ಮುಂಬೈ : ನಟ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಲಿಯೋ’ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಅಕ್ಟೋಬರ್ 5 ಸಂಜೆ 6.30ಕ್ಕೆ ಲಿಯೋ ಟ್ರೇಲರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಅದರಂತೆ ಚಿತ್ರತಂಡ ತಮಿಳು, ತೆಲುಗು, ಕನ್ನಡ, ಹಿಂದಿ ನಾಲ್ಕು ಭಾಷೆಗಳಲ್ಲಿ ‘ಲಿಯೋ’ ಟ್ರೇಲರ್ ರಿಲೀಸ್ ಮಾಡಿದೆ.
ಟ್ರೇಲರ್ ನೋಡಿ ವಿಜಯ್ ಅಭಿಮಾನಿಗಳು ಥ್ರಿಲ್ ಆಗಿದ್ಧಾರೆ. ಇನ್ನು ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇವೆ, ಟ್ರೇಲರ್ ನೋಡಿ ಗೂಸ್ ಬಂಪ್ಸ್ ಆಗಿದೆ ಎಂದು ವಿಜಯ್ ಅಭಿಮಾನಿಗಳು ಟ್ರೇಲರ್ಗೆ ಕಾಮೆಂಟ್ ಮಾಡುತ್ತಿದ್ಧಾರೆ. ಟ್ರೇಲರ್ ರಿಲೀಸ್ ಆಗಿ 50 ನಿಮಿಷದ ಅವಧಿಯಲ್ಲಿ ತಮಿಳಿನಲ್ಲಿ 3.5 ಮಿಲಿಯನ್ಗೂ ಹೆಚ್ಚು ಮಂದಿ ನೋಡಿದ್ದಾರೆ.
‘ಲಿಯೋ’ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ಅಡಿ ಲಲಿತ್ ಕುಮಾರ್ ನಿರ್ಮಿಸಿದ್ದು ಲೋಕೇಶ್ ಕನಕರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.
‘ಲಿಯೋ’ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ಅಡಿ ಲಲಿತ್ ಕುಮಾರ್ ನಿರ್ಮಿಸಿದ್ದು ಲೋಕೇಶ್ ಕನಕರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರದ ಹಾಡುಗಳಿಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ವಿಜಯ್, ಸಂಜಯ್ ದತ್, ತ್ರಿಶಾ, ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ಮುಸ್ಕಾನ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ನಟಿಸಿದ್ದಾರೆ. ಶೀಘ್ರದಲ್ಲೇ ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.