ಗೆದ್ದ ಕೂಡಲೇ ಒಕ್ಕಲಿಗ ನಾಯಕನಾಗಲ್ಲ ಎಂದ ಆರ್.ಅಶೋಕ್ ಗೆ ಟಾಂಗ್ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ನವೆಂಬರ್,25,2024 (www.justkannada.in): ಗೆದ್ದ ಕೂಡಲೇ ಒಕ್ಕಲಿಗ ನಾಯಕನಾಗಲ್ಲ ಎಂಬ ವಿಪಕ್ಷ ನಾಯಕ ಆರ್.ಅಶೋಕ್  ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

ವಿಕಾಸಸೌಧದಲ್ಲಿ ಇಂದು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಏನಪ್ಪ ಅಶೋಕ್, ನನಗಿಂತ ದೊಡ್ಡವನ ಚಿಕ್ಕವನ‌ ಗೊತ್ತಿಲ್ಲ ಅಶೋಕಣ್ಣ. ಹೌದಪ್ಪ ನನ್ನ ತಮ್ಮ ಸೋತಿದ್ದಾನೆ. ಸೋಲಿಸಿದ ಕೊಂಡಿಗಳು ಒಂದೊಂದೆ ಕಳಚಿಕೊಂಡವಲ್ಲ. ರಾಜರಾಜೇಶ್ವರಿ ನಗರದಲ್ಲಿ ಏನಾಯ್ತು..? ಚನ್ನಪಟ್ಟಣದಲ್ಲಿ ಏನಾಯ್ತು..? ಕನಕಪುರಕ್ಕೆ ಬಂದು ನಿಂತಲ್ಲ ಏನಾಯ್ತು..? ನನಗೆ ಡಿಚ್ಚಿ ಹೊಡಿತಿನಿ ಅಂತ ಬಂದಲ್ಲ ಡೆಪಾಸಿಟ್ ಬಂತ..? ಎಂದು ಕುಟುಕಿದರು.

ರೈತರಿಗೆ ಬಿಜೆಪಿ ವಕ್ಪ್ ನೋಟಿಸ್ ವಿಚಾರ ಕುರಿತು ಪ್ರತಿಕ್ರಿಯಸಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ನಾಯಕರಿಗೆ ಪ್ರಚಾರ ಬೇಕು. ಅವರ ಮುಖಗಳನ್ನು ಕನ್ನಡಿಯಲ್ಲಿ ನೋಡಿ ಎಂದು ಹೇಳಿದ್ದೇನೆ. ನಾವು ಸತ್ಯಾಂಶವನ್ನು ಬಿಚ್ಚಿಡುತ್ತೇವೆ. ಅವರದ್ದು ಗೋಮುಖ ವ್ಯಾಘ್ರತನ ಎಂದು ಟೀಕಿಸಿದರು.

ಚನ್ನಪಟ್ಟಣ ಚುನಾವಣೆ ವೇಳೆ ಪಹಣಿ ಸಂಗ್ರಹ ವಿಚಾರ, ಕೆಲವು ಹುಡುಗರು ರೈತರ ಪಹಣಿ ಸಂಗ್ರಹ ಮಾಡಿದ್ರು. ನನ್ನ ಹಳೇ ಕ್ಷೇತ್ರ ಅದು 2020ರಲ್ಲಿ ತಿದ್ದುಪಡಿ ಆಗಿದೆ. ಈಗ ಮನೆ ಮನೆಗೆ ಹೋಗಿ ಸಂಗ್ರಹ ಮಾಡುತ್ತಿದ್ದಾರೆ. ಆಂತರಿಕ ಸಮಸ್ಯೆ ಮುಚ್ಚೋಕೆ ಹೀಗೆ ಮಾಡುತ್ತಾರೆ. ನಾವು ಅವರ ಬಗ್ಗೆ ಬಿಚ್ಚಿಡುತ್ತೇವೆ. ನಮ್ಮತ್ತಿರ ದಾಖಲೆ ಇದೆ. ನಾವು ಚುನಾವಣೆ ಸಂದರ್ಭದಲ್ಲಿ ಸುಮ್ಮನಿದ್ದೆವು. ಅವರ ನಡುವೆ ಎಷ್ಟೇ ಗುಂಪು ಆಗಲಿ. ನಮ್ಮ ಪ್ರಕಾರ ಒಂದೇ  ಗುಂಪು. ಜೆಡಿ ಎಸ್ ಚಿಹ್ನೆ ಬೇರೆ ಅಷ್ಟೇ, ಎಲ್ಲಾ ಒಂದೇ ಗುಂಪು ಎಂದರು.

ಮುಸ್ಲಿಂ ಓಟ್ ಕೈ ಕೊಟ್ಟ ಕಾರಣ ಚನ್ನಪಟ್ಟಣದಲ್ಲಿ ಸೋಲು ಎಂಬ ನಿಖಿಲ್ ಹೇಳಿಕೆ  ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್,  ಕುಮಾರಸ್ವಾಮಿಗೆ ಪಾಪ ಆ  ಜನ ಓಟ್ ಹಾಕಿದ್ದರು. ಬಿಜೆಪಿ ಜೊತೆಗೆ ಹೋಗಿರುವಾಗ ಏಕೆ ಮತ ಹಾಕ್ತಾರೆ. ಅವರು ಮುಸ್ಲಿಮರನ್ನು ನಂಬಿಲ್ಲ. ಅವರಿಗೆ ಸೀಟ್ ಕೊಟ್ರಾ.  ಮಂತ್ರಿ ಮಾಡಿದ್ರಾ, ಮೀಸಲಾತಿ ಕಿತ್ತು ಹಾಕಿದ್ದಾರೆ . ೪% ಮೀಸಲಾತಿ ಕಿತ್ತು ಹಾಕಿದ್ದಾರೆ. ಅವರ ಬಳಿ ಓಟ್ ಕೇಳುವ ಹಕ್ಕೇ ಇಲ್ಲ. ಈ ಬಗ್ಗೆ ನಿಖಿಲ್ ಅಲ್ಲ. ಇದರ ಬಗ್ಗೆ ದೇವೇಗೌಡರು ಮಾತನಾಡಬೇಕು. ನಾನು ಹೋದರೂ ಕಾಂಗ್ರೆಸ್ ಹೋಗಲ್ಲ. ಯಾರು ಹೋದರು ಕಾಂಗ್ರೆಸ್ ಹೋಗಲ್ಲ. ಕಾಂಗ್ರೆಸ್ ದೇಶವನ್ನು ವಿಭಜನೆ ಮಾಡಲು ಬಿಡಲ್ಲ ಎಂದರು.

Key words: DCM, DK Shivakumar, R. Ashok, Vokkaliga leader

Font Awesome Icons

Leave a Reply

Your email address will not be published. Required fields are marked *