ಬ್ರೆಜಿಲ್: ಹೀರೋಯಿನ್ಗಳು ಮಾಡೆಲ್ ಗಳು ಸೌಂದರ್ಯ ಕಾಪಾಡಿಕೊಳ್ಳಲು ಹೆಚ್ಚು ಒತ್ತು ನೀಡುತ್ತಾರೆ. ಇಲ್ಲವಾದರೆ ಕಾಸ್ಮೆಟಿಕ್ ಮೇಕಪ್ ಗಳನ್ನು ಬಳಸುತ್ತಾರೆ. ಮೇಕಪ್ ಮಾಡದೆ ಹೊರ ಜಗತ್ತಿಗೆ ಕಾಣಿಸಿಕೊಳ್ಳುವುದು ತೀರಾ ಕಡಿಮೆಯ ವಿಚಾರ. ಇನ್ನು ಕೆಲವರಂತು ತಮ್ಮ ಸೌಂದರ್ಯವನ್ನು ಇನ್ನು ಹೆಚ್ಚಿಸಿಕೊಳ್ಳಲು ಸರ್ಜರಿಗಳನ್ನು ಸಹ ಮಾಡಿಸಿಕೊಳ್ಳುತ್ತಾರೆ. ತುಟಿ ಕೆನ್ನೆ ಮೂಗಿಗೆ ಸರ್ಜರಿ ಮಾಡಿಸಿಕೊಂಡು ಅಂದಹಚ್ಚಿಸಿಕೊಳ್ಳುತ್ತಾರೆ.
ಇದೇ ರೀತಿಯ ಪ್ರಯತ್ನದಲ್ಲಿದ್ದ ಪ್ರಸಿದ್ಧ ಸೆಲೆಬ್ರಿಟಿಯೊಬ್ಬರು ಸಣ್ಣ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಬ್ರೆಜಿಲ್ನ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ಲುವಾನಾ ಆಂಡ್ರೇಡ್ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ವೇಳೆ ನಾಲ್ಕು ಬಾರಿ ಹೃದಯಾಘಾತ ಆಗಿ ಮೃತಪಟ್ಟಿದ್ದಾರೆ. ಅವರಿಗೆ ಕೇವಲ 29 ವರ್ಷ ವಯಸ್ಸಾಗಿತ್ತು.
ಬ್ರೆಜಿಲಿಯನ್ ಟಿವಿ ಶೋ ‘ಪವರ್ ಕಪಲ್ 6′ ನಿಂದ ಲುವಾನಾ ಜನಪ್ರಿಯತೆ ಪಡೆದಿದ್ದ ಅವರು ಆಸ್ಪತ್ರೆಯಲ್ಲಿ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾದರು. ಈ ವೇಳೆ ಲುವಾನಾಗೆ ಉಸಿರಾಟದ ತೊಂದರೆ ಆಗಿದೆ. ಆ ಬಳಿಕ ನಾಲ್ಕು ಬಾರಿ ಹೃದಯಾಘಾತ ಆಗಿದೆ. ಅವರನ್ನು ವೈದ್ಯರು ತಕ್ಷಣ ಐಸಿಯು ವಾರ್ಡ್ಗೆ ಸ್ಥಳಾಂತರಿಸಿದ್ದಾರೆ. ಆದರೆ ವೈದ್ಯರು ಲುವಾನಾ ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ.
ಲುವಾನಾ ಸಾವಿಗೆ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಲುವಾನಾ ಆಂಡ್ರೇಡ್ ಸಾವು ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ.