ಅಂಬಿಕಾ ಪದವಿಪೂರ್ವ ವಿದ್ಯಾಲಯಕ್ಕೆ ಶೇ.100 ಫಲಿತಾಂಶ, ವಿಶಿಷ್ಟ ಶ್ರೇಣಿ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯ ಈ ಎರಡೂ ಸಂಸ್ಥೆಗಳ ವಿದ್ಯಾರ್ಥಿಗಳು ಈ ಬಾರಿಯ ಪಿಯು ಫಲಿತಾಂಶದಲ್ಲಿ ಶೇ.100 ಸಾಧನೆಗೈದಿದ್ದಾರೆ.

ನೆಲ್ಲಿಕಟ್ಟೆ ಅಂಬಿಕಾ ವಿದ್ಯಾಲಯದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಮತ್ತು ಬಪ್ಪಳಿಗೆ ವಸತಿಯುತ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ. ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿಜ್ಞಾನ ವಿಭಾಗದಲ್ಲಿ 235 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 171 (73 ಪ್ರತಿಶತ) ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 63 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ತನ್ಮೂಲಕ ವಿಜ್ಞಾನ ವಿಭಾಗದಲ್ಲಿ ಸತತ ನಾಲ್ಕನೇ ಬಾರಿಗೆ ಶೇಕಡಾ ನೂರು ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 44 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 26 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಸತತ ಆರನೇ ಬಾರಿ 100 ಪ್ರತಿಶತ ಫಲಿತಾಂಶ ದಾಖಲಾಗಿದೆ.

ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ 170 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 111 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 58 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಅತ್ಯುನ್ನತ ಸಾಧನೆ ಮೆರೆದಿದ್ದಾರೆ. ಇದರಿಂದಾಗಿ ಎರಡು ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ಒಟ್ಟು 449 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 308 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 139 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾದಂತಾಗಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆ (ವಿಜ್ಞಾನ ವಿಭಾಗ): ಅಡ್ಯನಡ್ಕದ ವಿಶ್ವಾನಾಥ ಎಮ್ ಮತ್ತು ರಮ್ಯ ಎಮ್ ದಂಪತಿಗಳ ಪುತ್ರ ವರುಣ್ ಎಂ (594), ತಿಂಗಳಾಡಿಯ ಸತೀಶ್ ನಾಯಕ್ ಪಿ ಮತ್ತು ಲಾವಣ್ಯ ಎಂ ಬಿ ದಂಪತಿಯ ಪುತ್ರಿ ಶೃಂಗ ನಾಯಕ್ ಪಿ (591), ಕೆಯ್ಯೂರು ಮಾಡವಿನ ವಿಶ್ವನಾಥ ಬಿ ಕೆ ಮತ್ತು ರಜನಿ ದಂಪತಿಯ ಪುತ್ರಿ ಮೈತ್ರಿ ಕೆ (590), ಚಿಕ್ಕಮುಡನ್ನೂರಿನ ಗ್ರಿಗೋರಿ ರೋನಿ ಪಾಯ್ಸ್ ಮತ್ತು ಮರಿಲ್ ರೋಡ್ರೀಗಸ್ ಕೆ ದಂಪತಿಯ ಪುತ್ರಿ ಅನುಷಾ ಜೇನ್ ಪಾಯ್ಸ್ (587), ದರ್ಬೆಯ ರಾಮಕೃಷ್ಣ ಪ್ರಕಾಶ್ ಬಿ ಮತ್ತು ಸುಜಾತ ಎಮ್ ದಂಪತಿಯ ಪುತ್ರ ಚೈತನ್ಯ ಬಿ (587), ಮುಕ್ವೆಯ ಡಾ. ರಾಮಮೋಹನ ಎಸ್ ಮತ್ತು ಸಂಧ್ಯಾ ಎಸ್ ದಂಪತಿಯ ಪುತ್ರಿ ಶಾರ್ವರಿ ಎಸ್ (586), ಸುಳ್ಯ ಜಯನಗರದ ಶ್ರೀಧರ ಎ ಮತ್ತು ಮಾಲಿನಿ ಎನ್ ದಂಪತಿಯ ಪುತ್ರಿ ಅನುಶ್ರೀ ಎ ಎಸ್ (585), ಬಂಟ್ವಾಳ ನೀರ್ಕಾಜೆಯ ಬಾಲಕೃಷ್ಣ ಶೆಟ್ಟಿ ಮತ್ತು ಲೀಲಾಮನಿ ದಂಪತಿಯ ಪುತ್ರಿ ಪ್ರಣಮ್ಯ ಬಿ ಶೆಟ್ಟಿ (585), ಪಾಣಾಜೆಯ ಶಿವಶಂಕರ ಭಟ್ ಸಿ ಹೆಚ್ ಮತ್ತು ದೀಪ ದಂಪತಿಯ ಪುತ್ರಿ ಶ್ರಾವ್ಯಲಕ್ಷ್ಮಿ ಕೆ (584), ಸುಳ್ಯದ ಪದ್ಮನಾಭ ಕೆ ಮತ್ತು ವಿಶಾಲಾಕ್ಷ್ಮಿ ದಂಪತಿಯ ಪುತ್ರಿ ಚಂದನಲಕ್ಷ್ಮಿ ಪಿ ಎನ್ (583), ಸರ್ವೆಯ ಪ್ರದೀಪ್ ಬಿ ಎಸ್ ಮತ್ತು ಸವಿತ ಪಿ ರೈ ದಂಪತಿಯ ಪುತ್ರ ಕೌಶಿಕ್ ಬಿ ಪಿ (583), ಮುದಲೆಗುಂಡಿಯ ಮುರಳೀಧರ ಮತ್ತು ಗಂಗಾದೇವಿ ದಂಪತಿಯ ಪುತ್ರ ಸಮಂತ ಮುದಲೆಗುಂಡಿ (583), ಬೊಳುವಾರಿನ ಯು ಪಾಂಡುರಂಗ ಕಿಣಿ ಮತ್ತು ಪ್ರತಿಭಾ ಪಿ ಪುತ್ರಿ ಯು.ಪ್ರತೀಕ್ಷಾ ಕಿಣಿ (583) ಉತ್ತಮ ಅಂಕಗಳೊಂದಿಗೆ ಸಾಧನೆಗೈದಿದ್ದಾರೆ.

ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆ (ವಾಣಿಜ್ಯ ವಿಭಾಗ): ಬಂಟ್ವಾಳದ ಪ್ರಕಾಶ್ ಹಾಗೂ ಸಾಯಿಸುದಾ ದಂಪತಿಯ ಪುತ್ರ ಅಭಿರಾಮ ಕೆ. ಪಿ (591), ಕೆಯ್ಯೂರು ಮಾಡಾವಿನ ವಿಷ್ಣು ಭಟ್ ಯನ್ ಮತ್ತು ಸುಮಲತಾ ಯನ್ ದಂಪತಿಯ ಪುತ್ರಿ ಸೃಷ್ಠಿ ಯನ್ (585), ಬಂಟ್ವಾಳ ಕೋಡಪದವಿನ ಯಸ್ ರಾಜಾರಾಮ ಭಟ್ ಮತ್ತು ಯಸ್ ವಾಣಿ ದಂಪತಿಯ ಪುತ್ರಿ ಆತ್ಮಶ್ರೀ (584), ಕಡಬದ ಸತೀಶ್ ಕೆ ಮತ್ತು ಸವಿತಾ ದಂಪತಿಯ ಪುತ್ರಿ ಸುಹಾನಿ ಯಸ್ ಕೆ(582) ಉತ್ತಮ ಅಂಕಗಳೊಂದಿಗೆ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
Mng

ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ಬಪ್ಪಳಿಗೆ (ವಸತಿಯುತ):
ಪುತ್ತೂರಿನ ಕೃಷ್ಣಪ್ಪ ಗೌಡ ಮತ್ತು ಕೋಮಲ ಎಂ ದಂಪತಿಯ ಪುತ್ರಿ ಕೃತಿ ಕೆ ಎಂ (586), ಪುತ್ತೂರು ಕುರಿಯದ ವಿಶ್ವನಾಥ ರೈ ಮತ್ತು ವಿಶಾಲಾಕ್ಷಿ ದಂಪತಿಯ ಪುತ್ರಿ ಮನ್ವಿ ವಿ ರೈ (586), ಕುಶಾಲನಗರದ ಸುಂದರೇಶ್ ಎ ಯು ಮತ್ತು ಎ.ಎಸ್ ಕವಿತಾ ದಂಪತಿಯ ಪುತ್ರ ರಾಹುಲ್ ಎ.ಎಸ್(585), ಬೆಳ್ತಂಗಡಿ ಬಂದಾರಿ£ ಡೊಂಬಯ್ಯ ಗೌಡ ಮತ್ತು ಲಲಿತಾ ದಂಪತಿಯ ಪುತ್ರಿ ಸಿಂಚನಾ (583), ಕೊಲ್ಲಾಪುರದ ರಾಜ್ ಗೋಪಾಲ್ ಪ್ರಭು ಮತ್ತು ಸುಮನಾ ಪ್ರಭು ದಂಪತಿಯ ಪುತ್ರಿ ದೀಪಿಕಾ ಪ್ರಭು (582), ಸುಳ್ಯದ ಸೋವiಶೇಖರ ಮತ್ತು ಅಶ್ವಿನಿ ದಂಪತಿಯ ಪುತ್ರ ತೇಜಸ್ವಿ.ಪಿ (581), ಸುಳ್ಯದ ಹರಿಪ್ರಸಾದ .ಪಿ ಮತ್ತು ಸವಿತಾ ದಂಪತಿಯ ಪುತ್ರಿ ಶಮಿತಾ ಪಿ ಎಚ್(580), ಪುತ್ತೂರಿನ ಎಂ ಮನೋಹರ ಶೆಟ್ಟಿ ಮತ್ತು ಗಾಯತ್ರಿ ಎಂ ದಂಪತಿಯ ಪುತ್ರಿ ತನ್ವಿತಾ ಎಂ ಶೆಟ್ಟಿ (580), ಮಂಡ್ಯದ ಮುತ್ತುರಾಜು ಮತ್ತು ಸುನೀತಾ ಎಸ್ ದಂಪತಿಯ ಪುತ್ರ ರವಿಪ್ರಸಾದ್ ಟಿ.ಎಂ (579), ಬೆಳ್ತಂಗಡಿಯ ಅನಂತ ಪದ್ಮನಾಭ ಮತ್ತು ಪವಿತ್ರ ಎ.ಎಸ್ ದಂಪತಿಯ ಪುತ್ರ ಸುದನ್ವ ಶಬರಾಯ (577) ಉತ್ತಮ ಅಂಕಗಳೊಂದಿಗೆ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

New Project (1)

ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆ (ವಿಜ್ಞಾನ ವಿಭಾಗ):
1 ವರುಣ್ ಎಂ (594), 2. ಶೃಂಗ ನಾಯಕ್ ಪಿ (591), 3 ಮೈತ್ರಿ ಕೆ (590), 4 ಅನುಷಾ ಜೇನ್ ಪಾಯ್ಸ್ (587), 5 ಚೈತನ್ಯ ಬಿ (587), 6 ಶಾರ್ವರಿ ಎಸ್ (586), 7 ಅನುಶ್ರೀ ಎ ಎಸ್ (585), 8 ಪ್ರಣಮ್ಯ ಬಿ ಶೆಟ್ಟಿ (585), 9 ಶ್ರಾವ್ಯಲಕ್ಷ್ಮಿ ಕೆ (584), 10 ಚಂದನಲಕ್ಷ್ಮಿ ಪಿ ಎನ್ (583), 11 ಕೌಶಿಕ್ ಬಿ ಪಿ (583), 12 ಸಮಂತ ಮುದಲೆಗುಂಡಿ (583), 13 ಯು.ಪ್ರತೀಕ್ಷಾ ಕಿಣಿ (583)

ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆ (ವಾಣಿಜ್ಯ ವಿಭಾಗ):
1 ಅಭಿರಾಮ ಕೆ. ಪಿ (591), 2 ಸೃಷ್ಠಿ ಯನ್ (585), 3 ಆತ್ಮಶ್ರೀ (584), 4 ಸುಹಾನಿ ಯಸ್ ಕೆ (582)

ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ಬಪ್ಪಳಿಗೆ (ವಸತಿಯುತ):
1 ಕೃತಿ ಕೆ ಎಂ (586), 2 ಮನ್ವಿ ವಿ ರೈ (586), 3 ರಾಹುಲ್ ಎ.ಎಸ್(585), 4 ಸಿಂಚನಾ (583), 5 ದೀಪಿಕಾ ಪ್ರಭು (582), 6 ತೇಜಸ್ವಿ.ಪಿ (581), 7 ಶಮಿತಾ ಪಿ ಎಚ್(580), 8 ತನ್ವಿತಾ ಎಂ ಶೆಟ್ಟಿ (580), 9 ರವಿಪ್ರಸಾದ್ ಟಿ.ಎಂ (579), 10 ಸುದನ್ವ ಶಬರಾಯ (577)

 

Font Awesome Icons

Leave a Reply

Your email address will not be published. Required fields are marked *