ದರ್ಶನ್ ಅಭಿನಯದ ಕಾಟೇರಾ ಚಿತ್ರ ಬಿಡುಗಡೆಯಾಗುವ ಮೊದಲೇ ಘೋಷಣೆಯಾಗಿದ್ದ ʼಡೆವಿಲ್ʼಗೆ ನಾಯಕಿಯ ಆಯ್ಕೆಯಾಗಿದ್ದು, ಪುತ್ತೂರಿನ ರಚನಾ ರೈಗೆ ಈ ಅವಕಾಶ ದೊರಕಿದೆ.
‘ತಾರಕ್’ ನಿರ್ದೇಶಕ ಮಿಲನಾ ಪ್ರಕಾಶ್ ನಿರ್ದೇಶನ ಮಾಡಲಿರುವ ‘ಡೆವಿಲ್: ದಿ ಹೀರೋ’ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದು, ಇದೀಗ ನಾಯಕಿಯ ಆಯ್ಕೆಯೂ ಪೂರ್ಣಗೊಂಡಿದೆ.
ಮಾಡೆಲ್ ಆಗಿರುವ ರಚನಾ, ತುಳು ಹಿಟ್ ಸಿನಿಮಾ ʼಸರ್ಕಸ್ʼನಲ್ಲಿ ನಟಿಸಿದ್ದು, ಪ್ರಸ್ತುತ ಧನ್ವೀರ್ ಗೌಡ ನಟನೆಯ ‘ವಾಮನ’ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಈಗ ಡೆವಿಲ್ ಮೂಲಕ ಕೋಸ್ಟಲ್‌ವುಡ್ ನ ನಟಿ ದರ್ಶನ್ ರ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡಲಿದ್ದಾರೆ.
ಡಿಸೆಂಬರ್ ಕೊನೆಯಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಅನಿಸಿಕೊಂಡ ದರ್ಶನ್ ನಟನೆಯ ʼಕಾಟೇರʼ ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ.