗ್ರಾಸವಾಗಿದೆ.

Font Awesome Icons

Leave a Reply

Your email address will not be published. Required fields are marked *