ಅಕ್ಷಯ್ ಕುಮಾರ್ ಗೆ ಕಪಾಳ ಮೋಕ್ಷ ಮಾಡಿದರೆ 10 ಲಕ್ಷ ರೂ.: ಹಿಂದೂಪರ ಸಂಘಟನೆ

ಅಕ್ಷಯ್ ಕುಮಾರ್ ನಟನೆಯ ಒಂಬತ್ತು ಸಿನಿಮಾಗಳು ಒಂದರ ಹಿಂದೊಂದು ಮಕಾಡೆ ಮಲಗಿವೆ, ಇದೀಗ ಅಕ್ಷಯ್​ರ ಹೊಸ ಸಿನಿಮಾ ‘ಓ ಮೈ ಗಾಡ್ 2’ ಬಿಡುಗಡೆ ಆಗಿದೆ. ಸಿನಿಮಾ ಸಾಧಾರಣ ಆರಂಭವನ್ನು ಪಡೆದುಕೊಂಡಿದ್ದು, ವೀಕೆಂಡ್​ನಲ್ಲಿ ಕಲೆಕ್ಷನ್ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಹೀಗಿರುವಾಗ ಸಿನಿಮಾದ ಕತೆ ತುಸು ವಿವಾದಕ್ಕೆ ಕಾರಣವಾಗಿದೆ. ಕೆಲವು ಹಿಂದೂಪರ ಸಂಘಟನೆಗಳು ಸಿನಿಮಾದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದು, ಬಾಯ್​ಕಾಟ್​ಗೆ ಒತ್ತಾಯಿಸಿವೆ. ಒಂದು ಸಂಘಟನೆಯಂತೂ ಅಕ್ಷಯ್​ಕುಮಾರ್​ಗೆ ಹೊಡೆದವರಿಗೆ ನಗದು ಪ್ರಶಸ್ತಿಯನ್ನು ಘೋಷಿಸಿದೆ.

ಸಿನಿಮಾದಲ್ಲಿ ಶಿವನ ಭಕ್ತರಿಗೆ, ಶಿವಗಣಕ್ಕೆ ಅಪಮಾನ ಮಾಡಲಾಗಿದೆ ಎಂದು ಹಿಂದೂಪರ ಸಂಘಟನೆ ಸದಸ್ಯರು ಆಕ್ಷೇಪಿಸಿದ್ದು, ರಾಷ್ಟ್ರೀಯ ಹಿಂದೂ ಪರಿಷದ್​ನ ಸದಸ್ಯರು ಅಕ್ಷಯ್ ಕುಮಾರ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಅಲ್ಲದೆ ಸಿನಿಮಾದ ಪ್ರದರ್ಶನವನ್ನು ಈ ಕೂಡಲೇ ಬಂದ್ ಮಾಡುವಂತೆ ಒತ್ತಾಯಿಸಿದ್ದಾರೆ. ಇನ್ನು ಆಗ್ರಾದ ಹಿಂದೂಪರ ಸಂಘಟನೆಯೊಂದು ಸಿನಿಮಾ ವಿರುದ್ಧ ಆಕ್ರೋಶ ಹೊರಹಾಕಿದ್ದು, ನಟ ಅಕ್ಷಯ್ ಕುಮಾರ್​ ಕಪಾಳಕ್ಕೆ ಹೊಡೆದವರಿಗೆ ಅಥವಾ ಅವರ ಮೇಲೆ ಉಗಿದವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ.

 

 

Font Awesome Icons

Leave a Reply

Your email address will not be published. Required fields are marked *