ʻಲಿಯೋʼ ಟ್ರೈಲರ್‌ ರಿಲೀಸ್‌ ಡೇಟ್‌ ಅನೌನ್ಸ್‌

ದಳಪತಿ ವಿಜಯ್‌ ಹಾಗೂ ಲೋಕೇಶ್ ಕನಕರಾಜ್ ಅವರ ಮುಂಬರುವ ಚಿತ್ರ ʻಲಿಯೋʼ ಪೋಸ್ಟರ್‌ಗಳು ಈಗಾಗಲೇ ಬಿಡುಗಡೆಗೊಂಡಿವೆ.

ಇದೀಗ ಮಹತ್ವದ ಸುದ್ದಿಯನ್ನು ಚಿತ್ರತಂಡ ಘೋಷಣೆ ಮಾಡಿದೆ. ಹಲವು ದಿನಗಳಿಂದ ವಿಜಯ್‌ ಫ್ಯಾನ್ಸ್‌ ಟ್ರೈಲರ್‌ ರಿಲೀಸ್‌ ಯಾವಾಗ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದರು. ಇದೀಗ ಉತ್ತರ ಸಿಕ್ಕಿದೆ. ಇದೇ ಅ.5ರಂದು ʻಲಿಯೋʼ ಟ್ರೈಲರ್‌ ಬಿಡುಗಡೆಯಾಗುತ್ತಿದೆ. ಪೋಸ್ಟ್‌ ಮೂಲಕ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಹಲವು ವರ್ಷಗಳ ನಂತರ ವಿಜಯ್ ಜತೆ ತ್ರಿಷಾ ನಾಯಕಿಯಾಗಿ ಈ ಸಿನಿಮಾ ಮೂಲಕ ಮಿಂಚಲಿದ್ದಾರೆ. ಕೀರ್ತಿ ಸುರೇಶ್, ಅರ್ಜುನ್, ಮಿಶಾ ಘೋಷಾಲ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ತಾರಾ ಬಳಗವಿದೆ. ಇತ್ತೀಚೆಗೆ ಕಾಶ್ಮೀರ ಮತ್ತು ಚೆನ್ನೈನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿತ್ತು. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಡಬ್ಬಿಂಗ್ ಕೆಲಸಗಳು ಆಗುತ್ತಿವೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

Font Awesome Icons

Leave a Reply

Your email address will not be published. Required fields are marked *