ಪುರುಷತ್ವದ ಸಂಕೇತಕ್ಕೆ ಹೇಳಿಮಾಡಿಸಿದ ವ್ಯಕ್ತಿ ಬಿಗ್‌ ಬಿ ಎಂದ ತಾಲಿಬಾನ್

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಖ್ಯಾತಿ ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರನ್ನು ಆರಾಧಿಸುವವರು ವಿದೇಶದಲ್ಲೂ ಇದ್ದಾರೆ. ಹಲವು ದಶಕಗಳಿಂದ ಅವರು ಚಿತ್ರರಂಗಕ್ಕೆ ತಮ್ಮ ಕಲಾ ಸೇವೆ ನೀಡುತ್ತಾ ಬರುತ್ತಿದ್ದಾರೆ. ಆದರೆ ಇದೀಗ ಅವರ ಬಗ್ಗೆ ತಾಲಿಬಾನ್​ ಪೋಸ್ಟ್ ಒಂದನ್ನು ಮಾಡಿದೆ. ಈ ಟ್ವೀಟ್ ವೈರಲ್ ಆಗುತ್ತಿದೆ.

‘ತಾಲಿಬಾನ್ ಪಿಆರ್​ ಡಿಪಾರ್ಟ್​ಮೆಂಟ್’ ಎಕ್ಸ್ ಖಾತೆ ಮೂಲಕ ಅಮಿತಾಭ್ ಬಚ್ಚನ್ ಇರುವ ಫೋಟೋ ಒಂದನ್ನು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್​ನಲ್ಲಿ ಅಮಿತಾಭ್ ಬಗ್ಗೆ ಬರೆಯಲಾಗಿದೆ. ‘ಅಮಿತಾಭ್ ಬಚ್ಚನ್ ಓರ್ವ ಭಾರತೀಯ ನಟ. ಪುರುಷತ್ವದ ಸಂಕೇತಕ್ಕೆ ಹೇಳಿಮಾಡಿಸಿದ ವ್ಯಕ್ತಿಯಾಗಿರುವ ಅವರನ್ನು ಅಫ್ಘಾನಿಸ್ತಾನದವರು ಇಷ್ಟಪಡುತ್ತಾರೆ. ಅವರು 1980ರಲ್ಲಿ ನಮ್ಮ ಭವ್ಯವಾದ ರಾಷ್ಟ್ರಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದ ಅಧ್ಯಕ್ಷ ನಜೀಬುಲ್ಲಾ ಅವರು ಅಮಿತಾಭ್ ಅವರನ್ನು ಗೌರವಿಸಿದ್ದರು’ ಎಂದು ಟ್ವಿಟರ್​ನಲ್ಲಿ ಬರೆಯಲಾಗಿದೆ.‌ ಈ ಪೋಸ್ಟ್​ಗೆ ಚಿತ್ರವಿಚಿತ್ರ ಕಮೆಂಟ್​ಗಳು ಬಂದಿವೆ.

Font Awesome Icons

Leave a Reply

Your email address will not be published. Required fields are marked *