ಈ ಬಾರಿಯ ಬಿಗ್ ಬಾಸ್ ಮೂರನೇ ವಾರಕ್ಕೆ ಸಾಕಷ್ಟು ಕುತೂಹಲ ಘಟ್ಟ ತಲುಪಿದೆ. ವರ್ತೂರು ಸಂತೋಷ್ ಅವರು ಏಕಾಏಕಿ ಎಗ್ಸಿಟ್ ಆಗಿದ್ದು ಮನೆಯವರಿಗೆ ಶಾಕಿಂಗ್ ಎನಿಸಿದೆ.
ಈ ಮಧ್ಯೆ ದೊಡ್ಮನೆಗೆ ಹಿರಿಯ ನಟಿಯೊಬ್ಬರ ಎಂಟ್ರಿ ಆಗಿದೆ. ಹೌದು ಕನ್ನಡದ ಹಿರಿಯ ನಟಿ ತಾರಾ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ದಸರಾ ಹಬ್ಬದ ಪ್ರಯುಕ್ತವಾಗಿ ತಾರಾ ಅವರನ್ನು ಮನೆಯೊಳಗೆ ಕಳುಹಿಸಲಾಗಿದೆ. ಹಬ್ಬವನ್ನು ಮನೆಮಂದಿ ಸಂಭ್ರಮದಿಂದ ಆಚರಿಸುತ್ತಿರುವ ಪ್ರೊಮೋವನ್ನು ವಾಹಿನಿಯು ಬಿಡುಗಡೆ ಮಾಡಿದೆ.
ಬಿಗ್ ಬಾಸ್ ಸ್ಪರ್ಧಿಗಳ ಜೊತೆಗೆ ಹಬ್ಬವನ್ನು ಆಚರಿಸಿರುವ ತಾರಾ, ಭರ್ಜರಿ ಮನೆರಂಜನೆಯನ್ನು ಮನೆಯೊಳಗೆ ಇದ್ದವರ ಜೊತೆ ಪಡೆದಿದ್ದಾರೆ. ಮುಖ್ಯದ್ವಾರದ ಮೂಲಕ ತಾರಾ ಬಿಗ್ ಬಾಸ್ಗೆ ಮನೆಗೆ ಬಂದರು. ಅವರ ಆಗಮನದಿಂದ ಎಲ್ಲರಿಗೂ ಖುಷಿ ಆಗಿದೆ. ಕೆಲವು ಫನ್ ಆ್ಯಕ್ಟಿವಿಟಿ ಮಾಡಲಾಗಿದೆ.