ನಟ ಶಾರುಖ್ ಖಾನ್ ಅಭಿನಯದ ‘ಜವಾನ್’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ. ವಿಶ್ವಾದ್ಯಂತ ಸಾವಿರಾರು ಪರದೆಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾಗೆ ಪಾಸಿಟಿವ್ ರಿವ್ಯೂ ಕೂಡಾ ಬಂದಿದೆ.
ಆದರೆ ಈಗ ಅಟ್ಲಿ ನಿರ್ದೇಶನದ ಚಿತ್ರಕ್ಕೆ ದೊಡ್ಡ ಶಾಕ್ ಸಿಕ್ಕಿದೆ. ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಜವಾನ್ ಮೂವಿಯ ಎಚ್ಡಿ ಕಾಪಿ ಆನ್ಲೈನ್ನಲ್ಲಿ ಲೀಕ್ ಆಗಿದೆ.
ಇದು ಚಿತ್ರತಂಡಕ್ಕೆ ಶಾಕ್ ಕೊಟ್ಟಿದೆ.
ಕೆಲವೊಂದು ಟೊರೆಂಟ್ ಸೈಟ್ಗಳಲ್ಲಿ ಜವಾನ್ ಸಿನಿಮಾ ಎಚ್ಡಿ ವರ್ಷನ್ ಲೀಕ್ ಆಗಿದೆ ಎಂಬ ಸುದ್ದಿ ಕೇಳಿ ಬಂದಿದೆ. ತಮಿಳ್ ರಾಕರ್ಸ್, ಟೆಲಿಗ್ರಾಂ, ಮೂವಿ ರೂಲ್ಜರ್ನಂತರ ಪೈರಸಿ ಸೈಟ್ನಲ್ಲಿ ಶಾರುಖ್ ಸಿನಿಮಾ ಹರಿದಾಡುತ್ತಿದೆ ಎಂದು ಫಿಲ್ಮ್ ಮೂಲಗಳು ವರದಿ ಮಾಡಿವೆ.