ಚಾಮರಾಜನಗರ, ನ.28,2024: (www.justkannada.in news) ಇಲ್ಲಿನ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ವಿಧ್ಯಾರ್ಥಿ ನಿಲಯದಲ್ಲಿ ಅವ್ಯವಸ್ಥೆ ಖಂಡಿಸಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ವೈದ್ಯ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಡೀನ್ ದೌರ್ಜನ್ಯ ಹಾಗೂ ಸರ್ವಾಧಿಕಾರಿ ಧೋರಣೆ ಖಂಡಿಸಿದರು. ಈ ಸಂಬಂಧ ವೈದ್ಯ ವಿದ್ಯಾರ್ಥಿಗಳು ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದು ಅದರ ವಿವರ ಹೀಗಿದೆ…
ವಿದ್ಯಾರ್ಥಿನಿಲಯದಲ್ಲಿ ಈ ಮೊದಲು ಭೋಜನಾ ವ್ಯವಸ್ಥೆಯನ್ನು ವಿದ್ಯಾರ್ಥಿಗಳೇ “ಪರ್ಫೆಕ್ಸ್ ಸಿಸ್ಟಮ್ನಲ್ಲಿ” ನಿರ್ವಹಿಸುತ್ತಿದ್ದರು. ಆದರೆ ಡೀನ್ ಅಂಡ್ ಡೈರೆಕ್ಟರ್ ಆದ ಡಾ.ಹೆಚ್.ಜಿ.ಮಂಜುನಾಥ ಅವರು ಅಧಿಕಾರ ವಹಿಸಿಕೊಂಡ ನಂತರ ಈ ವ್ಯವಸ್ಥೆಗೆ ತಿಲಾಂಜಲಿ ನೀಡಿದರು.
ಪರಿಣಾಮ ಸ್ವಚ್ಛವಾಗಿ ಚೆನ್ನಾಗಿ ೩೬೦೦ ರೂ ನಲ್ಲಿ ನಡೆಯುತ್ತಿದ್ದ ಮೆಸ್ ಅನ್ನು ತನ್ನ ಸ್ವಾರ್ಥ ಹಾಗು ಸ್ವಲಾಭಕ್ಕೆ ವಿದ್ಯಾರ್ಥಿಗಳಿಂದ ಕಸಿದು ಕೊಂಡು ತಮಗೆ ಬೇಕಾದ , ತನ್ನ ತಾಳಕ್ಕೆ ಕುಣಿಯುವವರಿಗೆ ಯಾವುದೇ ಒಪ್ಪಿಗೆ ಪಡೆಯದೆ ಕಾಂಟ್ರಾಕ್ಟ್ ಕೊಟ್ಟಿರುತ್ತಾರೆ . ಆದರೆ, ಗುತ್ತಿಗೆದಾರ ಸಹ ಸರಿಯಾಗಿ ಆಹಾರ ಪದಾರ್ಥ ಪೂರೈಕೆ ಮಾಡುತ್ತಿಲ್ಲ. ಜತೆಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದು ಇದನ್ನು ಪ್ರಶ್ನಿಸಿದರೆ, ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುತ್ತೇನ ಹಾಗು ವಿದ್ಯಾರ್ಥಿ ನಿಲಯದಿಂದ ಹೊರ ಹಾಕುತ್ತೇನೆ ಎಂದು ಳಿ ಡೀನ್ ಡಾ. ಮಂಜುನಾಥ್ ಹೆದರಿಸುತ್ತಾರೆ.
ವಿದ್ಯಾರ್ಥಿ ನಿಲಯದ ಮುಖ್ಯ ನಿರೀಕ್ಷಕ ಮಹಾದೇವ ಸ್ವಾಮಿ, ಅಶ್ವಿನಿ, ಲಿಂಗರಾಜು ರವರಿಗೂ ಸಹ ಕಿರುಕುಳ ನೀಡಿ ಅವರು ರಾಜೀನಾಮೆ ನೀಡಿದ್ದಾರೆ. ಡಾ.ಮಂಜುನಾಥ್ ಅವರು ಡೀನ್ ಆದ ನಂತರ ಇವರ ಕಿರುಕುಳ ತಾಳಲಾರದೆ ವಾರ್ಡನ್ ಸಹ ರಾಜೀನಾಮೆ ನೀಡಿದ್ದಾರೆ.
ವಿದ್ಯಾರ್ಥಿಗಳ ಬ ೩೬೦೦ ರ ಮೆಸ್ ಬಿಲ್ ಕಟ್ಟಿಸಿಕೊಂಡು, ೩೯೦೦ರ ಪಾವತಿಸಿ ನಮ್ಮ ಮೆಸ್ ಖಾತೆಯ ಹಣವನ್ನು ಪೋಲು ಮಾಡಿರುತ್ತಾರೆ, ಜತೆಗೆ ವಿದ್ಯಾರ್ಥಿಗಳಿಗೂ ೩೯೦೦ ರೂ. ಪಾವತಿಸಲು ಒತ್ತಡ ಹೇರಿರುತ್ತಾರೆ. ಇವರು ವಿದ್ಯಾರ್ಥಿ ನಿಲಯದ ಮೆಸ್ ಅನ್ನು ಆಸ್ಪತ್ರೆಗೆ ಊಟ ಸರಬರಾಜು ಮಾಡುವ ಕಾಂಟ್ರಾಕ್ಟ್ ಅವರಿಗೆ ನೀಡಿದ್ದು, ಎರಡು ಕಡೆಯಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂಬುದು ವಿದ್ಯಾರ್ಥಿಗಳ ಆರೋಪ.
ತಕ್ಷಣವೇ ಡೀನ್ ಡಾ. ಮಂಜುನಾಥ್ ಅವರ ವಿರುದ್ಧ ಕ್ರಮ ಕೈಗೊಂಡು ವೈದ್ಯ ವಿದ್ಯಾರ್ಥಿಗಳು ಈ ಹಿಂದೆ ನಡೆಸುತ್ತಿದ್ದ ಪರ್ಫೆಕ್ಟ್ ಸಿಸ್ಟಮ್ ವ್ಯವಸ್ಥೆಯನ್ನೇ ಮತ್ತೆ ಜಾರಿಗೊಳಿಸಬೇಕು ಎಂದು ಪ್ರತಿಭಟನ ನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಡೀನ್ ದಬ್ಬಾಳಿಕೆ:
ಕಳೆದ ೩ ತಿಂಗಳುಗಳಿಂದ ವೈದ್ಯ ವಿದ್ಯಾರ್ಥಿಗಳಿಗೆ ಸಂಜೆ ತಿನಿಸು ನೀಡುತ್ತಿಲ್ಲ. ಕಳೆದ ೬ ತಿಂಗಳುಗಳಿಂದ ಸೂಕ್ತ ಆಹಾರ ನೀಡುತ್ತಿಲ್ಲ . ಧಿಡೀರ್ ಆಗಿ ಇಂದಿನಿಂದ ೧೦ ಗಂಟೆಗೆ ಮೆಸ್ ಕ್ಲೋಸ್ ಆಗುವುದು ಎಂದು ಆದೇಶ ಹೊರಡಿಸುತ್ತಾರೆ. ಸಮಯ ೯.೫೦ ರ ಸುಮಾರಿಗೆ ನಾವು ಮೆಸ್ ಇಂದ ಊಟ ಹಾಕಿಸಿಕೊಂಡು ರೂಮಿಗೆ ಬಂದಿದ್ದನ್ನು ಕಂಡು, ನಮ್ಮನ್ನ ಹುಡುಕಿಕೊಂಡು ಬಂದು, ಡೀನ್ ಹಾಗು ಅವರ ಸಹಚರರು ನಮ್ಮ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದನೆ ಹಾಗು ಶರ್ಟ್ ಕಾಲರ್ ಸಮೇತ ಹಿಡಿದು ನಮ್ಮ ಮೇಲೆ ರೌಡಿಗಳ ಹಾಗೆ ದಬ್ಬಾಳಿಕೆ ನಡೆಸಿದ್ದಾರೆ.
ಕಾಲೇಜಿಗೆ ಸಂಬಂಧಪಡದ ಹೊರಗಿನ ವ್ಯಕ್ತಿಗಳನ್ನು ಹಾಸ್ಟೆಲಿಗೆ ತಮ್ಮೊಡನೆ ಕರೆದುಕೊಂಡು ಬಂದು ನಮ್ಮ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ನಡೆಸಿರುವುದು ಆಘಾತ ಉಂಟು ಮಾಡಿದೆ ಎಂದು ಚಾ.ವೈ. ವಿ.ಸ ವಿದ್ಯಾರ್ಥಿಗಳ ಅಳಲು ತೋಡಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಬೇಡಿಕೆಗಳು :
೧) ಹಾಸ್ಟೆಲ್ ನಲ್ಲಿ ದಟ್ಟಣೆ ತಡೆಗಟ್ಟುವುದು
೨) ಪ್ರತಿ ರೂಂಗೆ ವಿದ್ಯಾರ್ಥಿಗಳ ಅನುಗುಣವಾಗಿ ಟೇಬಲ್, ಚೇರ್, ಗಳ ವ್ಯವಸ್ಥೆ.
೩) ಹಾಸ್ಟೆಲ್ ರೇನೊವೇಷನ್
೪) ಹಾಸ್ಟೆಲ್ ಸ್ವಚ್ಛತಾ ಕೆಲಸಗಳು
೫) ಸೂಕ್ತ ಭದ್ರತಾ ನಿಯಮಾವಳಿ ಮತ್ತು ವ್ಯವಸ್ಥೆ
೬) ನೀರು ಹಾಗು ವಿದ್ಯುತ್ ವ್ಯತ್ಯಯ ತಡೆಗಟ್ಟುವಿಕೆ
೭) ಹಾಸ್ಟೆಲ್ ತಿಂಗಳ ವೆಚ್ಚವನ್ನು ವಿದ್ಯಾರ್ಥಿಗಳ ಮುಂದೆ ಪಾರದರ್ಶಕತೆಯಿಂದ ಪ್ರದರ್ಶಿಸಬೇಕು
೮) ಇನರ್ಟನ್ ಡಾಕ್ಟರ್ ಅವರಿಗೆ ಸಮಯಾನುಸಾರವಾಗಿ ಸಂಬಳ ಪಾವತಿ
೯) ಊಟದ ಗುಣಮಟ್ಟದಲ್ಲಿ ಸುಧಾರಣೆ ಹಾಗು ಹೊರಗಿನವರಿಗೆ ಕಾಂಟ್ರಾಕ್ಟ್ ಗೆ ಮೇಸ್ ಅನ್ನು ನೀಡಬಾರದು.
೧೦) ಸ್ಪೂಡೆಂಟ್ ಯೂನಿಯನ್ ಕಟ್ಟಿಕೊಳ್ಳಲು ಅನುಮತಿ ನೀಡಬೇಕು
೧೧) ರಿಕ್ರಿಯೇಷನ್ ವ್ಯವಸ್ಥೆ – ಜಿಮ್, ಆಟದ ಮೈದಾನ, ಕ್ರೀಡಾ ವ್ಯವಸ್ಥೆ
೧೨) ಸೂಕ್ತ ಸೂಪರ್ವೈಸರ್ ಹಾಗು ಹಾಸ್ಟೆಲ್ ಮ್ಯಾನೇಜೆಂಟ್
೧೩) ಎಲ್ಲಾ ಕೆಟ್ಟಿರುವ ಹಳ ಹೀಟರ್, ಫ್ಯಾನ್, ಲೈಟು ಗಳ ಸೂಕ್ತ ರಿಪೇರಿ ಮಾಡಿಸಿಕೊಡಬೇಕು.
key words: CIMS Dean, Dr. Manjunath, harassment, medical students protest
SUMMARY:
CIMS Dean Dr. Manjunath’s harassment: Medical students protest
Chamarajanagar: Students of Chamarajanagar Medical Sciences Institute boycotted classes and staged a protest against the mess in the hostel.