PIN TO PIN UPDATES: ಏಳನೇ ಸುತ್ತಿನ ಹಿನ್ನಡೆಯಿಂದ  ನಿಖಿಲ್‌ ಮತ್ತೆ ಏಳಲೇ ಇಲ್ಲ..! » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು, ನ.23,2024: (www.justkannada.in news)  ಆರಂಭದಲ್ಲಿ ಹಾವು ಏಣಿ ಆಟದಂತಿದ್ದ ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಏಳನೇ ಸುತ್ತಿನ ಬಳಿಕ ಒನ್‌ ಸೈಡ್‌ ಮ್ಯಾಚ್‌ ನಂತೆ ಗೋಚರಿಸಿತು.

ನಿಗಧಿತ ಸಮಯಕ್ಕೆ ಸರಿಯಾಗಿ ರಾಮನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಂ ಅನ್ನು  ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ನೇತೃತ್ವದಲ್ಲಿ ತೆರೆಯಲಾಯಿತು. ಮೊದಲಿಗೆ ಅಂಚೆ ಮತ ಎಣಿಕೆ ಪ್ರಾರಂಭ. ಒಟ್ಟು 457 ಅಂಚೆ ಮತಗಳ ಚಲಾವಣೆ ಆಗಿದ್ದವು.

ನಂತರ ಶುರುವಾದದ್ದೇ ಹಾವು – ಏಣಿ ಆಟ. ಎರಡನೇ ಸುತ್ತಿಗೆ ನಿಖಿಲ್ ಮುನ್ನಡೆ. ಯೋಗೇಶ್ವರ್ ಹಿಂದಿಕ್ಕಿ ಮುನ್ನಡೆ ಸಾಧಿಸಿದ ನಿಖಿಲ್. 128‌ಮತಗಳ ಮುನ್ನಡೆ. ನಾಲ್ಕನೇ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ನಿಖಿಲ್.‌ ಎಣಿಕೆ ಮುಕ್ತಾಯದ ವೇಳೆಗೆ  JDS- 20676 Cong-19521.  ಜೆಡಿಎಸ್ ಅಭ್ಯರ್ಥಿ ನಿಖಿಲ್‌ 1155 ಮತಗಳ ಲೀಡ್.‌

ಐದನೇ ಸುತ್ತಿನ ಮತ ಏಣಿಕೆ ಕಾರ್ಯದಲ್ಲೂ ಮುನ್ನಡೆ ಕಾಯ್ದುಕೊಂಡ ಮೈತ್ರಿ ಅಭ್ಯರ್ಥಿ ನಿಖಿಲ್. ಆಗ ನಿಖಿಲ್ ಗೆ 1302ಮತಗಳ ಮುನ್ನಡೆ. ಆರನೇ ಸುತ್ತಿನ ಮತ ಎಣಿಕೆಯಲ್ಲಿ 780 ಮತಗಳ ಮುನ್ನಡೆ ಕಾಯ್ದುಕೊಂಡ ನಿಖಿಲ್.

ಬದಲಾದ ಟ್ರೆಂಡ್‌ :

ಯಾಕೋ ನಮ್‌ ಟೈಮೇ ಸರಿಯಾಗಿಲ್ಲ…

ಚನ್ನಪಟ್ಟಣದಲ್ಲಿ ಮುಂದುವರಿದ ಹಾವು ಏಣಿ ಆಟ. 3663ಸಾವಿರ ಮತಗಳ ಬಾರಿ ಮುನ್ನಡೆ ಸಾಧಿಸಿದ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೀಶ್ವರ್.‌  ನಿಖಿಲ್ ಹಿಂದಿಕ್ಕಿ ಮುನ್ನಡೆ ಸಾಧಿಸಿದ ಯೋಗೆಶ್ವರ್. ನಗರ ಪ್ರದೇಶದ ಎಣಿಕಾ ಕಾರ್ಯದಲ್ಲಿ ಸಿಪಿವೈ ಮುನ್ನಡೆ.

8ನೇ ಸುತ್ತಿನ ಮತ ಎಣಿಕಾ ಕಾರ್ಯದಲ್ಲಿ 11,178 ಮತಗಳ ಭರ್ಜರಿ ಮುನ್ನಡೆ ಸಾಧಿಸಿದ ಸಿಪಿವೈ. ನಿಖಿಲ್ ಹಿಂದಿಕ್ಕಿ ಬಾರಿ ಅಂತರ ಕಾಯ್ದುಕೊಂಡ ಯೋಗೆಶ್ವರ್.

9ನೇ ಸುತ್ತಿನ ಮತ ಎಣಿಕಾ ಕಾರ್ಯ. ಮತ್ತೆ ಮುನ್ನಡೆ ಕಾಯ್ದುಕೊಂಡ ಯೋಗೆಶ್ವರ್. 15 ಸಾವಿರ ಮತಗಳ ಭರ್ಜರಿ ಮುನ್ನಡೆ. 9ನೇ ಸುತ್ತಿನ ಮತ ಎಣಿಕೆ ಮುಕ್ತಾಯದಲ್ಲಿ JDS- 37,286 , Cong-55,135, ಕಾಂಗ್ರೆಸ್ ಲೀಡ್- 17, 849. 9ನೇ ಸುತ್ತಿನಲ್ಲೂ ಭರ್ಜರಿ ಮುನ್ನಡೆ ಕಾಯ್ದುಕೊಂಡ ಸಿಪಿವೈ.

ದಳಪತಿಗಳ ಮುಂದೆ ಸಿಪಿವೈ ಕಮಾಲ್ :

10ನೇ ಸುತ್ತಿನ ಮತ ಎಣಿಕಾ ಕಾರ್ಯ. ಯೋಗೇಶ್ವರ್ ಗೆ ಭರ್ಜರಿ ಮುನ್ನಡೆ. 19799ಮತಗಳ ಮುನ್ನಡೆ ಕಾಯ್ದುಕೊಂಡ ಯೋಗೆಶ್ವರ್. ಪ್ರತಿ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಸಿಪಿವೈ.

10ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಕಾಂಗ್ರೆಸ್-61267, ಜೆಡಿಎಸ್-41468, ಕಾಂಗ್ರೆಸ್ ಲೀಡ್-19799

11ನೇ ಸುತ್ತಿನ‌ ಮತ ಎಣಿಕಾ ಕಾರ್ಯ. 23210 ಮತಗಳ ಭರ್ಜರಿ ಅಂತರ ಕಾಯ್ದುಕೊಂಡ ಯೋಗೆಶ್ವರ್.

ನಿರಂತರ ಮುನ್ನಡೆ ಸಾಧಿಸುತ್ತಿರೋ ಯೋಗೆಶ್ವರ್ :

12ನೇ ಸುತ್ತಿನ ಮತ ಎಣಿಕಾ ಕಾರ್ಯ. ಮತ್ತೆ ಮುನ್ನಡೆ ಕಾಯ್ದುಕೊಂಡ ಯೋಗೆಶ್ವರ್. 22, 127 ಮತಗಳ ಅಂತರದಿಂದ ಭರ್ಜರಿ ಮುನ್ನಡೆ. ನಗರ ಪ್ರದೇಶ ಮುಗಿಸಿ ಮತ್ತೆ ಗ್ರಾಮಾಂತರ ಪ್ರದೇಶದಲ್ಲೂ ಮುನ್ನಡೆ ಕಾಯ್ದುಕೊಂಡ ಸಿಪಿವೈ.

13ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಕಾಂಗ್ರೆಸ್- 78725, ಜೆಡಿಎಸ್-56177, ಕಾಂಗ್ರೆಸ್ ಲೀಡ್- 22,548.

14 ನೇ ಸುತ್ತಿನ ಮತ ಎಣಿಕೆಯಲ್ಲಿ ಕೈ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಗೆ 24, 310 ಮತಗಳ ಮುನ್ನಡೆ. 14 ನೇ ಸುತ್ತಿನ ಮತ ಎಣಿಕಾ ಕಾರ್ಯ ಮುಕ್ತಾಯ. ಕಾಂಗ್ರೆಸ್-84413, ಜೆಡಿಎಸ್-60103. ಕಾಂಗ್ರೆಸ್ ಲೀಡ್- 24310.

 

ಗೆಲುವಿನ ಸನಿಹದತ್ತ ಸಿಪಿವೈ :

ನಿರಂತರ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೆಶ್ವರ್. ಇನ್ನೂ ಕೇವಲ 6 ಸುತ್ತುಗಳ ಮಾತ್ರ ಎಣಿಕಾ ಕಾರ್ಯ ಬಾಕಿ. ಈಗಾಗಲೇ 1 ಲಕ್ಷದ 50 ಸಾವಿರ ಮತಗಳ ಎಣಿಕಾ ಕಾರ್ಯ ಪೂರ್ಣ. ಉಳಿದ 50600ಮತಗಳ ಎಣಿಕೆ ಬಾಕಿ.

15 ನೇ ಸುತ್ತಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೊಗೇಶ್ವರ್‌ ಗೆ  25, 026  ಮತಗಳ ಮುನ್ನಡೆ. 15ನೇ ಸುತ್ತಿನ ಮತ ಎಣಿಕಾ ಕಾರ್ಯ ಮುಕ್ತಾಯದ ವೇಳೆ ಕಾಂಗ್ರೆಸ್-89714, ಜೆಡಿಎಸ್- 64688. ಕಾಂಗ್ರೆಸ್ ಲೀಡ್-25026. ಮುಂದುವರಿದ ಸಿಪಿವೈ ಗೆಲುವಿನ ನಾಗಲೋಟ. ನಿರಂತರ ಮುನ್ನಡೆ ಸಾಧಿಸಿದ ಸಿಪಿವೈ.

16ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಕಾಂಗ್ರೆಸ್-94148, ಜೆಡಿಎಸ್-69259, ಕಾಂಗ್ರೆಸ್ ಲೀಡ್-24889

 

key words: chennapatna, byelection, congress candidate, c.p.yogeshwar, wins against, Nikhil kumaraswamy

 

 

Font Awesome Icons

Leave a Reply

Your email address will not be published. Required fields are marked *