ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಧರ್ಮ ಶಿಕ್ಷಣ ಆರಂಭೋತ್ಸವ

ಪುತ್ತೂರು : ಧರ್ಮದ ಅರಿವು ಪ್ರತಿಯೊಬ್ಬನಲ್ಲಿಯೂ ಇರಬೇಕು. ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು ನೀಡಿರುವ ಸಂದೇಶವನ್ನು ಅರ್ಥ ಮಾಡಿಕೊಂಡು ನಮ್ಮ ಜೀವನವನ್ನು ಪಾವನ ಮಾಡಬೇಕು. ಗೀತೆಯ ಸಾರವನ್ನು ಅರಿಯುವುದರ ಮೂಲಕವಾಗಿ ಯುವಪೀಳಿಗೆ ದಾರಿ ತಪ್ಪದಂತೆ ಮಾಡಬಹುದು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದಲ್ಲಿ ಧರ್ಮ ಶಿಕ್ಷಣ ತರಗತಿಗಳನ್ನು ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು

ವಿದ್ಯಾರ್ಥಿಗಳಲ್ಲಿ ತಮ್ಮದೇ ಆದ ಆಸೆ ಆಕಾಂಕ್ಷೆಗಳು ಇರುತ್ತವೆ. ಆದರೆ ಅಂತಹ ಆಸೆ ಆಕಾಂಕ್ಷೆಗಳ ಜೊತೆಗೆ ಧರ್ಮದ ಬಗ್ಗೆ ತಿಳಿಯುವ ಹಂಬಲವನ್ನು ರೂಢಿಸಿಕೊಳ್ಳಬೇಕು. ಬಾಂಗ್ಲಾದೇಶದಲ್ಲಿ ಆದ ದುರಂತ, ಮತಾಂತರಗಳು ನಮ್ಮ ಕಣ್ಣಮುಂದಿವೆ. ಕ್ಷಣಿಕ ಆಸೆ ಆಮಿಷಗಳಿಗೆ ಯಾರೂ ಬಲಿಯಾಗಬಾರದು. ನಮ್ಮ ಆಚಾರ ವಿಚಾಋಗಳೆಡೆಗಿನ ನಂಬಿಕೆಗಳು ಗಟ್ಟಿಯಾಗಬೇಕು ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಜೀವಶಾಸ್ತç ವಿಭಾಗದ ಉಪನ್ಯಾಸಕ ವಿಷ್ಣು ಪ್ರದೀಪ್ ಮಾತನಾಡಿ ಭೂಮಿಯಲ್ಲಿ ಮೊದಲಿಗೆ ಅಕಾರ, ಉಕಾರ, ಮಕಾರಗಳ ಸಂಯೋಗದಿಮದ ಹುಟ್ಟಿಕೊಂಡ ಓಂ ಎಂಬ ಶಕ್ತಿಯ ಆವಿರ್ಭಾವವಾಯಿತು. ಅದರಿಂದಲೇ ಎಲ್ಲವೂ ಸೃಷ್ಟಿಯಾದವು. ವೇದವೆಂದರೆ ಜ್ಞಾನ, ವೇದಗಳ ನಂತರದಲ್ಲಿ ೧೮ ಪುರಾಣಗಳು ತದನಂತರದಲ್ಲಿ ಸ್ಮೃತಿಗಳು, ಸೂತ್ರಗಳ ರಚನೆಯಾದವು ಎಂದು ತಿಳಿಸಿದರು.

ಪ್ರತಿಯೊಬ್ಬರೂ ದಿನನಿತ್ಯ ಕೆಲವೊಂದು ಆಚರಣೆಗಳನ್ನು ನಡೆಸಬೇಕು. ನಿತ್ಯ ಅನುಷ್ಟಾನಗಳನ್ನು ಮಾಡಬೇಕು. ಅದು ನಮ್ಮ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳನ್ನು ತರುತ್ತದೆ. ಆಚಾರ ವಿಚಾರಗಳನ್ನು ಅರಿತು ವ್ಯವಹರಿಸಬೇಕು. ಧರ್ಮದಲ್ಲಿ ಉಕ್ತವಾದ ಹತ್ತು ಲಕ್ಷಣಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಲ್ಲಿ ಪ್ರತಿಯೊಬ್ಬರ ಜೀವನ ಪಾವನವಾಗುವುದಕ್ಕೆ ಸಾಧ್ಯ. ನಾವು ನಿತ್ಯ ಆಚರಿಸುವ ಆಚರಣೆಗಳೇ ನಿಜವಾದ ಧರ್ಮ ಎಂದು ತಿಳಿಸಿದರು.

ವೇದಿಕೆಯಲ್ಲಿ ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ದೃತಿ ಹಾಗೂ ನಿಧಿ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Font Awesome Icons

Leave a Reply

Your email address will not be published. Required fields are marked *