ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಕಾಸರಗೋಡು : ಅಂಬಲತ್ತರ ಪಾರಪಳ್ಳಿ ಗುರುಪುರದ ಬಾಡಿಗೆ ಮನೆಯೊಂದರಲ್ಲಿ ರೂ 2 ಸಾವಿರ ಮುಖಬೆಲೆಯ 7.25 ಕೋಟಿ ರೂ ಪತ್ತೆಯಾಗಿದ್ದು ತನಿಖೆಯ ವೇಳೆ ಇವೆಲ್ಲವೂ ಖೋಟಾ ನೋಟುಗಳು ಎಂದು ತನಿಖೆಯಿಂದ ಸ್ಪಷ್ಟವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಅಂಬಲತ್ತರ ಠಾಣಾ ವ್ಯಾಪ್ತಿಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಸುಳ್ಯದ ಸುಲೈಮಾನ್ ಹಾಗೂ ಪೆರಿಯಾ ನಿವಾಸಿ ಅಬ್ದುಲ್ ರಜಾಕ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಪುತ್ತೂರಿನ ವ್ಯಕ್ತಿ ಓರ್ವರ ಕೈವಾಡ ಇರುವುದು ತನಿಖೆ ವೇಳೆ ಪೊಲೀಸರಿಗೆ ಮಾಹಿತಿ ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *