ನಾನು ಜಿ.ಟಿ . ದೇವೇಗೌಡ, ಯಾರಿಗೂ ಹೆದರುವ ಮಗ ಅಲ್ಲ : ಬರ್ಥ್‌ ಡೇ ಬಾಯ್‌ ಉವಾಚ..! » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು, ನ.25,2024: (www.justkannada.in news) ಶಾಸಕ ಸಾ.ರಾ.ಮಹೇಶ್ ಚಾಮುಂಡಿಬೆಟ್ಟಕ್ಕೆ ಆಣೆ- ಪ್ರಮಾಣಕ್ಕೆ ಕರೆದ ವಿಚಾರ ನಾನು ಚಾಮುಂಡಿಬೆಟ್ಟಕ್ಕೂ ಬರಲ್ಲ, ಧರ್ಮಸ್ಥಳದ‌ ಮಂಜುನಾಥನ ಸನ್ನಿಧಿಗೂ ಬರಲ್ಲ ನಾನು ಯಾವುದೇ ಆಣೆ ಮಾಡಲ್ಲ ನಾನು ಯಾವಾಗಲೂ ಸತ್ಯವನ್ನೇ ಹೇಳ್ತೀನಿ

ಜೆಡಿಎಸ್‌ ಮಾಜಿ ಶಾಸಕ ಸಾ.ರ.ಮಹೇಶ್‌ ಸವಾಲಿಗೆ ಪ್ರತಿ ಸವಾಲ್ ಹಾಕಿದ ಜಿ.ಟಿ.ದೇವೇಗೌಡ.

ಏನು ಜಡ್ಜಾ..?

ಜಿಟಿ ದೇವೇಗೌಡರ ಅಕ್ಕನ ಮಗನ ಮುಡಾ ಸೈಟ್ ವಿಚಾರ. ಬಹಿರಂಗ ಚರ್ಚೆಗೆ ಸ್ನೇಹಮಯಿ ಕೃಷ್ಣ ಸವಾಲ್ ವಿಚಾರ. ಸ್ನೇಹಮಯಿ ಕೃಷ್ಣ ಏನು ಜಡ್ಜ್ ? ಅವನು ಕರೆದ ತಕ್ಷಣ ನ್ಯಾನಕೆ ಹೋಗ್ಬೇಕು. ನಾನು ಜಿಟಿ ದೇವೇಗೌಡ, ಯಾರಿಗೂ ಹೆದರುವ ಮಗ ಅಲ್ಲ. ಮೈಸೂರಿನಲ್ಲಿ ಶಾಸಕ ಜಿಟಿಡಿ ಹೇಳಿಕೆ.

ಇಬ್ರಾಹಿಂ ಕಳೆದ ವರ್ಷವೂ ನನಗೆ ವಿಶ್ ಮಾಡಿದ್ರು ಈ ವರ್ಷವೂ ಕೂಡ ಬಂದು ವಿಶ್ ಮಾಡಿದ್ರು. ಅಲ್ಪಸಂಖ್ಯಾತರ ಒಂದು ಸಭೆ ಅಂತ ಮೈಸೂರಿಗೆ ಬಂದಿದ್ರು. ಇಬ್ಬರು ಕುಳಿತು ಊಟ ಮಾಡಿದ್ದೇವೆ ವಕ್ಫ್ ಬೋರ್ಡ್ ಬಗ್ಗೆ ಕೇಳ್ದೆ. ಇದು ಹಿಂದಿನಿಂದಲೂ ಇದೇ . ಜಮೀರ್ ಹೇಳಿಕೆ ನಂತರ ಇದು ಹೊರ ಬಂದಿದೆ. ರೈತರು ಉಳುತ್ತಿರುವ ಭೂಮಿ ಅವರಿಗೆ ಸೇರಬೇಕು ಅಂತ ಸಿಎಂ ಜೊತೆ ಹೇಳಿದ್ದೀನಿ ಅಂತ ಹೇಳಿದ್ರು

ಜೆಡಿಎಸ್ ತೃತೀಯ ರಂಗ ಆಗತ್ತೆ ಎಂಬ ಹೇಳಿಕೆ ವಿಚಾರ :

ಎಲ್ಲ ಪಕ್ಷವನ್ನು ರಾಜ್ಯದ ಜನ ನೋಡಿದ್ದಾರೆ. ಹೊಸ ಪಕ್ಷವನ್ನು ಕಟ್ಟಬೇಕು ಅಂತ ಹೇಳಿದ್ರು. ಎಲ್ಲರ ಜೊತೆ ಮಾತಮಾಡುತ್ತೇನೆ ಅಂದ್ರು. ಶಾಸಕರಿಂದ ಪಕ್ಷ ಕಟ್ಟಲು ಆಗಲ್ಲ. ಜನ ಬೆಂಬಲ ಇದ್ರೆ ಪಕ್ಷ ಕಟ್ಟಬಹುದು ಜನರ ಅಭಿಪ್ರಾಯ ಒಲವು ನಿರ್ಧಾರದ ಎಲ್ಲವೂ ಆಗತ್ತೆ. ನಾನು ನಮ್ಮ ಯಾವೊಬ್ಬ ಶಾಸಕರ ಜೊತೆಯೂ ಮಾತನಾಡಿಲ್ಲ . ಯಾರು ನನ್ನ ಜೊತೆಯೂ ಮಾತನಾಡಿಲ್ಲ ಎಂದು ಜಿ.ಟಿ.ದೇವೇಗೌಡ ಹೇಳಿಕೆ.

ರಾಜಕೀಯ ನಿವೃತ್ತಿ:

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಾನು ಜಿ.ಟಿ .ದೇವೇಗೌಡರ ಕರೆ ಮಾಡಿ ಮಾತನಾಡಿದ್ದೆ ಎಂದರೆ ಇಂದೇ ರಾಜಕೀಯ ನಿವೃತ್ತಿ, ರಾಜೀನಾಮೆ ಕೊಡ್ತೀನಿ. ಮೈಸೂರಿನಲ್ಲಿ ಜಿಟಿ ದೇವೇಗೌಡ ಹೇಳಿಕೆ.

ಜಿಟಿ ದೇವೇಗೌಡ ಪ್ರಚಾರಕ್ಕೆ ಕೆರೆದಿದ್ದೇವೆ ಎಂಬ ಸಾರಾ ಹೇಳಿಕೆ ವಿಚಾರ, ಈ ಹಿಂದೆ ಒಮ್ಮೆ ಹುಷಾರಿಲ್ಲ ಬಾ ಮಾತಡು ಅಂದ್ರು. ಅದು ಎಲೆಕ್ಷನ್ ಗೂ ಮೊದಲು. ಚುನಾವಣೆ ಸಂದರ್ಭದಲ್ಲಿ ನಾನು ದೇವೇಗೌಡರೂ ಮಾತನಾಡಿಲ್ಲ . ಸುಮ್ಮನೆ ಸುಳ್ಳು ಹೇಳಬಾರದು. ಈ ಹಿಂದೆ ವಿಶ್ವನಾಥ್ ಸಾರಾ ಹೋಗಿದ್ದು ಮರೆತಿಲ್ಲ. ನಾನು ಹೋಗೋಕೆ ಆಗತ್ತಾ. ಸಾರಾ ಮಹೇಶ್ ಗೆ ಟಾಂಗ್ ಕೊಟ್ಟ ಜಿಟಿ ದೇವೇಗೌಡ.

ಸಿಪಿವೈ ಜತೆ ಮಾತು:

ಚುನಾವಣೆಗೂ ಮುನ್ನ ಯೋಗೇಶ್ವರ್ ಜೊತೆ ಮಾತನಾಡಿದ್ದೇನೆ. ಫಲಿತಾಂಶ ಬಂದ ನಂತರ ಮಾತನಾಡಿಲ್ಲ. ನಾನು ಯಾರು ಇಲ್ಲದಿದ್ದರೂ ರಾಜಕೀಯ ಮಾಡ್ತೀನಿ. ನನಗೆ ಯಾರ ಸಪೋರ್ಟ್ ಬೇಕಾಗಿಲ್ಲ.

key words: former minister C.M.Ibrahim, JDS MLA G.T.Devegowda. Mysore

SUMMARY: 

former minister C.M.Ibrahim meets JDS MLA G.T.Devegowda at Mysore today

Font Awesome Icons

Leave a Reply

Your email address will not be published. Required fields are marked *