ಅರ್ಬಾಜ್ ಖಾನ್ನಿಂದ ವಿಚ್ಛೇದನ ಪಡೆದ ಬಳಿಕ ಮಲೈಕಾ, ಅರ್ಜುನ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. ಯಾವುದೇ ಪಾರ್ಟಿಯಲ್ಲೂ ಮಲೈಕಾ ಜೊತೆ ಅರ್ಜುನ್ ಇರುತ್ತಾರೆ. ಕೆಲ ದಿನಗಳಿಂದ ಅರ್ಜುನ್ ಕಪೂರ್ ಮಲೈಕಾ ಬ್ರೇಕಪ್ ಸುದ್ದಿ ಹರಿದಾಡಿತ್ತು.
ಮಲೈಕಾ ಅರೋರಾ ಜೊತೆ ಬ್ರೇಕ್ ಅಪ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವಾಗಲೇ ನಟಿ ಅರ್ಜುನ್ ಕಪೂರ್ ಜೊತೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಫೋಟೋ ವಿಡಿಯೋ ವೈರಲ್ ಆಗಿದೆ. ಅರ್ಜುನ್ ಕಪೂರ್ ಹಾಗೂ ಮಲೈಕಾ ಒಟ್ಟಿಗೆ ಲಂಚ್ ಡೇಟ್ಗೆ ಹೋಗಿದ್ದಾರೆ. ಈ ವೇಳೆ ಪಾಪರಾಜಿಗಳ ಕ್ಯಾಮೆರಾಗೆ ಸೆರೆ ಸಿಕ್ಕಿದ್ದಾರೆ. ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಇಬ್ಬರೂ ಬ್ರೇಕಪ್ ವದಂತಿಗೆ ಬ್ರೇಕ್ ಹಾಕಿದ್ದಾರೆ.
ಇವರಿಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದ್ದು ಇದೇ ವಿಚಾರಕ್ಕೆ ಈ ಜೋಡಿ ಅನೇಕ ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಇಬ್ಬರು ಮದುವೆ ಬಗ್ಗೆ ಮಾತಾಡಿದಾಗಲೆಲ್ಲಾ ಟ್ರೋಲ್ ಆಗಿದ್ದಾರೆ.