MYSORE PALACE: ಅಮೇರಿಕಾ ಕೌನ್ಸುಲೇಟ್‌ ಜನರಲ್‌ ಮೆಚ್ಚುಗೆ ಪಡೆದ 100 ವರ್ಷ ಹಳೆ ದರ್ಬಾರ್‌ ಕುರ್ಚಿ.! » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

Stating that the US Consul General who visited the Mysore Palace was not only thrilled to see the Durbar chairs but also appreciated them, Palace Board Deputy Director Subramanya further said that the design of these chairs was also appreciated by foreigners.

ಮೈಸೂರು, ಸೆ.06,2024: (www.justkannada.in news) ಮೈಸೂರು ಅರಮನೆಯ ದರ್ಬಾರ್ ಕೊಠಡಿಯಲ್ಲಿ ಬಳಸಲಾಗುತ್ತಿದ್ದ  ಕುರ್ಚಿಗಳು ನೂರು ವರ್ಷಗಳಷ್ಟ ಹಳೆಯವು. ಆದರೂ ಈಗಲು ಅದರ ಸೌಂಧರ್ಯ, ಆಕರ್ಷಣೆ ಮಾತ್ರ ಮಾಸಿಲ್ಲ. ಅರಮನೆಗೆ ಭೇಟಿ ನೀಡುವ ಬಹುತೇಕ ವಿದೇಶಿಗರಿಗೆ ಈ ಖುರ್ಚಿ ಬಗ್ಗೆ ವಿಶೇಷ ವ್ಯಾಮೋಹ. ಈ ಸಲುವಾಗಿಯೇ ಇದರ ಫೋಟೋ ಕ್ಲಿಕ್ಕಿಸಿಕೊಳ್ಳುವುದನ್ನು ಮಾತ್ರ ಮರೆಯುವುದಿಲ್ಲ.

ವಿಶ್ವವಿಖ್ಯಾತ ಮೈಸೂರು ಅರಮನೆ ಬಗ್ಗೆ ತಿಳಿದುಕೊಂಡಷ್ಟು ಮತ್ತಷ್ಟು ಮಾಹಿತಿಗಳು ಲಭಿಸುತ್ತಲೇ ಇರುತ್ತವೆ. ಈ ಪೈಕಿ ಮೈಸೂರು ಮಹಾರಾಜರು ದರ್ಬಾರ್‌ ನಡೆಸುವ ವೇಳೆ ಗಣ್ಯರು ಆಸೀನರಾಗುವ ಸಲುವಾಗಿ ಬಳಸುತ್ತಿದ್ದ ದರ್ಬಾರ್‌ ಚೇರ್‌ ಗಳದ್ದೇ ಒಂದು ಇತಿಹಾಸ. ರಾಜರ ದರ್ಬಾರು ನಡೆಯುತ್ತಿದ್ದ ವೇಳೆ ಇಲ್ಲಿಯೇ ಜನರು ರಾಜರನ್ನು ಆಗಾಗ ಕಾಣಬಹುದಾಗಿತ್ತು.

ಈ ಚೇರುಗಳು ತುಂಬಾ ಐತಿಹಾಸಿಕ ಮತ್ತು ಬಹಳ ಶ್ರೀಮಂತವಾಗಿವೆ. ಈ ಕುರ್ಚಿಗಳನ್ನು ನವಾಬ್ ಖಾಸರತ್ತುಲ್ಲಾ ಖಾನ್ ಎಂಬ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ತಯಾರಿಸಲಾಗಿತ್ತು. ಅವುಗಳ ಮೇಲೆ ಅಲಂಕಾರಿಕ ಪತ್ತೆ ಕೆಲಸ,  ಶಿಲ್ಪಕಲೆಯನ್ನು ಕಾಣಬಹುದು.

ಗೋಡೌನ್‌ ಟು ಹಾಲ್‌ :

ನೂರಾರು ವರ್ಷದ ಹಿನ್ನೆಲೆಯುಳ್ಳ ಈ ದರ್ಬಾರ್‌ ಕುರ್ಚಿಗಳನ್ನು ಗೋಡೌನ್‌ ನಲ್ಲಿ ಇರಿಸಲಾಗಿತ್ತು. ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ ಅವರ ಕಣ್ಣಿಗೆ ಬಿದ್ದ ಮೇಲೆ ಈ ಕುರ್ಚಿಗಳಿಗೆ ಮತ್ತೆ ಗತ ವೈಭವ ಮರುಕಳಿಸಿದೆ.

ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ ಅವರು ಹೇಳಿದಿಷ್ಟು..

ಈ ಹಿಂದೆ ಮಹಾರಾಜರು ದರ್ಬಾರು ನಡೆಸುವಾಗ ಈ ಕುರ್ಚಿಗಳನ್ನು ಬಳಸಲಾಗುತ್ತಿತ್ತು. ದಿವಾನರುಗಳು ಸೇರಿದಂತೆ ಇತರೆ ಅರಮನೆಗೆ ಸೇರಿದ ಗಣ್ಯರು ಈ ಕುರ್ಚಿಯಲ್ಲಿ ಆಸೀನರಾಗಿದ್ದರು.  ಸಿ.ರಂಗಚಾರ್ಲು, ಪೂರ್ಣಯ್ಯ, ಸರ್.ಎಂ.ವಿಶ್ವೇಶ್ವರ್ಯ, ಮಿರ್ಜಾ ಇಸ್ಮಾಯಿಲ್‌ ಹೀಗೆ ಅನೇಕರು ಈ ಕುರ್ಚಿಯಲ್ಲಿ ಕುಳಿತ್ತಿದ್ದಿರಬಹುದು, ಬಲ್ಲವರು ಯಾರು..?

ಆದ್ದರಿಂದ ಈ ಕುರ್ಚಿಗಳ ಮಹತ್ವ ಅರಿತು, ಗೋಡೌನಿಂದ ಅದನ್ನು ಅರಮನೆ ಮಂಡಳಿ ಸಭಾಂಗಣಕ್ಕೆ ಸ್ಥಳಾಂತರಿಸಲಾಯಿತು. ಅಂದಾಹು ೨೦೦ ಕ್ಕೂ ಹೆಚ್ಚು ಕುರ್ಚಿಗಳಿದ್ದು, ಈ ಪೈಕಿ ಅರ್ದದಷ್ಟು ಚೇರುಗಳು ದುರಸ್ತಿಯಲ್ಲಿವೆ. ಇವುಗಳನ್ನು ಸಂರಕ್ಷಿಸು ನಿಟ್ಟಿನಲ್ಲಿ ಕಾರ್ಯಮಗ್ನವಾಗಿದ್ದೇವೆ.

ಈ ದರ್ಬಾರ್‌ ಚೇರುಗಳನ್ನು ದಸರಾ ಅವಧಿಯಲ್ಲಿ ವಿಶೇಷವಾಗಿ ಅರಮನೆಯ ಖಾಸಗಿ ದರ್ಬಾರಿನ ವೇಳೆಯಲ್ಲಿ ಬಳಸಲಾಗುತ್ತದೆ. ಈ ಖುರ್ಚಿಗಳು, ಮೈಸೂರಿನ ರಾಜಕುಟುಂಬದ ವೈಭವ ಮತ್ತು ಪ್ರಖ್ಯಾತಿಯ ಸಂಕೇತವಾಗಿ ಇಂದು ಕೂಡ ಉಳಿದುಕೊಂಡಿವೆ.

ಅಮೇರಿಕಾ ಕೌನ್ಸುಲೇಟ್‌ ಜನರಲ್‌ ಮೆಚ್ಚುಗೆ:

ಮೈಸೂರು ಅರಮನೆಗೆ ಭೇಟಿ ನೀಡಿದ್ದ ಅಮೇರಿಕಾ ಕೌನ್ಸುಲೇಟ್‌ ಜನರಲ್‌ , ದರ್ಬಾರ್‌ ಕುರ್ಚಿಗಳನ್ನು ಕಂಡು ಪುಳಕಿತಗೊಂಡಿದ್ದು ಮಾತ್ರವಲ್ಲದೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದ ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಮಣ್ಯ ಅವರು ಮುಂದುವರಿದು, ಈ ಕುರ್ಚಿಗಳ ವಿನ್ಯಾಸದ ಬಗೆಗೂ ವಿದೇಶಿಗರಿಗೆ ಭಾರಿ ಮೆಚ್ಚುಗೆ. ಕಾರಣ ಈ ಕುರ್ಚಿಯಲ್ಲಿ ದೀರ್ಘಕಾಲ ಕುಳಿತರು ಬೆನ್ನು ನೋವಿನ ಸಮಸ್ಯೆ ಕಾಡದು ಎಂಬುದು ಅವರ ಭಾವನೆ ಎಂದರು.

key words:  MYSORE PALACE, A 100-year-old, Durbar chair, appreciated,by the US Consulate General.

SUMMARY:

Stating that the US Consul General who visited the Mysore Palace was not only thrilled to see the Durbar chairs but also appreciated them, Palace Board Deputy Director Subramanya further said that the design of these chairs was also appreciated by foreigners. Because they feel that if they sit in this chair for a long time, not suffer from back pain.

Font Awesome Icons

Leave a Reply

Your email address will not be published. Required fields are marked *