ವಿದ್ಯಾರ್ಥಿ ಮೇಲೆ ಭೀಕರ ಹಲ್ಲೆ: 9 ಮಂದಿ ವಿರುದ್ದ FIR ದಾಖಲು » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು, ನವೆಂಬರ್,28,2024 (www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದುಷ್ಕರ್ಮಿಗಳು ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೇಲೆ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಈ ಘಟನೆ ನಡೆದಿದೆ. ಸೈಯದ್ ಇಶಾನ್ ಹಲ್ಲೆಗೊಳಗಾದ ವಿದ್ಯಾರ್ಥಿ  ಟ್ಯೂಶನ್ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವಿದ್ಯಾರ್ಥಿ ಸೈಯದ್ ಇಶಾನ್ ಮೇಲೆ ದುಷ್ಕರ್ಮಿಗಳು ಮಚ್ಚು, ಲಾಂಗ್ ವಿಕೆಟ್ ಗಳಿಂದ ಹಲ್ಲೆ  ನಡೆಸಿದ್ದು ಪರಿಣಾಮ ವಿದ್ಯಾರ್ಥಿ ಸೈಯದ್ ಇಶಾನ್ ಗೆ ಗಂಭೀರ ಗಾಯಗಳಾಗಿದೆ.

ವಿದ್ಯಾರ್ಥಿ ಸೈಯದ್ ಇಶಾನ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಎರಡು ಬೆರಳು ಕಟ್ ಆಗಿ ಮತ್ತೊಂದು ಕೈಗೆ ಗಾಯಗಳಾಗಿವೆ. ಘಟನೆ ಸಂಬಂಧ ಖಾದೀರ್, , ನವಾಜ್, ಫಾರಜ್, ಮಸ್ತಾನ್ ಸೇರಿ 9 ಮಂದಿ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Key words:  attack,  student, FIR, Bangalore

Font Awesome Icons

Leave a Reply

Your email address will not be published. Required fields are marked *