ಅಕ್ಷಯ್​ ಕುಮಾರ್ ‘ಒಎಂಜಿ 2’​ ಚಿತ್ರಕ್ಕೆ ಸಿಕ್ತು ‘ಎ’ ಪ್ರಮಾಣಪತ್ರ

ಅಕ್ಷಯ್ ಕುಮಾರ್ ನಟನೆಯ “ಒಹ್ ಮೈ ಗಾಡ್” ಸಿನಿಮಾ ಹಿಟ್ ಆಗಿತ್ತು. ದಶಕಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗಿದೆ. ಅಕ್ಷಯ್ ಕುಮಾರ್ ಅವರೇ ಮುಖ್ಯಭೂಮಿಕೆಯಲ್ಲಿರುವ ‘ಒಎಂಜಿ 2’ ಸಿನಿಮಾ ಆಗಸ್ಟ್​ 11ರಂದು ರಿಲೀಸ್ ಆಗುತ್ತಿದೆ. ಈ ಈ ಚಿತ್ರದ ರಿಲೀಸ್​ಗೆ ಸೆನ್ಸಾರ್​ ಸಮಸ್ಯೆ ಎದುರಾಗಿತ್ತು.

ಸಲಿಂಗಕಾಮದ ವಿಷಯ ಇರುವ ಈ ಚಿತ್ರದಲ್ಲಿ ದೇವರ ಪಾತ್ರವನ್ನು ಬಳಸಿಕೊಳ್ಳಲಾಗಿದೆ ಎಂಬ ಕಾರಣಕ್ಕೆ ಸೆನ್ಸಾರ್​ ಮಂಡಳಿಯವರು ಪ್ರಮಾಣಪತ್ರ ನೀಡಲು ಹಿಂದೇಟು ಹಾಕಿದ್ದರು. ಈಗ ರಿವೈಸಿಂಗ್​ ಕಮಿಟಿಯಲ್ಲಿ ಈ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ಸಿಕ್ಕಿದೆ. ಅಂದರೆ, ವಯಸ್ಕರು ಮಾತ್ರ ‘ಒಎಂಜಿ 2’ ಸಿನಿಮಾ ವೀಕ್ಷಿಸಬಹುದು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಸಿನಿಮಾವನ್ನು ನೋಡುವಂತಿಲ್ಲ.

‘ಒಎಂಜಿ 2’ ಚಿತ್ರದಲ್ಲಿ ದೇವರು ಹಾಗೂ ಲೈಂಗಿಕ ವಿಚಾರ ಇದೆ. ಎರಡನ್ನೂ ಒಟ್ಟಿಗೆ ಬೆರೆಸಿರುವುದರಿಂದ ಈ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳುಹಿಸಲಾಗಿತ್ತು. ಈ ಸಮಿತಿ ಚಿತ್ರಕ್ಕೆ ಸೆನ್ಸಾರ್ ಮಾಡಿದೆ. ಚಿತ್ರದಲ್ಲಿ ಕತ್ತರಿ ಹಾಕುವ ಬದಲು ದೃಶ್ಯಗಳಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು ‘ಎ’ ಪ್ರಮಾಣಪತ್ರ ಪಡೆಯಲು ಒಪ್ಪಿಕೊಳ್ಳಲಾಗಿದೆ.

 

Font Awesome Icons

Leave a Reply

Your email address will not be published. Required fields are marked *