ನಿರೀಕ್ಷಿತ ಮಟ್ಟದಲ್ಲಿಲ್ಲ ಅಡಿಕೆ ಫಸಲು; ಕೊಳೆ ರೋಗದಿಂದ ಕೃಷಿಕರು ಕಂಗಾಲು!

ದಕ್ಷಿಣ ಕನ್ನಡ : ಕರ್ನಾಟಕದ ಕರಾವಳಿ ಭಾಗದಲ್ಲಿ ಈ ಬಾರಿ ಅಡಿಕೆ ಫಸಲು ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ತೋಟಗಳಲ್ಲಿ ಅಡಿಕೆ ಮರದಲ್ಲಿ ಖಾಲಿ ಗೊನೆಗಳು ಕಾಣುತ್ತಿವೆ. ಇದಕ್ಕೆ ಭಾರಿ ಮಳೆ ಹಾಗೂ ಕೊಳೆ ರೋಗ ಕಾರಣ ಎನ್ನಲಾಗಿದೆ. ಪ್ರಸ್ತುತ 300 – 325 ರೂ. ದರವಿದೆ.

ಕರಾವಳಿ ಭಾಗದಲ್ಲಿ ಈ ಬಾರಿ ಅಡಿಕೆ ಫಸಲು ನಿರೀಕ್ಷಿತ ಮಟ್ಟದಲ್ಲಿಲ್ಲ. ಮಳೆಗಾಲದಲ್ಲಿ ಸುರಿದ ಭಾರಿ ಮಳೆಯಿಂದ ಹೆಚ್ಚಿನ ತೋಟಗಳು ಕೊಳೆರೋಗಕ್ಕೆ ತುತ್ತಾಗಿದ್ದು, ಇನ್ನೊಂದೆಡೆ ಮುಂಗಾರು ಪೂರ್ವ ಮಳೆಯೂ ಕೈ ಕೊಟ್ಟಿತ್ತು. ಆದರೆ ಮೇ ಕೊನೆ ವಾರದಲ್ಲಿ ಆರಂಭವಾದ ಮಳೆ ನಿರಂತರವಾಗಿ ಸುರಿದು ತೋಟಗಳಿಗೆ ಔಷಧ ಸಿಂಪಡಿಸಲು ಬಿಡುವು ನೀಡಿರಲಿಲ್ಲ.

ನದಿಗಳು ಹಲವಾರು ಬಾರಿ ತುಂಬಿ ಹರಿದ ಪರಿಣಾಮ ಅನೇಕ ಬಾರಿ ತೋಟಗಳು ಜಲಾವೃತವಾಗಿದ್ದವು. ಈ ಎಲ್ಲಕಾರಣದಿಂದ ಕೊಳೆ ರೋಗದಿಂದ ಫಸಲು ನಷ್ಟವಾಗಿದೆ. ಒಟ್ಟಿನಲ್ಲಿ ಫಸಲಿನ ಪ್ರಮಾಣ ಕಡಿಮೆಯಿದ್ದು ಅಡಿಕೆ ಬೆಳಗಾರರಿಗೆ ಸಾಕಷ್ಟು ಹೊಡೆತ ಬಿದ್ದಿದೆ. ತೋಟಗಳಲ್ಲಿ ಅಡಿಕೆ ಮರದಲ್ಲಿ ಖಾಲಿ ಗೊನೆಗಳು ಕಾಣುತ್ತಿವೆ ಹೊರತು ತುಂಬಿದ ಗೊನೆಗಳು ಕಾಣುತ್ತಿಲ್ಲ.

K (1)

ಸಾಮಾನ್ಯವಾಗಿ ನವೆಂಬರ್‌ ಕೊನೆ ವಾರದ ವೇಳೆ ಅಡಿಕೆ ಕೊಯ್ಲು ಆರಂಭವಾಗುತ್ತದೆ. ಆದರೆ ಈ ಬಾರಿ ಹೆಚ್ಚಿನ ಕೃಷಿಕರು ಅಡಿಕೆ ಕೊಯ್ಲಿನ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಕಾರಣ ತೋಟಗಳಲ್ಲಿ ಅಡಿಕೆ ಪ್ರಮಾಣ ತೀರಾ ಕಡಿಮೆ ಇದೆ. ಮಳೆಗಾಲದ ವೇಳೆ ಕಡಿಮೆ ಪ್ರಮಾಣದಲ್ಲಿ ಅಡಿಕೆ ಬಿದ್ದಿರುವುದರಿಂದ ಮಾರುಕಟ್ಟೆ, ಖಾಸಗಿ ವರ್ತಕರಿಗೂ ಹೊಸ ಅಡಿಕೆ ಆವಕ ಕಡಿಮೆ ಇದೆ.

ಪ್ರಸ್ತುತ 300 – 325 ರೂ. ದರ ಇದ್ದರೂ ಅಡಿಕೆ ಲಭ್ಯತೆ ಕಡಿಮೆ ಇದೆ. ಹಲವಡೆ ತೋಟಗಳಲ್ಲಿಎಲೆ ಚುಕ್ಕಿ ರೋಗ ಕಂಡು ಬಂದಿರುವುದು ಅಡಿಕೆ ಫಸಲಿಗೆ ಹೊಡೆತ ನೀಡಲು ಮತ್ತೊಂದು ಕಾರಣವಾಗಿದೆ. ಅಡಿಕೆ ಮರಗಳು ರೋಗದ ತೀವ್ರತೆಯಿಂದ ಧರಾಶಾಯಿಯಾಗುತ್ತಿವೆ. ಈ ರೋಗ ತಡೆಗಟ್ಟಲು ಕೃಷಿಕರು ಕ್ರಮಗಳನ್ನು ಕೈಗೊಂಡಿದ್ದರು ಅದು ಪರಿಣಾಮಕಾರಿಯಾಗಿ ಗೋಚರಿಸುತ್ತಿಲ್ಲ.

ನವೆಂಬರ್‌ ತಿಂಗಳ ಆರಂಭದಲ್ಲಿ ಉತ್ತಮ ಮಳೆ ಬಿದ್ದಿದ್ದು ಅಡಿಕೆ ಕೊಯ್ಲು ಮಾಡಲು ದಿನದೂಡುವಂತಾಗಿದೆ. ಮತ್ತೆ ಮಳೆಯಾದರೆ ಎಂಬ ಆತಂಕ ಕೃಷಿಕರಲ್ಲಿದೆ. ಮಳೆಗೆ ಅಡಿಕೆ ಒದ್ದೆಯಾದರೆ ಗುಣಮಟ್ಟ ಹಾಳಾಗುತ್ತದೆ ಹಾಗೂ ಇದನ್ನು ಹೆಚ್ಚು ಕಾಲ ದಾಸ್ತಾನು ಇಡಲು ಸಾಧ್ಯವಾಗುವುದಿಲ್ಲ. ಈ ಬಾರಿ ಫಸಲು ತೀರಾ ಕಡಿಮೆ ಇದೆ. ಕೊಳೆ ರೋಗವು ಬಲವಾದ ಹೊಡೆತ ನೀಡಿದೆ. ಈ ಕಾರಣದಿಂದ ಕೊಯ್ಲಿಗೆ ಅಡಿಕೆ ಪ್ರಮಾಣ ತುಂಬಾ ಕಡಿಮೆ ಇದೆ ಎಂದು ಕೃಷಿಕರ ಅಭಿಪ್ರಾಯ.

Font Awesome Icons

Leave a Reply

Your email address will not be published. Required fields are marked *