ʼಯಶ್ 19ʼ ಚಿತ್ರದ ಟೈಟಲ್ ಅನೌನ್ಸ್: ಸಿನಿಮಾ ರಿಲೀಸ್​​ ಡೇಟ್ ತಿಳಿಸಿದ ರಾಕಿ

ಕೆಜಿಎಫ್​ ಮೂಲಕ ಗಲ್ಲಾ ಪೆಟ್ಟಿಗೆ ಲೂಟಿ ಮಾಡಿದ ನಟ ರಾಕಿಂಗ್​ ಸ್ಟಾರ್​ ಯಶ್. ಇದೀಗ ‘ಟಾಕ್ಸಿಕ್’​ ಮೂಲಕ ಅಬ್ಬರಿಸಲು ರೆಡಿಯಾಗಿದ್ದಾರೆ. ಇಂದು ಯಶ್​ತಮ್ಮ 19ನೇ ಸಿನಿಮಾದ ಟೈಟಲ್​ ಅನೌನ್ಸ್​ ಮಾಡಿದ್ದಾರೆ.

ಕೆಜಿಎಫ್​-1 ಸಕ್ಸಸ್​, ಕೆಜಿಎಫ್​-2 ಸಕ್ಸಸ್​, ಕೆಜಿಎಫ್​-3 ಬರಲು ಬಾಕಿ ಉಳಿದಿದೆ. ಇದರ ನಡುವೆ ಯಶ್​ 19ನೇ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಸುದ್ದಿ ಬೆಳಕಿಗೆ ಬಂದಿತ್ತು. ಸದ್ಯದಲ್ಲೇ ಸಿನಿಮಾದ ಅನೌನ್ಸ್​ಮೆಂಟ್​ ಇರಲಿದೆ ಎಂದು ಹೇಳಲಾಗಿತ್ತು. ಅದರಂತೆಯೇ ಇಂದು ಯಶ್​ ‘ಟಾಕ್ಸಿಕ್’ ಸಿನಿಮಾದ ಮೂಲಕ ಮತ್ತೆ ಅಬ್ಬರಿಸಲು ರೆಡಿಯಾಗಿದ್ದಾರೆ.

‘ಟಾಕ್ಸಿಕ್’ ಎಂದರೆ ವಿಷಕಾರಿ ಎಂದರ್ಥ. ಅಂದಹಾಗೆಯೇ ಕೆಜಿಎಫ್​ ​​ಸಕ್ಸಸ್​ ಕಂಡ ಯಶ್​ ಇದೀಗ 19ನೆ ಸಿನಿಮಾದ ಮೂಲಕ ಮತ್ತೆ ಅಬ್ಬರಿಸಲು ಮುಂದಾಗಿದ್ದಾರೆ. ಇಷ್ಟರವರೆಗೆ ಕಾದು ಕುಳಿತ ಫ್ಯಾನ್ಸ್​ಗೆ ಸಂತಸ ನೀಡಿದ್ದಾರೆ. ಬೆಳ್ಳಂಬೆಳಗ್ಗೆ ಟೈಟಲ್​ ಅನೌನ್ಸ್​ ಮಾಡುವ ಮೂಲಕ ಮತ್ತೆ ಕುತೂಹಲತೆ ಹುಟ್ಟಿಸಿದ್ದಾರೆ.

ರಾಕಿ ಭಾಯ್​ ಈ ಸಿನಿಮಾವನ್ನ ಏಪ್ರಿಲ್​ 10ರಂದು ರಿಲೀಸ್​ ಮಾಡುತ್ತಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಮುಂದಿನ ವರ್ಷ ರಿಲೀಸ್​ ಆಗುತ್ತಿಲ್ಲ. ಸದ್ಯ ಹೊರಬಿದ್ದ ಮಾಹಿತಿ ಪ್ರಕಾರ 2025ರ ಏಪ್ರಿಲ್​ 10ನೇ ತಾರೀಖು ರಿಲೀಸ್​ ಆಗಲಿದೆ ಎಂದು ಹೇಳಲಾಗುತ್ತಿದೆ.

 

Font Awesome Icons

Leave a Reply

Your email address will not be published. Required fields are marked *