ಫೆಂಗಾಲ್ ಸೈಕ್ಲೋನ್ ಎಫೆಕ್ಟ್:  ಜನಜೀವನ ಅಸ್ತವ್ಯಸ್ತ: ಎಷ್ಟು ದಿನ ಇರುತ್ತೆ ಮಳೆ? » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು, ಡಿಸೆಂಬರ್,2,2024 (www.justkannada.in): ಬಂಗಾಳಕೊಲ್ಲಿ ಎದ್ದಿರುವ’ಫೆಂಗಲ್ ಚಂಡಮಾರುತ’ ಭಾರೀ ಮಳೆ ಸುರಿಸುತ್ತಿದ್ದು,ತಮಿಳುನಾಡು ಪುದುಚೇರಿ  ಕರ್ನಾಟಕದಲ್ಲೂ ಅವಾಂತರ ಸೃಷ್ಠಿ ಮಾಡಿದೆ.

ಕರಾವಳಿ ಜಿಲ್ಲೆಗಳನ್ನು  ಬೆಂಗಳೂರು ಮತ್ತು ಕರ್ನಾಟಕ ಭಾಗದಲ್ಲಿ ಚಂಡಮಾರುತ ಎಫೆಕ್ಟ್ ಸಾಕಷ್ಟು ಪ್ರಮಾಣದಲ್ಲಿ ಉಂಟಾಗಿದೆ. . ನಿನ್ನೆ ತಮಿಳುನಾಡು ಭಾಗದಲ್ಲಿ ಹಾಗೂ ಸಮುದ್ರ ಮಟ್ಟದಲ್ಲಿ ಸೈಕ್ಲೋನ್ ಪ್ರಭಾವ ಮುಂದುವರಿದಿದ್ದು,  ಪರಿಣಾಮ ಚೆನ್ನೈ, ತಮಿಳುನಾಡು ಹಾಗೂ ಕರ್ನಾಟಕದ ಒಳನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ.

ಎರಡು ದಿಗನಳಲ್ಲಿ ಅಂದರೆ, ಡಿಸೆಂಬರ್ 4ರ ವೇಳೆಗೆ ಚಂಡಮಾರುತದ ತೀವ್ರ ಕುಂದುವ, ಗಾಳಿಯ ತೀವ್ರತೆಯಲ್ಲಿ ಇಳಿಕೆ ಆಗುವ ಲಕ್ಷಣಗಳು ಇವೆ ಎಂದು ಹವಾಮಾನ  ಇಲಾಖೆ ತಿಳಿಸಿದೆ.

ಇಂದಿನಿಂದ ಡಿಸೆಂಬರ್ 5ರವರೆಗೆ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ವಿಜಯಪುರ, ಬೆಳಗಾವಿ, ಬಳ್ಳಾರಿ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಹಾಸನ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಬಹದು. ಮುಂದಿನ 48 ಗಂಟೆಗಳ ಕಾಲ ಇದೇ ರೀತಿ ಮೋಡ ಕವಿದ ಚಳಿಯ ವಾತಾವರಣವೇ ಮುಂದುವರಿಯಲಿದೆ ಎಂದು ಐಎಂಡಿ ಮಳೆ ಮುನ್ಸೂಚನೆ ನೀಡಿದೆ.

Key words: Rain, Fengal Cyclone, effect, Karnataka

Font Awesome Icons

Leave a Reply

Your email address will not be published. Required fields are marked *