ಅಂಧ ವಿದ್ಯಾರ್ಥಿನಿಗೆ ಕೆಲಸ ಕೊಡಿಸಿದ ಉಪಮುಖ್ಯಮಂತ್ರಿ

ಬೆಂಗಳೂರು: ಬಿಎ ಪದವಿ ಪಡೆದ ಅಂಧ ವಿದ್ಯಾರ್ಥಿನಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ಸ್ಥಳದಲ್ಲಿಯೇ ಕೆಲಸ ಕೊಡುವಂತೆ  ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ ಘಟನೆ ಯಲಹಂಕದ ಅಂಬೇಡ್ಕರ್ ಭವನದಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ನಡೆದಿದೆ.

ಸುಂಕದಕಟ್ಟೆ ಶಾಂತಿಧಾಮ ಸಂಸ್ಥೆಯ  ಅಂಧ ವಿದ್ಯಾರ್ಥಿನಿ ದಿವ್ಯಾಂಜಲಿ ಅವರು, ‘ನನಗೆ ಕಣ್ಣು ಕಾಣಲ್ಲ, ಹಾಗಾಗಿ ಎಲ್ಲೂ ಕೆಲಸ ಸಿಗುತ್ತಿಲ್ಲ. ಹೀಗಾಗಿ ಕೆಲಸ ಕೊಡಿಸುವಂತೆ ಡಿಕೆ ಶಿವಕುಮಾರ್​ ಅವರಿಗೆ ಮನವಿ ಮಾಡಿಕೊಂಡಿದ್ದರು. ಕೂಡಲೇ ಮನವಿಗೆ ಸ್ಪಂಧಿಸಿದ ಡಿಸಿಎಂ,  ದಿವ್ಯಾಂಜಲಿ ಅವರ ಪದವಿ ಸರ್ಟಿಫಿಕೇಟ್ ಪರಿಶೀಲಿಸಿ, ಬಿಬಿಎಂಪಿ ಅಧಿಕಾರಿಗಳಿಗೆ ಕೆಲಸಕೊಡುವಂತೆ ತಾಕೀತು ಮಾಡಿದ್ದಲ್ಲದೆ, ಕಾಲ್ ಸೆಂಟರ್ ಅಥವಾ ಕೂತು ಮಾಡುವ ಕೆಲಸವನ್ನೇ ಕೊಡಲು ಸೂಚಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಜನರ ಸಮಸ್ಯೆಗಳಿಗೆ ಸ್ಪಂಧಿಸಿದ ಅವರು ಸ್ಥಳದಲ್ಲೇ ಆದಷ್ಟು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಿದರು.

Font Awesome Icons

Leave a Reply

Your email address will not be published. Required fields are marked *