ಅತ್ತೂರು ಬೆಸಿಲಿಕ ಪುಣ್ಯಕ್ಷೇತ್ರಕ್ಕೆ ಸ್ಪೀಕರ್ ಖಾದರ್ ಭೇಟಿ

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ ಸುಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭೆಯ ಸಭಾಪತಿ ಹಾಗೂ ಉಳ್ಳಾಲ ವಿಧಾನ ಸಭೆಯ ಶಾಸಕ ಯು.ಟಿ‌.ಖಾದರ್ ಅವರು ಬಸಿಲಿಕಾದ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಸಂತ ಲಾರೆನ್ಸ್ ದರ್ಶನ ಪಡೆದು ಕ್ಯಾಂಡಲ್ ಉರಿಸುವ ಮೂಲಕ ಹರಕೆ ಸಂದಾಯ ಮಾಡಿದರು.

ಬಸಿಲಿಕಾದ ನಿರ್ದೇಶಕ ಅ.ವಂ. ಆಲ್ಬನ್ ಡಿಸೋಜಾ ರವರು ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಅವರಿಗೆ ಸ್ವಾಗತಿಸಿ, ಶಾಲು ಹೊದಿಸಿ ಗೌರವದೊಂದಿಗೆ ಸನ್ಮಾನಿಸಿದರು.

ಸರ್ವ ಧರ್ಮಗಳ ಭಾವೈಕ್ಯಯ ಸಂದೇಶ ಸಾರುವ ಸಂತ ಲಾರೆನ್ಸ್ ಬಸಿಲಿಕ ಪುಣ್ಯ ಕ್ಷೇತ್ರವು ಸರ್ವ ಜನತೆಗೆ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಶುಭಹಾರೈಸಿದರು.

ಆಧ್ಯಾತ್ಮಕ ಧರ್ಮಗುರು ರೋಮನ್ ಮಸ್ಕರಸ್, ಸಹಾಯಕ ಧರ್ಮ ಗುರು ಲ್ಯಾರಿ ಪಿಂಟೋ, ಆಡಳಿತ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿ ಸಿಲ್ವ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಪಾಲನಾ ಮಂಡಳಿಯ ಸದಸ್ಯರುಗಳಾದ ವಂದೀಶ್ ಮಥಾಯಿಸ್, ಪ್ರಕಾಶ್ ಪಿಂಟೋ, ರಿತೇಶ್ ಪಿಂಟೋ ರೋಶನ್ ಸಾಲಿಸ್ ಮೊದಲಾದವರು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *