ಡಾ ಶೋಭಿತ್ ರಂಗಪ್ಪ ಅವರಿಗೆ  ಪ್ರತಿಷ್ಠಿತ SBS-MKU ಜೀನೋಮಿಕ್ಸ್ ಪ್ರಶಸ್ತಿ ಪ್ರಧಾನ. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್





ಬೆಂಗಳೂರು,ನವೆಂಬರ್,29,2024 (www.justkannada.in): ಬಯೋಟೆಕ್ ರಿಸರ್ಚ್ ಸೊಸೈಟಿ ಆಫ್ ಇಂಡಿಯಾ (BRSI) ಯಿಂದ ಆಣ್ವಿಕ ಮತ್ತು ವ್ಯವಸ್ಥಿತ ಜೀವಶಾಸ್ತ್ರದಲ್ಲಿ ಅವರ ಅತ್ಯುತ್ತಮ ಕೊಡುಗೆಗಾಗಿ 2023 ನೇ ಸಾಲಿನ SBS-MKU ಜೀನೋಮಿಕ್ಸ್ ಪ್ರಶಸ್ತಿಯನ್ನು, ಆದಿಚುಂಚನಗಿರಿ ವಿಶ್ವವಿದ್ಯಾಲಯದ ನಿರ್ದೇಶಕ ಡಾ ಶೋಭಿತ್ ರಂಗಪ್ಪ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿಯು ಪ್ರಸ್ತುತ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ, ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಹೊಂದಿರುತ್ತದೆ.

ಈ ಪ್ರಶಸ್ತಿ ಪ್ರಧಾನ ಸಮಾರಂಭ ನವೆಂಬರ್ 26 ರಂದು ಪುಣೆಯ ಡಿ ವೈ ಪಾಟೀಲ್ ಬಯೋಟೆಕ್ನಾಲಜಿ ಮತ್ತು ಬಯೋಇನ್ಫರ್ಮ್ಯಾಟಿಕ್ಸ್ ಸಂಸ್ಥೆಯಲ್ಲಿ ನಡೆಯಿತು.  ನವದೆಹಲಿಯ ಏಮ್ಸ್‌ ನ ನಿವೃತ್ತ ಪ್ರಾಧ್ಯಾಪಕ ಪ್ರೊ ಟಿ.ಪಿ ಸಿಂಗ್ ಮತ್ತು ಇತರೆ ಪ್ರಸಿದ್ಧ ವಿಜ್ಞಾನಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. BRSI ಭಾರತದ ಹೆಸರಾಂತ ವಿಜ್ಞಾನಿಗಳಿಂದ ಸ್ಥಾಪಿತವಾದ 20 ವರ್ಷದ ರಾಷ್ಟ್ರೀಯ ಸೊಸೈಟಿಯಾಗಿದೆ.

ಡಾ.ಶೋಭಿತ್ ಅವರು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೋಭಿತ್ ಅವರು ಸುಮಾರು 100 ಸಂಶೋಧನಾ ಪ್ರಬಂಧಗಳನ್ನು ಮತ್ತು 8 ಪೇಟೆಂಟ್‌ಗಳನ್ನು ಕ್ಯಾನ್ಸರ್ ಸಂಶೋಧನೆಯಲ್ಲಿ ಪ್ರಕಟಿಸಿದ್ದಾರೆ.

Key words: Dr Shobhit Rangappa, SBS-MKU Genomics Award






Previous articleಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ, ಜೆಡಿಎಸ್ ಸೇಡಿನ ರಾಜಕಾರಣ ಸಲ್ಲದು- ಎಂ.ಕೆ.ಸೋಮಶೇಖರ್


Font Awesome Icons

Leave a Reply

Your email address will not be published. Required fields are marked *