KARNATAKA BYPOLLS: “SON-RISE” ಗಾಗಿ ಕಾಯುತ್ತಿರುವ ಇಬ್ಬರು ಮಾಜಿ ಮುಖ್ಯಮಂತ್ರಿಗಳು » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು, ಅ.30,2024: (www.justkannada.in news) ಮಾಜಿ ಮುಖ್ಯಮಂತ್ರಿಗಳಾದ  ಎಚ್.ಡಿ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಇಬ್ಬರೂ ತಮ್ಮ ಪುತ್ರರ ರಾಜ್ಯ ವಿಧಾನಸಭೆಗೆ ಪ್ರವೇಶಕ್ಕೆ  ಕಾತುರದಿಂದ ಕಾಯುತ್ತಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ ಈ ಇಬ್ಬರ ತಂದೆ ಕರ್ನಾಟಕದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದವರು.

ಬಸವರಾಜ ಬೊಮ್ಮಾಯಿ ಅವರ ತಂದೆ ಬೊಮ್ಮಾಯಿ ಹಾಗೂ ಎಚ್‌,ಡಿ.ಕುಮಾರಸ್ವಾಮಿ ಅವರ ತಂದೆ ಎಚ್‌.ಡಿ.ದೇವೇಗೌಡ ರಾಜ್ಯ ಮುಖ್ಯಮಂತ್ರಿಗಾದಿಯನ್ನು ಅಲಂಕರಿಸಿದ್ದವರು. ಇವರ ಪುತ್ರರ ಬಳಿಕ ಇದೀಗ ಮೊಮ್ಮಕ್ಕಳು ವಿಧಾನಸಭೆ ಪ್ರವೇಶಕ್ಕೆ ಎದುರುನೋಡುತ್ತಿದ್ದಾರೆ.

ನವೆಂಬರ್ 13 ರಂದು ಚನ್ನಪಟ್ಟಣ ಮತ್ತು ಶಿಗ್ಗಾಂವ್ ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ  ನಡೆಯಲಿದೆ.  ಈ  ಇಬ್ಬರೂ ಜೂನ್‌ ನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಈ ಸ್ಥಾನಗಳನ್ನು ತೆರವು ಮಾಡಿದ್ದರು.

ಹೀಗಾಗಿ ಚನ್ನಪಟ್ಟಣ ಉಪಚುನಾವಣೆಯಲ್ಲಿ 36 ವರ್ಷದ ನಿಖಿಲ್ ಕುಮಾರಸ್ವಾಮಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ಶಿಗ್ಗಾಂವ್‌ನಲ್ಲಿ 35 ವರ್ಷದ ಭರತ್ ಬಿ.ಬೊಮ್ಮಾಯಿ ಕಣಕ್ಕೆ ಇಳಿದಿದ್ದಾರೆ.  ನಿಖಿಲ್‌ ಪ್ರಸ್ತುತ ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷ. ಭರತ್ ಈ ಚುನಾವಣೆ ಮೂಲಕ ರಾಜಕೀಯ ಪಾದಾರ್ಪಣೆ.

ಈ ಹಿಂದೆ ಎರಡು ಬಾರಿ ಸತತ ಸೋಲು ಕಂಡಿರುವ ನಿಖಿಲ್‌ಗೆ ಚನ್ನಪಟ್ಟಣದ ಹೋರಾಟ ನಿರ್ಣಾಯಕ. 2019 ರಲ್ಲಿ, ತಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ನಿಖಿಲ್ ತಮ್ಮ ಚೊಚ್ಚಲ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರು, ಈ ಕ್ಷೇತ್ರದಲ್ಲಿ ಜೆಡಿಎಸ್  ಗಣನೀಯವಾಗಿ ಹಿಡಿತ ಸಾಧಿಸಿದ್ದರು ಸಹ, ನಟಿ ಸುಮಲತಾ ಅಂಬರೀಶ್‌ ಅವರ ಪರ ಮತದಾರರು ತೀರ್ಪು ನೀಡಿದರು.

ಕಳೆದ ವರ್ಷ  ತವರು ಕ್ಷೇತ್ರ ರಾಮನಗರದದಿಂದ ನಿಖಿಲ್‌ ಸ್ಪರ್ಧಿಸಿ ಸೋಲುವ ಮೂಲಕ ಮತ್ತೊಂದು ಹೊಡೆತ ಅನುಭವಿಸುವಂತಾಯಿತು. ಎಚ್.ಡಿ.ಕುಮಾರಸ್ವಾಮಿ ಅವರು 2004 ರಿಂದ ಸತತ ನಾಲ್ಕು ಅವಧಿಗೆ ಇದೇ ಕ್ಷೇತ್ರದಿಂದ ಗೆದ್ದಿದ್ದರು.

2018 ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಪಕ್ಕದ ಚನ್ನಪಟ್ಟಣಕ್ಕೆ ತೆರಳಿದರು, ನಿಖಿಲ್ ಅವರ ತಾಯಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಪತಿ ನಂತರ ರಾಮನಗರ ಶಾಸಕಿಯಾಗಿ ಆಯ್ಕೆಯಾದರು.

ಹೀಗಾಗಿ ಆ ಸ್ಥಾನವು ಪಕ್ಷದ ಹಿಡಿತದಲ್ಲಿ ಉಳಿಯುತ್ತದೆ ಎಂದು ಖಚಿತಪಡಿಸಿಕೊಂಡರು. ಆದರೆ 2023 ರ ಚುನಾವಣೆಯಲ್ಲಿ, ಕಾಂಗ್ರೆಸ್ ಸ್ಥಾನವನ್ನು ವಶಪಡಿಸಿಕೊಂಡಿತು, ಇದು ನಿಖಿಲ್‌ಗೆ ಸತತ ಎರಡನೇ ನಿರಾಶೆಯನ್ನು ಉಂಟುಮಾಡಿತ್ತು.

ಈ ಬಾರಿ ಚೆನ್ನಪಟ್ಟಣದಲ್ಲಿ ಸಿಪಿ. ಯೋಗೇಶ್ವರ್, ಬಿಜೆಪಿಯ ಮಾಜಿ ಶಾಸಕ ಹಾಲಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ ನಿಖಿಲ್. ಈ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಗೊಂಡ ದಾಖಲೆ ಯೋಗೇಶ್ವರ್ ಅವರದ್ದು.

ಇದೇ ವೇಳೆ, ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ಅವರು ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ ಅವರನ್ನು ಎದುರಿಸುತ್ತಾರೆ, ಅದೇ ಎದುರಾಳಿ ಅವರ ತಂದೆ ಬಸವರಾಜ ಬೊಮ್ಮಾಯಿ ಅವರು 2023 ರಲ್ಲಿ ಸೋಲಿಸಿದ್ದರು.

ಬಸವರಾಜ ಬೊಮ್ಮಾಯಿ ಅವರು 54.95 ರಷ್ಟು ಮತಗಳನ್ನು ಗಳಿಸಿದರೆ, ಪಠಾಣ್ ಅವರು ಶೇಕಡಾ 35.18 ರಷ್ಟು ಮತಗಳನ್ನು ಗಳಿಸಿದ್ದರು. ಈ ನಡುವೆ ಶಿಗ್ಗಾಂವ್‌ನ ಮಾಜಿ ಶಾಸಕ ಸೈಯದ್‌ ಅಜಂಪೀರ್‌ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಕೈ ಅಭ್ಯರ್ಥಿಗೆ ಆತಂಕ ಉಂಟು ಮಾಡಿದ್ದರು. ಆದರೆ ಇದೀಗ ಕಡೆ ಗಳಿಗೆಯಲ್ಲಿ ನಾಮಪತ್ರ ಹಿಂಪಡೆದು ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಮಂಜುನಾಥ ಕುನ್ನೂರು ಸಹ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಭರತ್ ಬೊಮ್ಮಾಯಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದಾಗ ಬಿಜೆಪಿ ಕೂಡ ಶಿಗ್ಗಾಂವಿಯಲ್ಲಿ ಆರಂಭದಲ್ಲಿ ಭಿನ್ನಮತ ಎದುರಿಸಿತ್ತು. ‘ಈ ಬಾರಿಯ ಚುನಾವಣೆಯಲ್ಲಿ ಮಗನನ್ನು ಕಣಕ್ಕಿಳಿಸದಿರಲು ನಾನು ಮೊದಲು ನಿರ್ಧರಿಸಿದ್ದೆ, ಆದರೆ ಹೈಕಮಾಂಡ್ ನನ್ನನ್ನು ತೊಡಗಿಸಿಕೊಳ್ಳಲು ಒತ್ತಾಯಿಸಿತು ಮತ್ತು ನನ್ನ ಮಗನಿಗೆ ಟಿಕೆಟ್ ನೀಡಿತು. ಅವರು ಇಲ್ಲಿಯೇ ಕೆಲಸ ಮಾಡಲು ಸಲಹೆ ನೀಡಿದರು, ”ಎಂದು ಶಿಗ್ಗಾಂವಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಿಂಗಾಪುರ್ ಮ್ಯಾನೇಜ್‌ಮೆಂಟ್ ಯೂನಿವರ್ಸಿಟಿಯಿಂದ MBA ಪದವೀಧರರಾದ ಭರತ್ ಅವರು 2011 ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್‌ನಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

key words: KARNATAKA BYPOLLS, TWO FORMER CHIEF MINISTERS, WAITING FOR “SON-RISE”

SUMMARY:

KARNATAKA BYPOLLS: TWO FORMER CHIEF MINISTERS WAITING FOR “SON-RISE”

Nikhil Kumaraswamy, who is 36 years old, will run as a candidate for the National Democratic Alliance (NDA) in the Channapatna by-election. Meanwhile, Bharath B Bommai, aged 35, is standing for election in Shiggaon.

Nikhil Kumaraswamy, 36, will contest the bypoll at Channapatna as the National Democratic Alliance (NDA) candidate while Bharath B. Bommai, 35, has entered the fray in Shiggaon

Font Awesome Icons

Leave a Reply

Your email address will not be published. Required fields are marked *