ಇಳೆಯರಾಜ ಬಯೋಪಿಕ್​ನಲ್ಲಿ ಧನುಷ್​ ನಟನೆ: ಫೋಟೋ ವೈರಲ್

ದೆಹಲಿ: ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ ಅವರ ಜೀವನದ ಕುರಿತು ಸಿನಿಮಾ ತಯಾರಾಗುತ್ತಿದೆ . ಈ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಹೊಸ ಸುದ್ದಿ ಹೊರಬಿದ್ದಿದೆ. ಏನೆಂದರೆಇಳೆಯರಾಜ  ಅವರ ಪಾತ್ರವನ್ನು ಖ್ಯಾತ ಕಾಲಿವುಡ್​ ನಟ ಧನುಷ್  ಅವರು ಮಾಡಲಿದ್ದಾರೆ.

ಈ ಪ್ರಾಜೆಕ್ಟ್​ ಅನೌನ್ಸ್​ ಆಗುತ್ತಿದ್ದಂತೆಯೇ ಇಳೆಯರಾಜ ಮತ್ತು ಧನುಷ್​ ಅವರು ಜೊತೆಯಾಗಿ ಇರುವ ಫೋಟೋಗಳು ವೈರಲ್​ ಆಗಿವೆ. ಟ್ರೇಡ್​ ಅನಲಿಸ್ಟ್​ ಮನೋಬಲ ವಿಜಯಬಾಲನ್​ ಅವರು ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಭಾರತೀಯ ಚಿತ್ರರಂಗಕ್ಕೆ ಇಳೆಯರಾಜ ಅವರು ನೀಡಿದ ಕೊಡುಗೆ ಅಪಾರ. 7 ಸಾವಿರಕ್ಕೂ ಅಧಿಕ ಹಾಡುಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿ, 1 ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಇಂಥ ಮಹಾನ್​ ಸಾಧಕನ ಜೀವನದ ವಿವರಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗುತ್ತಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

‘ಇಸೈಗ್ನಾನಿ’ ಎಂದು ಈ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಆ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಧನುಷ್​ ಅವರನ್ನು ಇಳೆಯರಾಜ ಅವರ ಪಾತ್ರದಲ್ಲಿ ನೋಡಲು ಫ್ಯಾನ್ಸ್​ ಕಾತರರಾಗಿದ್ದಾರೆ. ಮರ್ಕ್ಯುರಿ ಮೂವೀಸ್​ ಮತ್ತು ಕನೆಕ್ಟ್​ ಮೀಡಿಯಾ ಸಂಸ್ಥೆಗಳು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿವೆ.

Font Awesome Icons

Leave a Reply

Your email address will not be published. Required fields are marked *