ಬೆಂಗಾಲಿ ಹಾಡು ಹಾಡಿ ಸಂಕಷ್ಟಕ್ಕೆ ಸಿಲುಕಿಕೊಂಡ ಎಆರ್ ರೆಹಮಾನ್

ದೆಹಲಿ: ಇತ್ತೀಚೆಗೆ ಹಾಡುಗಳನ್ನು ರಿಮೇಕ್ ಮಾಡುವ ಟ್ರೆಂಡ್ ಜೋರಾಗಿ ನಡೆಯುತ್ತಿದ್ದು ಇದರಿಂದಾಗಿ ಕೆಲವು ವಿವಾದ ಸೃಷ್ಟಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಜನರು ಟೀಕೆ ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಅದೇ ವಿಷಯಕ್ಕೆ ಈಗ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಎಆರ್ ರೆಹಮಾನ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.

ಇಂದು  ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆದ  ಇಶಾನ್ ಖಟ್ಟರ್, ಮೃಣಾಲ್ ಠಾಕೂರ್  ಹಾಗೂ ಪ್ರಿಯಾಂಶು ನಟನೆಯ ‘ಪಿಪ್ಪಾ’ ಸಿನಿಮಾದ ರೆಹಮಾನ್ ಅವರ ‘ಕರಾ ಓಯಿ ಲೋಹ್ ಕಪತ್’ ಹಾಡು ಸುದ್ದಿ ಆಗುತ್ತಿದೆ.

ಈ ಚಿತ್ರವನ್ನು ರಾಜ ಕೃಷ್ಣ ಮೆನನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಎಆರ್ ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದ ‘ಕರಾ ಓಯಿ ಲೋಹ್ ಕಪತ್’ ಹಾಡು ಚರ್ಚೆ ಆಗುತ್ತಿದೆ. ಈ ಹಾಡಿಗೆ ತಮ್ಮದೇ ಶೈಲಿಯಲ್ಲಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ರೆಹಮಾನ್. ಇದನ್ನು ಅನೇಕರು ಟೀಕಿಸಿದ್ದಾರೆ. ಹಾಡಿನ ಉದ್ದೇಶವೇ ಹಾಳಾಗಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

‘ಕರಾ ಓಯಿ ಲೋಹ್ ಕಪತ್’ ಹಾಡು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್​ಚಂದ್ರ ಬೋಸ್ ಅವರ ಫೇವರಿಟ್ ಸಾಂಗ್ ಆಗಿತ್ತು. ಪ್ರತಿಭಟನೆಗೆ ಬಳಕೆ ಆಗುತ್ತಿದ್ದ ಪ್ರಭಾವಿ ಹಾಡು ಇದಾಗಿದ್ದು ವರ್ಷ ಕಳೆದಂತೆ ಅನೇಕರ ಸಂಗೀತ ಸಂಯೋಜಕರು ಈ ಹಾಡನ್ನು ತಮ್ಮದೇ ವರ್ಷನ್​ನಲ್ಲಿ ಕಂಪೋಸ್ ಮಾಡಿ ಹಾಡು ತನ್ನ ಹಳೆಯ ಸಾರ ಕಳೆದುಕೊಂಡಿದೆ. ಬಂಗಾಳದ ಜನರ ಭಾವನೆಗಳ ಜೊತೆ ರೆಹಮಾನ್ ಆಟವಾಡಿದ್ದಾರೆ ಎಂದು ಆರೋಪಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *