ಒಕ್ಕಲಿಗರು ಮುಸ್ಲೀಮರು ಒಟ್ಟಾಗಿರಬೇಕು: ಶಾಸಕ ಜಿಟಿಡಿ ಭೇಟಿಯಾಗಿ ಹುಟ್ಟುಹಬ್ಬದ ಶುಭಕೋರಿದ ಸಿಎಂ ಇಬ್ರಾಹಿಂ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ನವೆಂಬರ್,25, 2024 (www.justkannada.in): ಉಚ್ಚಾಟಿತ  ಜೆಡಿಎಸ್  ನಾಯಕ ಸಿಎಂ ಇಬ್ರಾಹಿಂ ಇಂದು ಮೈಸೂರಿನಲ್ಲಿ ಶಾಸಕ ಜಿ.ಟಿ ದೇವೇಗೌಡರನ್ನ ಭೇಟಿಯಾಗಿ ಅವರಿಗೆ ಹುಟ್ಟುಹಬ್ಬದ ಶುಭಕೋರಿದರು.

ಶಾಸಕ ಜಿಟಿ ದೇವೇಗೌಡರ ನಿವಾಸಕ್ಕೆ ಆಗಮಿಸಿದ ಸಿಎಂ ಇಬ್ರಾಹಿಂ ಈ ವೇಳೆ ಜಿಟಿ ದೇವೇಗೌಡರು ಹುಟ್ಟು ಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಸುಮಾರು ಒಂದೂವರೆ ಎರಡು ಗಂಟೆ ಕಾದರು. ಬಳಿಕ ಮನೆಗೆ ಆಗಮಿಸಿದ ಜಿಟಿ ದೇವೇಗೌಡರಿಗೆ ಸಿಎಂ ಇಬ್ರಾಹಿಂ ಹುಟ್ಟು ಹಬ್ಬದ ಶುಭಕೋರಿದರು.

ಒಕ್ಕಲಿಗರು ಸಾಬ್ರು ಒಟ್ಟಾಗಿರಬೇಕು. ಇದು ಈಗಿನ ಸಂಬಂಧ ಅಲ್ಲ,ಟಿಪ್ಪು ಸುಲ್ತಾನ್ ಕಾಲದಿಂದಲೂ ಇರುವ ಸಂಬಂಧ ಎಂದು ಸಿಎಂ ಇಬ್ರಾಹಿಂ ಹಾಸ್ಯ ಚಟಾಕಿ ಹಾರಿಸಿದರು. ಉಭಯ ನಾಯಕರ ಭೇಟಿ ಭಾರಿ ಕುತೂಹಲ ಮೂಡಿಸಿದೆ.

ಬಿಜೆಪಿ ಜೊತೆ ಮದುವೆ ಆಗಿ ಜೆಡಿಎಸ್ ದಾರಿಯಲ್ಲಿ ನಿಂತಿದೆ

ಇದಕ್ಕೂ ಮುನ್ನ ಮಾಧ್ಯಮಗಳಿಗೆ ಮಾತನಾಡಿದ ಸಿಎಂ ಇಬ್ರಾಹಿಂ  ಜೆಡಿಎಸ್ ನಿಂದ ಅನೇಕರು ನೋವು ಉಂಡಿದ್ದಾರೆ. ಜೆಡಿಎಸ್, ಕುಮಾರಸ್ವಾಮಿ ಸರಿ ಆಗ್ತಾರೆ ಅಂತ ಇದ್ದೆ. ನಾನು ಇದ್ದಾಗ ಕುಮಾರಸ್ವಾಮಿ 20 ಸಾವಿರ ಅಂತರದಲ್ಲಿ ಗೆದ್ರು. ಈಗ ಕೇಂದ್ರ ಸಚಿವರಾಗಿ ಮಗನನ್ನು ಸೋಲಿಸಿದ್ದಾರೆ. ಈ ಹಿಂದೆ ದೇವೇಗೌಡರು ಇದ್ದಂತಹ ಸಿದ್ಧಾಂತಕ್ಕೆ ಬಂದ್ರೆ  ರಾಜ್ಯದ ಜನ ಕುಮಾರಸ್ವಾಮಿ ಕ್ಷಮಿಸುತ್ತಾರೆ. ಅನೇಕ ಜೆಡಿಎಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ರಾಜ್ಯದಲ್ಲಿ 3 ನೇ ಶಕ್ತಿ ಹುಟ್ಟು ಹಾಕಬೇಕಾಗಿದೆ. ಬಿಜೆಪಿ ಜೊತೆ ಮದುವೆ ಆಗಿ ಜೆಡಿಎಸ್ ದಾರಿಯಲ್ಲಿ ನಿಂತಿದೆ ಎಂದು ವ್ಯಂಗ್ಯವಾಡಿದರು.

ದೇವೇಗೌಡರಿಗೆ ಈ ವಯಸ್ಸಿನಲ್ಲಿ ಈ ರೀತಿ ಆಗಬಾರದಿತ್ತು ಮಕ್ಕಳಿಂದ ಈ ರೀತಿಯಾಗಿದೆ. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಈಗ ದೇವೇಗೌಡರಲಿಲ್ಲ. ಒಮ್ಮೆ ರಾಜ್ಯದ ಜನರ ಮುಂದೆ ತಪ್ಪಾಗಿದೆ ಅಂತ ಹೇಳಲಿ. ಜಿಟಿಡಿ  ಹುಣಸೂರಿನಲ್ಲಿ ಮಗನನ್ನು ಗೆಲ್ಲಿಸಿದ್ದಾರೆ. ಕೋರ್ ಕಮಿಟಿ ಅಧ್ಯಕ್ಷರೂ ಆಗಿದ್ದಾರೆ. ಅವರನ್ನು ಕೇಳದೆ ಹೇಳದೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಜೆಡಿಎಸ್ ಮನೆಗೆ ಬೆಂಕಿ ಬಿದ್ದಿದೆ. ರಾಮನಗರ ಮಂಡ್ಯ ಇಂತ ಕಡೆನೇ ಸೋತರೆ ವಿಜಯಪುರ ಗೆಲ್ತಾರಾ? ರಾಮನಗರದಲ್ಲಿ ಗೌಡರ ವೋಟು ನಿಖಿಲ್ ಗೆ ಹೋಗಿಲ್ಲ. 20 ಸಾವಿರ ಇಕ್ಬಾಲ್ ಹುಸೇನ್ ಗೆ ಹೋಯ್ತು. ಕಳೆದ ಚುನಾವಣೆಯಲ್ಲಿ ಸಾಬ್ರು ವೋಟಿಂದ ಕುಮಾರಸ್ವಾಮಿ ಗೆದ್ದಿದ್ದು ಎಂದರು.

ಮುಡಾ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ,ಬಿಜೆಪಿ ಅವರೇ ಸೈಟು ಕೊಟ್ಟಿದ್ದು. ಜಾಗ ನಂದು ಇದ್ರೆ ಕೊಡಿ, ಇಲ್ಲಾಂದ್ರೆ ತಗೊಳಿ ಅಂತ ಸಿಎಂ ಹೇಳಬಹುದಿತ್ತು. ಆದ್ರೆ ಅವರು ಆ ರೀತಿ ಹೇಳಲಿಲ್ಲ. ಬಿಜೆಪಿಗೆ ರಾಜಕೀಯ ಮಾಡಲು ವಿಷಯ ಇಲ್ಲ ಅಂತ ಈಗ ಮುಡಾ, ವಕ್ಫ್ ಅಂತ ಹೊರಟಿದ್ದಾರೆ. ಬಿಜೆಪಿ, ಜೆಡಿಎಸ್ ನ ಲವ್ ಮಾಡಿ ಬಸ್ ಸ್ಟ್ಯಾಂಡ್ ಅಲ್ಲಿ ಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು.

Key words: CM Ibrahim, meets, MLA, GT Devegowda

Font Awesome Icons

Leave a Reply

Your email address will not be published. Required fields are marked *