ಪ್ರತಾಪ್‌ ನನ್ನು ತನ್ನೆಡೆಗೆ ಸೆಳೆಯಲು ಕಿವಿಮಾತು ಹೇಳಿದ ವಿನಯ್

ಬೆಂಗಳೂರು:   ಪ್ರತಾಪ್ ಆಟ ನೋಡಿ ವಿನಯ್​ಗೆ ಇಷ್ಟವಾಗಿದೆ. ಹೇಗಾದರೂ ಮಾಡಿ ಪ್ರತಾಪ್​ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರು ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದಕ್ಕಾಗಿ ಪ್ರತಾಪ್​ನ ಹೊಗಳುವ ಕೆಲಸ ಆಗುತ್ತಿದೆ. ಅವರು ಪ್ರತಾಪ್​ ಬಗ್ಗೆ ಪಾಸಿಟಿವ್ ಆಗಿ ಮಾತನಾಡುತ್ತಿದ್ದಾರೆ.

ಈಗ ತಂದೆಯ ವಿಚಾರಕ್ಕೆ ವಿನಯ್​ ಅವರು ಪ್ರತಾಪ್​ಗೆ ಕಿವಿಮಾತು ಹೇಳಿದ್ದಾರೆ. ತಂದೆಯನ್ನು ಭೇಟಿ ಮಾಡದೇ ಎಷ್ಟು ಸಮಯ ಆಯಿತು ಎಂದು ಪ್ರತಾಪ್​ಗೆ ಕೇಳಿದಾಗ, ಇದಕ್ಕೆ ಅವರು ಮೂರು ವರ್ಷ ಹೇಳಿದ್ದಾರೆ. ‘ನಾನು ತಂದೆ ತಾಯಿನ ಭೇಟಿ ಮಾಡುತ್ತೇನೆ. ಇದನ್ನು ಬಿಗ್ ಬಾಸ್​ಗೆ ಕೇಳಿದ್ದೇನೆ’ ಎಂದರು ಪ್ರತಾಪ್. ಆಗ ವಿನಯ್ ಗೌಡ ಅವರು ಹೊರ ಹೋದ ತಕ್ಷಣ ಅವರನ್ನು ಮೀಟ್ ಮಾಡುವಂತೆ ವಿನಯ್ ಅವರು ಪ್ರತಾಪ್​ಗೆ ಹೇಳಿದ್ದಾರೆ.

‘ನಾನು ನನ್ನ ತಂದೆಯನ್ನು 16 ವರ್ಷ ನೋಡಿರಲಿಲ್ಲ. ಆಮೇಲೆ ಅವರು ಸತ್ತು ಹೋದರು. ನೋಡಬೇಕು ಎಂದರೂ ಆಗಲಿಲ್ಲ. ಒಮ್ಮೆ ಕಳೆದುಕೊಂಡರೆ ಆ ಬಳಿಕ ಬೇಕು ಎಂದರೂ ಭೇಟಿ ಮಾಡೋಕೆ ಆಗಲ್ಲ. ಅವರು ಬಿಗ್ ಬಾಸ್​ನ ಖಂಡಿತವಾಗಿಯೂ ನೋಡುತ್ತಾ ಇರುತ್ತಾರೆ. ನಿನಗೆ ಉತ್ತಮ ಸಿಕ್ಕಿದ್ದು ಅವರಿಗೆ ಖುಷಿ ನೀಡಿರುತ್ತದೆ’ ಎಂದರು ವಿನಯ್. ಇದನ್ನು ಕೇಳಿ ಪ್ರತಾಪ್​ ಖುಷಿಪಟ್ಟಿದ್ದಾರೆ.

Font Awesome Icons

Leave a Reply

Your email address will not be published. Required fields are marked *