ಮೈಸೂರು,ನವೆಂಬರ್,22,2024 (www.justkannada.in): ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಸಾಕಷ್ಟು ಸದ್ದು ಮಾಡುತ್ತಿದ್ದು ಇಂದು ವಕ್ಫ್ ಬೋರ್ಡ್ ಮತ್ತು ಸರ್ಕಾರದ ವಿರುದ್ದ ರಾಜ್ಯಾದ್ಯಂತ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸಿದೆ. ಅಂತೆಯೇ ಮೈಸೂರಿನಲ್ಲೂ ಬಿಜೆಪಿ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ವತಿಯಿಂದ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದು, ರಾಜ್ಯ ಸರ್ಕಾರದ ಹಗರಣ ವಿರುದ್ಧ ಪದಕಟ್ಟಿ ಹಾಡಿ ಆಕ್ರೋಶ ವ್ಯಕ್ತಪಡಿಸಿದರು.
ಒಂದಿಂಚೂ ಜಾಗವನ್ನ ವಕ್ಫ್ ಗೆ ಬಿಟ್ಟುಕೊಡಲು ನಾವು ಬಿಡಲ್ಲ- ಎಲ್.ನಾಗೇಂದ್ರ
ವಕ್ಫ್ ವಿವಾದ ಕುರಿತು ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಸರ್ಕಾರಿ ಶಾಲೆಗಳು, ಜಮೀನುಗಳನ್ನ ವಕ್ಫ್ ಆಸ್ತಿಯಾಗಿ ಬದಲಾವಣೆ ಮಾಡಲಾಗುತ್ತಿದೆ. ಇದಕ್ಕೆ ಮೂಲ ಕಾರಣ ಜಮೀರ್ ಅಹಮ್ಮದ್ ಖಾನ್. ಜಮೀರ್ ಅಹಮ್ಮದ್ ಬೆನ್ನಿಗೆ ನಿಂತಿರೋದು ಸಿಎಂ ಸಿದ್ದರಾಮಯ್ಯ. ಯಾವುದೇ ಕಾರಣಕ್ಕೂ ನಮ್ಮ ಒಂದಿಂಚು ಜಾಗವನ್ನ ವಕ್ಫ್ ಗೆ ಬಿಟ್ಟುಕೊಡಲು ನಾವು ಬಿಡಲ್ಲ. ಇದರ ವಿರುದ್ದ ನಮ್ಮ ಹೋರಾಟ ಇದ್ಧೇ ಇರುತ್ತದೆ. ಈ ಸರ್ಕಾರ ಯಾವಾಗ ಬೀಳುತ್ತೆ ಎಂದು ಹೇಳಲು ಸಾಧ್ಯವಿಲ್ಲ. ನಾಳಿನ ಚುನಾವಣೆ ಫಲಿತಾಂಶ ಬಳಿಕ ಮಹತ್ತರ ಬದಲಾವಣೆ ಆಗುತ್ತದೆ. ಅವರದೇ ಸರ್ಕಾರದ ವಿರುದ್ದ ಸಚಿವರು ಮುಗಿ ಬೀಳುತ್ತಾರೆ ಎಂದು ಹೇಳಿದರು.
Key words: Waqf property, BJP, protest, Mysore