EXCLUSIVE :ಜೋಪಡಿಯಲ್ಲಿ ವಾಸ, ಬ್ಯಾಂಕ್‌ ಖಾತೆಯಲ್ಲಿ ಮಾತ್ರ ಕೋಟಿ..ಕೋಟಿ ರೂ…! – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

 

ಮೈಸೂರು, ಜ.೩೦, ೨೦೨೪ : (www̤̤ justkannada̤ in news) ;  ಕರ್ನಾಟಕ ಮತ್ತು ಕೇರಳದ ವಾಣಿಜ್ಯ ತೆರಿಗೆ ಅಧಿಕಾರಿಗಳು ಕೆಲ ದಿನಗಳ ಹಿಂದಷ್ಟೆ ಮೈಸೂರಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಕೆಲ ಬೆಚ್ಚಿ ಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ.

ನಕಲಿ ತೆರಿಗೆ ಇನ್‌ವಾಯ್ಸ್ ಮತ್ತು ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಸೃಷ್ಟಿಯಲ್ಲಿ ತೊಡಗಿರುವ 100 ಕ್ಕೂ ಹೆಚ್ಚು ನಕಲಿ ಸಂಸ್ಥೆಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ವಂಚನೆಯನ್ನು ಈ ಕಾರ್ಯಚರಣೆ ಬಹಿರಂಗ ಪಡಿಸಿತ್ತು.

  • ಅಲ್ಪ ಆಸೆಗೆ ಬಲೆಗೆ ಸಿಲುಕಿದ ಅಮಾಯಕರು :

ಕಾರ್ಯಚರಣೆ ವೇಳೆ ಪತ್ತೆಯಾದ ಪ್ರಮುಖ ಅಂಶವೆಂದರೆ,  ಜಿಎಸ್ಟಿ ವಂಚನೆ ಪ್ರಕರಣದ ಕಿಂಗ್‌ ಪಿನ್‌ ಮಹಮ್ಮದ್‌ ಸಿದ್ದಿಕ್ಕಿಯ  ಬಲೆಗೆ ಸಿಲುಕಿದ ಬಹುತೇಕರು ಅಲ್ಪಸಂಖ್ಯಾತ ಸಮುದಾಯದ ಅಮಾಯಕರು. ಇವರ ಬಡತನ ಹಾಗೂ ಅಜ್ಞಾನವನ್ನೇ ಬಂಡವಾಳ  ಮಾಡಿಕೊಂಡು ಈ ವಂಚನೆ ಜಾಲವನ್ನು ಎಣೆದಿರುವುದು ಸ್ಪಷ್ಟ.

  • ನಿಜಕ್ಕೂ ಶಾಕಿಂಗ್‌ ನ್ಯೂಸ್‌ :

ಜಸ್ಟ್‌ ಕನ್ನಡಗೆ ಲಭಿಸಿದ ಮಾಹಿತಿ ಪ್ರಕಾರ, ಚಿಂದಿ ಆಯುವ ವ್ಯಕ್ತಿ, ಗುಡಿಸಲಿನಲ್ಲಿ ವಾಸಿಸುವ ವ್ಯಕ್ತಿಗಳ ಬ್ಯಾಂಕ್‌ ಖಾತೆಯಲ್ಲಿ ಕೋಟಿಗಟ್ಟಲೇ ಹಣ ಜಮಾಗೊಂಡಿದೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಇವರನ್ನು ವಿಚಾರಣೆಗೆ ಒಳಪಡಿಸಿದಾಗ, ಖಾತೆಯಲ್ಲಿ ಇಷ್ಟೊಂದು ಬೃಹತ್‌ ಮೊತ್ತದ ಹಣ ಜಮಾಗೊಂಡಿರುವುದೇ ಅವರಿಗೆ ಅರಿವಿಲ್ಲ. ಈ ಅಮಾಯಕರ ದಾಖಲೆಗಳನ್ನು ದುರುಪಯೋಗ ಪಡಿಸಿಕೊಂಡು ಅಕ್ರಮ ಹಣದ ವ್ಯವಹಾರ ನಡೆಸಲಾಗುತ್ತಿತ್ತು ಎಂಬ ಶಂಕೆ ಅಧಿಕಾರಿಗಳದ್ದು.

ಕೋಟಿ ಹಣ ಹೊಂದಿದವನ ಮುರುಕಲು ಮನೆ

ದಾಖಲೆಗಳಲ್ಲಿನ ಮಾಹಿತಿ ಪ್ರಕಾರ ವ್ಯಕ್ತಿಗಳನ್ನು ಕರೆಸಿ ವಿಚಾರಣೆಗೊಳಪಡಿಸಿದಾಗ ಅವರು ನಡೆಸುತ್ತಿದ್ದ ಕೆಲಸಕ್ಕೂ, ಬ್ಯಾಂಕಿನಲ್ಲಿ ಜಮೆಗೊಂಡ ಹಣಕ್ಕೂ ಸಂಬಂಧವೇ ಇರಲಿಲ್ಲ. ಚಿಂದಿ ಆಯುತ್ತಿದ್ದ ವ್ಯಕ್ತಿ, ಬೀಡಿ ಕಟ್ಟುವ ಮಹಿಳೆ, ಖಾಸಗಿ ಕಂಪನಿಯ ರೆಪ್‌, ಇ ಕಾಮರ್ಸ್‌ ನ ಸಿಬ್ಬಂದಿಗಳು ಸಹ ಈ ವಂಚನೆ ಜಾಲದಲ್ಲಿ ಸಿಲುಕಿರುವ ಅಮಾಯಕರು.

ವಿಪರ್ಯಾಸವೆಂದರೆ ಬ್ಯಾಂಕುಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಬ್ಯೂಸಿನೆಸ್‌ ಕರೆಸ್ಪಾಂಡೆಂಟ್‌ ಸಹ ಈ ಜಾಲದಲ್ಲಿ ಸಿಲುಕಿದ್ದಾರೆ.  ತಮ್ಮ ಬ್ಯಾಂಕ್‌ ಖಾತೆಯಲ್ಲಿ ಹಣ ಜಮೆಗೊಂಡಿರುವುದು ಬಳಿಕ ಡ್ರಾ ಮಾಡಿಕೊಂಡಿರುವ ಬಗೆಗೂ ಅವರಿಗೆ ಮಾಹಿತಿ ಇಲ್ಲ,

ಜೋಪಡಿ ಮನೆ

ವಂಚನೆ ಜಾಲದಲ್ಲಿ ಸಿಲುಕಿದವರ ವಿಚಾರಣೆ ವೇಳೆ ಅವರ ವಾಸಸ್ಥಳಕ್ಕೆ ತೆರಳಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ. ಹತ್ತು ಬೈ ಹತ್ತು ಅಳತೆ ನಿವೇಶನದಲ್ಲಿ ಕೆಲವರು, ಜೋಪಡಿ, ಮುರಿದ ಮನೆಗಳಲ್ಲಿ ಮತ್ತೆ ಕೆಲವರು, ಬಾಡಿಗೆ ಮನೆಲ್ಲಿ ಉಳಿದವರು ವಾಸಿಸುತ್ತಿದ್ದರು.

    • ಕೇರಳಗೂ ವ್ಯಾಪಿಸಿದ ಜಾಲ :
ಮಾಸ್ಟರ್‌ ಮೈಂಡ್‌ ಮೊಹಮ್ಮದ್‌ ಸಿದ್ದಿಕ್ಕಿ

ಬಹು ರಾಜ್ಯ ಜಿಎಸ್‌ಟಿ ವಂಚನೆಯ ಮಾಸ್ಟರ್ ಮೈಂಡ್ ಮಹಮ್ಮದ್ ಸಿದ್ದಿಕ್ (ಕೇವಲ ೨೮ ವರ್ಷ್ಳು..!)ಎಂಬಾತನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ನಕಲಿ ದಾಖಲೆಗಳ ಮೂಲಕ ನಕಲಿ ಜಿಎಸ್ಟಿ  ನೋಂದಣಿಗಳನ್ನು ಪಡೆದ ಮತ್ತು ಕೇರಳ, ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ಸ್ಕ್ರ್ಯಾಪ್ ವ್ಯವಹಾರವನ್ನು ನಡೆಸಿದ್ದಕ್ಕೆ ಸಂಬಂಧಿಸಿದ ಆರೋಪ ಆತನ ಮೇಲಿದೆ.

ನಕಲಿ ತೆರಿಗೆ ಇನ್‌ವಾಯ್ಸ್‌ಗಳನ್ನು ಸಿದ್ಧಪಡಿಸುವಲ್ಲಿ ಸಿದ್ದಿಕ್ಕಿ ಪ್ರಮುಖ ಪಾತ್ರಧಾರಿ.  ಆರಂಭಿಕ ವಹಿವಾಟಿನ ನಂತರ ಆಯಾ ಸರ್ಕಾರಗಳಿಗೆ ಅನುಗುಣವಾದ ತೆರಿಗೆಗಳನ್ನು ಪಾವತಿಸದೆ ಐಟಿಸಿಯ ನಕಲಿ ಕ್ಲೈಮ್‌ಗಳನ್ನು ಮಾಡಲು ಡೀಲರ್‌ಗಳಿಗೆ ಅವಕಾಶ ಮಾಡಿಕೊಟ್ಟಿದ್ದ.

ಮೈಸೂರಲ್ಲಿ ಮಾತ್ರವಲ್ಲದೆ ನೆರೆ ರಾಜ್ಯ ಕೇರಳದಲ್ಲೂ ವಂಚನೆ ಜಾಲ ವ್ಯಾಪಿಸಿದ್ದ. ನಕಲಿ ಸಂಸ್ಥೆಗಳನ್ನು ಆರಂಭಿಸುವ ಸಲುವಾಗಿ ಈ ಜಾಲ ವಿಸ್ತರಿಸಿದ್ದ. ಈ ಸಂಬಂಧ ಅಗತ್ಯ ದಾಖಲೆಗಳನ್ನು ಕೆಎಸಾರ್ಟಿಸಿ ಬಸ್‌ ನಿರ್ವಾಹಕನ ಮೂಲಕವೇ ನಡೆಸುತ್ತಿದ್ದ. ಕಾರ್ಯಚರಣೆ ವೇಳೆ ಈ ಅಂಶ ಪತ್ತೆ ಹಚ್ಚಿದ ಅಧಿಕಾರಿಗಳು, ಕಂಡಕ್ಟರ್‌ ನನ್ನು ಸಹ ವಿಚಾರಣೆಗೆ ಒಳಪಡಿಸಿ ಆತನ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

  • ೧೦೦೦ ಕೋಟಿ ರೂ. ಅಕ್ರಮ ಪತ್ತೆ :
  • ಬ್ಯಾಂಕ್‌ ಖಾತೆಯಲ್ಲಿ ಕೋಟಿ ಹಣ ಜಮಾ

ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರ  ನೇತೃತ್ವದ ೧೦೦ಕ್ಕೂ ಹೆಚ್ಚು ಮಂದಿಯಿದ್ದ ತನಿಖಾ ತಂಡ ಕಾರ್ಯಚರಣೆ ನಡೆಸಿ,  ಮೈಸೂರು, ಮಂಗಳೂರು ಮತ್ತು ಕೇರಳದಲ್ಲಿ ಕೆಲವು ವ್ಯಾಪಾರಿಗಳು ನಡೆಸುತ್ತಿದ್ದ ವ್ಯವಸ್ಥಿತ ಕಾರ್ಯವನ್ನು ಬಿಚ್ಚಿಟ್ಟಿದೆ.

ವಂಚನೆಯ ಸಂಸ್ಥೆಗಳು ವಾಸ್ತವವಾಗಿ ಯಾವುದೇ ಸರಕುಗಳನ್ನು ತಲುಪಿಸದೆ ತೆರಿಗೆ ಇನ್‌ವಾಯ್ಸ್‌ಗಳನ್ನು ನೀಡುತ್ತಿದ್ದದ್ದು ವಾಣಿಜ್ಯ ತೆರಿಗೆ ಇಲಾಖೆ ಕಾರ್ಯಚರಣೆ ವೇಳೆ ಪತ್ತೆಯಾಗಿವೆ.

ಬೋಗಸ್ ಸಂಸ್ಥೆಗಳು ಒಟ್ಟಾರೆಯಾಗಿ ನಕಲಿ ಇನ್‌ವಾಯ್ಸ್‌ಗಳನ್ನು ನೀಡಿದ್ದು, ಇದು ಒಟ್ಟು  ಒಂದು ಸಾವಿರ ಕೋಟಿ ರೂ. ಗೂ ಅಧಿಕ. ನೂರಾರು ಕೋಟಿ ರೂ. ಅಕ್ರಮ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ ಮಾಡಿಕೊಂದ್ದಾರೆ. ಈ ಫಲಾನುಭವಿಗಳಿಂದ  ವಾಣಿಜ್ಯ ತೆರಿಗೆ ಅಧಿಕಾರಿಗಳು 180 ಕೋಟಿ ರೂ. ವಂಚನೆ ಪತ್ತೆ ಮಾಡಿದ್ದಾರೆ.

 * ಎಚ್ಚರಿಕೆ ಅಗತ್ಯ :

ಯಾವುದೇ ಹಣದ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆ ಅತ್ಯಗತ್ಯ. ಸ್ನೇಹಿತ, ಸಂಬಂಧಿ ಹೇಳಿದರು ಎಂದು ದಾಖಲೆಗಳನ್ನು ನೀಡಿ ಮೋಸ ಹೋಗಬೇಡಿ. ಇಂಥ ಪರಿಸ್ಥಿತಿ ಬಂದಾಗ ಕಾನೂನಾಗಲಿ ಅಥವಾ ಅಧಿಕಾರಿಗಳಾಗಲಿ, ಆರೋಪಿಗಳನ್ನು ಅಮಾಯಕರು ಎಂದು ಮಾಫಿ ಮಾಡಲಾರರು.

ನಿರ್ಲಕ್ಷ್ಯಕ್ಕೆ ತಕ್ಕ ಶಿಕ್ಷೆ ಅನುಭವಿಸಲೇ ಬೇಕಾಗುತ್ತದೆ. ಐಟಿ ಆಕ್ಟ್‌, ಮನಿ ಲ್ಯಾಂಡ್ರಿಂಗ್‌ ಅಡಿ ಪ್ರಕರಣ ದಾಖಲಾಗುತ್ತದೆ. ಆಗ ತೆರಿಗೆ ಮೋಸ ಮಾಡಿದಷ್ಟೆ ಪ್ರಮಾಣದ ಹಣ ದಂಡದ ರೂಪದಲ್ಲಿ ಕಟ್ಟಬೇಕು ಜತೆಗೆ ಸೆರೆವಾಸವನ್ನು ಅನುಭವಿಸಬೇಕು. ಆದ್ದರಿಂದ ಸಾರ್ವಜನಿಕರು ಜಿಎಸ್ಟಿ ವಂಚನೆ ಪ್ರಕರಣಗಳಿಂದ ದೂರು ಇರುವುದು ಎಚ್ಚರ. 

 Key words : gst ̲ froud ̲ mysore ̲ commercial ̲ tax ̲ 

Inter-State Fake GST Claim Racket,  100 Bogus Firms Detected In Mysuŗu  Mastermind Held

According to the information received by Just Kannada, crores of money have been deposited in the bank accounts of rag pickers and people living in huts.

Font Awesome Icons

Leave a Reply

Your email address will not be published. Required fields are marked *