ಆ್ಯಪಲ್ ಕಂಪನಿ ಇತ್ತೀಚೆಗೆ ಐಫೋನ್ 16 ಸಿರೀಸ್ ಪರಿಚಯಿಸಿದೆ. ಆದರೆ ದುಬಾರಿ ಬೆಲೆಯ ಐಫೋನ್ ಪರಿಚಯಿಸಿದ ಬಳಿಕ ಆ್ಯಪಲ್ ಕಂಪನಿ ಷೇರು ಮಾರುಕಟ್ಟೆಯಲ್ಲಿ ಬಹುದೊಡ್ಡ ನಷ್ಟದ ಹೊಡೆತವನ್ನು ಎದುರಿಸುತ್ತಿದೆ.
ಸೋಮವಾರದಂದು ಆ್ಯಪಲ್ ಕಂಪನಿ USD116 ಅಂದರೆ 9,71,515 ಕೋಟಿ ರೂಪಾಯಿಯನ್ನು ಕಳೆದುಕೊಂಡಿದೆ. 3 ಪ್ರತಿಶತದಷ್ಟು ಷೇರುಗಳನ್ನು ಕಳೆದುಕೊಂಡಿದೆ. ಐಫೋನ್ 16 ಬೇಡಿಕೆ ತಗ್ಗಿದ ಹಿನ್ನೆಲೆ ಈ ಕುಸಿತಕ್ಕೆ ಕಾರಣವಾಗಿದೆ. ವಿಶ್ಲೇಷಕರು ಹೇಳುವಂತೆ ಐಫೋನ್ 16ನಲ್ಲಿ ತಡವಾದ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ಗಳಿಂದ ಷೇರುಗಳ ಬೆಲೆಯಲ್ಲಿ ಕುಸಿತ ಕಂಡಿದೆ ಎಂದಿದ್ದಾರೆ. ಸದ್ಯ AI ಸಾಫ್ಟ್ವೇರ್ನಿಂದ ಐಫೋನ್ 16 ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ.
ಕಳೆದ ವರ್ಷ 15 ಪ್ರೊಗೆ ಹೋಲಿಸಿದರೆ ಈ ವರ್ಷ ಐಫೋನ್ 16 ಪ್ರೊ ಮಾದರಿ ಕಡಿಮೆ ಜಾಗತಿಕ ಶಿಪ್ಪಿಂಗ್ ಹೊಂದಿದೆ. ಐಫೋನ್ 16 ಪ್ರೊಗೆ ಶಿಪ್ಪಿಂಗ್ಗೆ ಬರೋಬ್ಬರಿ 14 ದಿನಗಳನ್ನು ತೆಗೆದುಕೊಂಡಿದೆ. ಕಳೆದ ವರ್ಷ ಐಫೋನ್ 15 ಪ್ರೊ 24 ದಿನಗಳಿಗಿಂತ ಕಡಿಮೆ ಶಿಪ್ಪಿಂಗ್ ದಿನವನ್ನು ಹೊಂದಿತ್ತು ಎಂದು ಡೇಟಾ ಹೇಳಿದೆ.