MUDA: ಸಿಎಂ‌ ಹಾಗು ಸಿಎಂ ಕುಟುಂಬ ಟಾರ್ಗೆಟ್ . ಹಗರಣವೇ ನಡೆದಿಲ್ಲ- ಡಾ.ವೈಎಸ್ಆರ್ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

ಮೈಸೂರು, ನ.25,2024: (www.justkannada.in news)  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ  ಯಾವುದೇ ಕಾನೂನು ಬಾಹಿರ ನಿವೇಶನ ಹಂಚಿಕೆ ನಡೆದಿಲ್ಲ. ನಮ್ಮ ಜಮೀನು ವಶಕ್ಕೆ ಪಡೆದುಕೊಂಡಿದ್ದಕ್ಕೆ ಬದಲಿಯಾಗಿ 50 % ನಿವೇಶನ ನೀಡಿದ್ದಾರೆ. ಆದರೆ,  ಸುಳ್ಳು ಆರೋಪ ಮಾಡಿ ತಂದೆಯವರ ವರ್ಚಸ್ಸು ಕುಗ್ಗಿಸುವ ಯತ್ನ ನಡೆಸಿದರು. ಜತೆಗೆ ಕೇಂದ್ರ ಸರ್ಕಾರದ ಅಧಿಕಾರ ದುರ್ಬಳಕೆ ಮಾಡಿಕೊಂಡು , ರಾಜ್ಯಪಾಲರ ಮೂಲಕ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ವಿಫಲ ಯತ್ನ ನಡೆಸಿದರು. ಆದರೆ,  ಸತ್ಯ ನಮ್ಮ ಪರವಾಗಿರುವ ಹಿನ್ನೆಲೆ ನಮಗೆ ಗೆಲುವಾಗಲಿದೆ ಎಂದು ಸಿಎಂ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

“ ಮುಡಾ “  ಹಗರಣದ ಬಳಿಕ ಮೊಟ್ಟಮೊದಲ ಬಾರಿಗೆ “ ನ್ಯೂಸ್ ಫಸ್ಟ್” ವಾಹಿನಿ ಮೈಸೂರು ಪ್ರತಿನಿಧಿ ರವಿ ಪಾಂಡವಪುರ ಅವರಿಗೆ ನೀಡಿದ  EXCLUSIVE  ಸಂದರ್ಶನದಲ್ಲಿ ಡಾ. ಯತೀಂದ್ರ ಘಟನೆಯ ಇಂಚಿಂಚು ಮಾಹಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಈ  ವೇಳೆ ತಂದೆ ಸಿದ್ದರಾಮಯ್ಯ ಅವರ ನಿಶ್ಕಲ್ಮಷ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಇಡುವ ನಿಟ್ಟಿನಲ್ಲಿ ವಿಪಕ್ಷಗಳು ನಡೆಸಿದ ಕುತಂತ್ರ, ಇದರ ಪರಿಣಾಮ ಕುಟುಂಬದಲ್ಲಿ ಉಂಟಾದ ತಲ್ಲಣ, ಮನೆ ಮತ್ತು ಸಂಸಾರವೆಂದು ಜೀವಿಸಿದ್ದ ತಾಯಿ ಪಾರ್ವತಿ ಅವರು ಅನುಭವಿಸಿದ ಮಾನಸಿಕ ಯಾತನೆ ಬಗೆಗೆ ಮಾತನಾಡುತ್ತಾ ಭಾವುಕರಾದರು. ಒಟ್ಟಾರೆ ಸಂದರ್ಶನದ ಸಾರಾಂಶ ಹೀಗಿದೆ…

ಕೆಸರೆ ಭೂಮಿಯನ್ನ ನಮ್ಮ ಸೋದರ ಮಾವ ತೆಗೆದುಕೊಂಡಿದ್ದು ಗೊತ್ತಿರಲಿಲ್ಲ. ಆವಾಗ ನಾನು ಮೆಡಿಕಲ್ ಓದುತ್ತಿದ್ದೆ. ಈ ವಿಚಾರ ತಂದೆಯವರು ಕೂಡ ಗೊತ್ತಿರಲಿಲ್ಲ. ಆದರೆ ತಾಯಿ ಅವರಿಗೆ ಈ ವಿಚಾರ ತಿಳಿದಿರಬಹುದು. ನಮ್ಮ ತಾತ ತೀರಿ ಹೋದ ಬಳಿಕ ಆಸ್ತಿಯನ್ನ ಇಬ್ಬರು ಗಂಡು ಮಕ್ಕಳಿಗೆ ನೀಡಿದ್ದರು. ತಾಯಿ ಅವರಿಗೆ ಏನೂ ನೀಡಿಲ್ಲ ಎಂದು ನಮ್ಮ ಅಜ್ಜಿ ಅವರ ಆಸೆಯಂತೆ ಮಾವ ಈ ಜಮೀನು ನೀಡಿದ್ದರು.

ತಾಯಿ ಅವರಿಗೆ ಭೂಮಿ ಸಿಕ್ಕಾಗ ಅದು‌ ಮುಡಾ ವಶಕ್ಕೆ ಪಡೆದಿದ್ದು ಗೊತ್ತಿರಲಿಲ್ಲ. ಆ ವಿಚಾರ ತಿಳಿದಾಗ ಬದಲಿ ಜಮೀನು ಕೊಡಿ ಅಂತ ಕೇಳಿದರು. ಸೋದರ ಮಾವನಿಂದ ತಾಯಿಗೆ ಭೂಮಿ ಸಿಕ್ಕ ವಿಷಯ ತಂದೆ ಹಾಗು ನನಗೆ ಗೊತ್ತಿತ್ತು. ನಾನು ಶಾಸಕನಾಗಿದ್ದ ವೇಳೆ ಈ ವಿಚಾರ ಮುಡಾದಲ್ಲಿ ಪ್ರಸ್ತಾಪ ಬಂದಿರಲಿಲ್ಲ. ಆದರೆ ಯಾರ್ಯಾರು ಭೂಮಿ ಕಳೆದುಕೊಂಡಿದ್ದಾರೆ ಅವರಿಗೆ ಬದಲಿ ಜಾಗ ಕೊಡಿ ಅಂತ ಹೇಳಿದ ಸಭೆಯಲ್ಲಿ ಭಾಗಿಯಾಗಿದ್ದೆ. ಈವರಗೆ ನಾವ್ಯಾರು ಕೂಡ ಶಿಫಾರಸ್ಸು ಪತ್ರ ಬರೆದಿಲ್ಲ.

ಆದರೆ ತಾಯಿ ಅವರು ಬದಲಿ ಸೈಟ್ ನೀಡಿ ಎಂದು ಮನವಿ ಪತ್ರ ನೀಡಿದ್ದರು. 14 ಸೈಟ್ ವಾಪಸ್ ನೀಡಿದ ವಿಚಾರಕ್ಕೆ ಬೇಸರವಿದೆ.  ಕುತಂತ್ರದಿಂದ ತಂದೆಯವರನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ತಾಯಿ ಅವರಿಗೆ ಇದರಿಂದ ಬೇಸರವಾಯಿತು. ಈ ಸೈಟಿನಿಂದಲೇ ಇಷ್ಟೆಲ್ಲಾ ಆಗಿದ್ದು ಎಂದು ತುಂಬಾ ನೊಂದುಕೊಂಡರು.

ತಾಯಿ ವಿಚಾರಣೆ, ಭಾವುಕರಾದ ಯತೀಂದ್ರ :

ನಮ್ಮ ತಾಯಿ ಅಂತರ್ಮುಖಿ. ಮನೆಯಿಂದ, ರಾಜಕಾರಣದಿಂದ ದೂರ ಇರುವವರು. ಅಂತಹವರನ್ನ ರಾಜಕೀಯ ಕುತಂತ್ರಕ್ಕೆ  ಎಳೆ ತಂದಿದ್ದು ಬೇಸರ ತಂದಿದೆ. ಅವರು ರಾಜಕಾರಣಕ್ಕೆ ಎಂದೂ ಬಂದವರಲ್ಲ ಅವರ ಹೆಸರು ತಂದು ‌ಬೀದಿಗೆ ತರುವಂತೆ ಮಾಡಿದರು. ಲೋಕಾಯುಕ್ತದಲ್ಲಿ ಅವರು ವಿಚಾರಣೆ ಎದುರಿಸುವಂತೆ ಮಾಡಿದರು.

ತಾಯಿ ಅವರ ಲೋಕಾಯುಕ್ತ ವಿಚಾರಣೆ‌ ಬಗೆಗೂ ಕೂಡ ಕೆಲ ಅತೃಪ್ತ ಆತ್ಮಗಳು ಅನುಮಾನ ವ್ಯಕ್ತಪಡಿಸಿದವು. ಆದರೆ, ನಾನೇ ಖುದ್ದು ತಾಯಿ ಪಾರ್ವತಿ ಅವರನ್ನ ಲೋಕಾಯುಕ್ತ ಕಚೇರಿಗೆ ಕರೆದೊಯ್ದಿದ್ದೆ. ಅವರಿಗೆ ಸಂಕೋಚ ಇರುವ ಕಾರಣ ನಾನೇ ಕರೆದುಕೊಂಡು‌ ಹೋಗಿದ್ದೆ.

ತಂದೆಯವರ 40 ವರ್ಷದ ರಾಜಕಾರಣ ವಿಚಾರದಲ್ಲೂ ಕಪ್ಪು ಚುಕ್ಕೆ ವಿಪಕ್ಷಗಳು ಷಡ್ಯಂತ್ರ ರೂಪಿಸುತ್ತಿವೆ.  ಪರಿಣಾಮ ಲೋಕಾಯುಕ್ತದಲ್ಲಿ ಸುಳ್ಳು ದೂರು ದಾಖಲಾದರೂ ಕೂಡ ವಿಚಾರಣೆ ಎದುರಿಸಬೇಕಾಯ್ತು. ಯಾರು ಎಷ್ಟೇ ಆರೋಪ ಮಾಡಿದರೂ ನಾವು ಆರೋಪದಿಂದ ಮುಕ್ತರಾಗ್ತೀವಿ.

ಪ್ರಕರಣದಲ್ಲಿ ನಮ್ಮ ತಾಯಿಯವರನ್ನ ಎಳೆತರಲಾಯಿತು. ಮುಡಾ ಪ್ರಕರಣ ಕೇವಲ ರಾಜಕೀಯ ದುರುದ್ದೇಶದಿಂದ ಕೂಡಿದೆ. ರಾಜ್ಯಪಾಲರು ‌ಈ ಪ್ರಕರಣದಲ್ಲಿ ಯಾವುದೇ ವಿಚಾರಣೆಗೂ ಅನುಮತಿ‌ ನೀಡುವಂತಿಲ್ಲ. ಆದರೂ ಒತ್ತಡಕ್ಕೆ ಮಣಿದು ಅನುಮತಿ ನೀಡಿದರು. ಇದೇ ರೀತಿ ತನಿಖಾ ಸಂಸ್ಥೆಗಳು‌ ಕೂಡ ಪ್ರಭಾವ ಬೀರುತ್ತಿದೆ. ಪ್ರಕರಣಕ್ಕೆ ಸಂಬಂಧ ಇಲ್ಲದವರ ವಿಚಾರಣೆ ಮಾಡುತ್ತಿದ್ದಾರೆ. ಇದೇ ಕೇಸ್ ಅಲ್ಲದಿದ್ದರೂ ಸರಿ ಮತ್ಯಾವುದರಲ್ಲಾದರೂ  ತಂದೆಯವರನ್ನು ಸಿಲುಕಿಸುವ ಹುನ್ನಾರ ನಡೆಯುತ್ತಿರುವುದು ಸುಸ್ಪಷ್ಟ.

ಕೇಂದ್ರ ಸರ್ಕಾರದ ವಿರುದ್ಧ ಯಾರು  ಹೇಳಿಕೆಗಳನ್ನು ನೀಡುತ್ತಾರೋ , ಅವರ ಲೋಪದೋಷಗಳನ್ನು ಎತ್ತಿ ಜನತೆ ಮುಂದಿಡುತ್ತಾರೋ  ಅಂಥವರನ್ನ ಹಣಿಯುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಸುಳ್ಳು ಕೇಸ್ ಸೃಷ್ಠಿ ಮಾಡಿ ಅಂಥವರನ್ನು ಸಿಲುಕಿಸುವ ಯತ್ನ ಮಾಡಲಾಗುತ್ತಿದೆ. ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಇಂಥ ಕಾರ್ಯ ನಡೆಯುತ್ತಿದೆ. ಇದಕ್ಕೆ ತಾಜ ನಿದರ್ಶನ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಪ್ರಕರಣ.

ಈ ಹಿಂದೆ ಚಂದ್ರ ಬಾಬು ನಾಯ್ಡು ವಿಚಾರದಲ್ಲೂ ಇದೇ ನೀತಿ ಅನುಸರಿಸಿದ್ರು,  ಕೇಂದ್ರದ ಹಿಡಿದಲ್ಲಿರುವ ಸಿಬಿಐ ಸೇರಿ ತನಿಖಾ ಸಂಸ್ಥೆಗಳನ್ನ ಚೂ ಬಿಟ್ಟಿದ್ದಾರೆ.

ಟಾರ್ಗೆಟ್ ಸಿದ್ದರಾಮಯ್ಯ :

ಕೇಂದ್ರ ಸರಕಾರದ ವಿರುದ್ಧ ಗಟ್ಟಿ ದನಿಯಲ್ಲಿ ಮಾತನಾಡುವ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ  ಗಾದಿಯಿಂದ ಕೆಳಗಿಳಿಸಬೇಕು ಎಂಬ ದೃಢ ಸಂಕಲ್ಪವನ್ನು ಕೇಂದ್ರ ಸರಕಾರ ಮಾಡಿದೆ. ಈ ಕಾರಣಕ್ಕೆ ರಾಜ್ಯ ಬಿಜೆಪಿ ನಾಯಕರ ಮೂಲಕ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಚಾರಿತ್ರ್ಯ ಹರಣ ಮಾಡುವ ಕೆಲಸಕ್ಕೆ ಮುಂದಾಗಿದೆ. ಏನೂ ವಿಷಯ ಇಲ್ಲದಿದ್ದಾಗ ಸುಳ್ಳು ಹುಡುಕ್ತಾರೆ. ನೂರು ಬಾರಿ ಸುಳ್ಳನ್ನು ಹೇಳಿ ಅದನ್ನೇ ಸತ್ಯವೆಂದು ಬಿಂಬಿಸುವ ಕಾರ್ಯ ಮಾಡುತ್ತಿದ್ದಾರೆ.

 

ನಿಖಿಲ್‌ ಸೋಲಿಗೆ ಕುಮಾರಸ್ವಾಮಿಯೇ ಕಾರಣ :

ಚನ್ನಪಟ್ಟಣ ಉಪ ಚುನಾವಣೆ ವಿಚಾರ ಪ್ರಸ್ತಾಪಿಸಿದ ಡಾ.ಯತೀಂದ್ರ ಸಿದ್ದರಾಮಯ್ಯ, ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇಲ್ಲದಿದ್ದರೂ ಚುನಾವಣೆಗೆ ನಿಲ್ಲಿಸಿದರು. ಕೇವಲ ರಾಜಕಾರಣಕ್ಕಾಗಿ ನಿಖಿಲ್ ಅವರನ್ನ ಬಲಿಪಶು ಮಾಡಿದರು. ನಾನು ವರುಣಾಕ್ಕೆ ಸುಮ್ಮನೆ ಬರಲಿಲ್ಲ. ಸುಮಾರು‌ ಎರಡು ಅವಧಿಯವರಗೆ ಕ್ಷೇತ್ರದಲ್ಲಿ ಓಡಾಡಿದೆ. ಆ ಮೂಲಕ ಜನರ ಪ್ರೀತಿ ಗಳಿಸಿದೆ. ಜನರು ಆ ಕಾರಣಕ್ಕೆ ನಮ್ಮನ್ನ ಪ್ರೀತಿಸಿ ಸ್ವೀಕರಿಸಿದರು.

ಸಿಎಂ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರಿಯಲ್ಲ ಎಂಬ ವಿಚಾರ,  ಭವಿಷ್ಯವಾಣಿ‌ ನುಡಿಯಲು ಇವರು ಯಾರು. ನಮ್ಮ ತಂದೆಯವರು ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ.

key words: MUDA, CM, CM’s family target, no scam, Dr.Yathindra, YSR

SUMMARY:

MUDA: CM and CM’s family target. There was no scam: Dr YSR

FOR THE FIRST TIME SINCE THE MUDA SCAM, Dr.yathindra GAVE AN EXCLUSIVE INTERVIEW TO MYSURU ” NEWS FIRST CHANNEL” REPRESENTATIVE RAVI PANDAVAPURA. Yathindra revealed every bit of the incident. He spoke about the opposition’s conspiracy to tarnish the image of his father Siddaramaiah, the resulting turmoil in the family and the mental agony suffered by his mother Parvathy, who lived as home and family. Here is the summary of the overall interview.

Font Awesome Icons

Leave a Reply

Your email address will not be published. Required fields are marked *