ಅದ್ಧೂರಿ ದಸರಾಗೆ ಬೇಕಾಗುವಷ್ಟು ಅನುದಾನ ನೀಡ್ತೇವೆ: ಉದ್ಘಾಟಕರ ಆಯ್ಕೆ ಬಗ್ಗೆ ಸಿಎಂ ತೀರ್ಮಾನ- ಸಚಿವ ಹೆಚ್.ಸಿ ಮಹದೇವಪ್ಪ – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಮೈಸೂರು,ಆಗಸ್ಟ್,7,2023(www.justkannada.in):   ಮೈಸೂರು ದಸರಾ 2023ರ ಗಜಪಯಣಸೆಪ್ಟೆಂಬರ್ ‌1ಕ್ಕೆ ನಡೆಯಲಿದೆ. ಗಜ ಪಡೆಯ ಮೊದಲ ಟೀಂಗೆ ಸೆಪ್ಟೆಂಬರ್ 1ಕ್ಕೆ ಮೈಸೂರಿಗೆ ಆಗಮಿಸಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಮೊದಲ ಹಂತದಲ್ಲಿ 14 ಆನೆಗಳು ಗಜ ಪಯಣದ ಮೂಲಕ ಮೂಲಕ ಮೈಸೂರಿಗೆ ಬರುತ್ತವೆ. ಹುಣಸೂರು ತಾಲೂಕಿನ ವೀರನ ಹೊಸಹಳ್ಳಿಯಲ್ಲಿ ಸಾoಪ್ರದಾಯಕವಾಗಿ ಗಜಪಡೆಗೆ ಸ್ವಾಗತ ಕೋರಲಾಗುತ್ತದೆ ಎಂದರು.

ದಸರಾಗೆ ವಿಶೇಷ ಅನುದಾನ ಕೇಳಿಲ್ಲ. ಅದ್ದೂರಿ ದಸರಾಗೆ ಬೇಕಾಗುವಷ್ಟು ಅನುದಾನ ಕೊಡುತ್ತೆ. ದಸರಾ ಉದ್ಘಾಟಕರ ತೀರ್ಮಾನ ಸಿಎಂ ವಿವೇಚನೆಗೆ ಬಿಟ್ಟಿದ್ದೇವೆ. ಸಿಎಂ ಅವರೇ ಉದ್ಘಾಟಕರ ಹೆಸರು ತೀರ್ಮಾನ ಮಾಡಲಿದ್ದಾರೆ ಎಂದು ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿದರು.

ನಟ ವಿಜಯರಾಘವೇಂದ್ರ ಪತ್ನಿ  ಸ್ಪಂದನ ನಿಧನ ಹಿನ್ನಲೆ ಸಂತಾಪ ಸೂಚಿಸಿದ ಸಚಿವ ಡಾ.ಎಚ್.ಸಿ ಮಹದೇವಪ್ಪ. ಸಾವಿನ ದುಖ ಭರಿಸುವ ಶಕ್ತಿಯನ್ನ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥನೆ ಮಾಡಿದರು.

ಅವಕಾಶ ಸಿಕ್ಕರೆ  ಸುನೀಲ್ ಬೋಸ್ ಸ್ಪರ್ಧೆ ಮಾಡುತ್ತಾನೆ.

ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸಚಿವ ಮಹಾದೇವಪ್ಪ ಪುತ್ರ ಸುನೀಲ್ ಬೋಸ್ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ. ಕಳೆದ ಮೂರು ಭಾರಿಯೂ ಸುನೀಲ್ ಬೋಸ್ ಅವಕಾಶ ಸಿಕ್ಕಿಲ್ಲ. ಅದರೂ ಅವನು ಯಾವುದೇ ಬೇಸರವಿಲ್ಲದೆ ಪಕ್ಷ ಸಂಘಟನೆ ಮಾಡುತ್ತಿದ್ದಾನೆ. ಈ ಭಾರಿ ಅವಕಾಶ ಸಿಕ್ಕರೆ ಸ್ಪರ್ಧೆ ಮಾಡುತ್ತಾನೆ. ಈ ವಿಚಾರದ ಬಗ್ಗೆಯೂ ಪಕ್ಷದಲ್ಲಿ ಯಾವ ಚರ್ಚೆಗಳು ನಡೆದಿಲ್ಲ ಎಂದು ಸಚಿವ ಡಾ.ಎಚ್.ಸಿ ಮಹದೇವಪ್ಪ ಸ್ಪಷ್ಟನೆ ನೀಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆ. ಸಚಿವರನ್ನ ಲೋಕಸಭಾ ಚುನಾವಣೆಗೆ ನಿಲ್ಲಿಸುವ ಬಗ್ಗೆ ಪಕ್ಷದಲ್ಲಿ ಯಾವ ಚರ್ಚೆಯೂ ಆಗಿಲ್ಲ. ಇದರ ಬಗ್ಗೆ ಕೇವಲ ಮಾಧ್ಯಮಗಳಲ್ಲಿ ಸುದ್ದಿಗಳು ಬರುತ್ತಿದೆ ಅಷ್ಟೇ. ನಮಗೆ ಅಂಥಹ ಯಾವುದೇ ಸೂಚನೆ ಬಂದಿಲ್ಲ. ಪಕ್ಷದಲ್ಲೂ ಚರ್ಚೆಗಳು ನಡೆದಿಲ್ಲ. ನಡೆಯದಿರೂ ಚರ್ಚೆ ನಿಮ್ಮ ಗಮನಕ್ಕೆ ಹೇಗೆ ಬಂತೂ ಗೊತ್ತಿಲ್ಲ ಎಂದು ಸಚಿವ ಡಾ.ಎಚ್.ಸಿ ಮಹದೇವಪ್ಪ ಮಾಧ್ಯಮಗಳಿಗೆ ಪ್ರಶ್ನೆಹಾಕಿದರು.

Key words: mysore- dasara-CM’s -decision – selection – inaugural – Minister- HC Mahadevappa

Font Awesome Icons

Leave a Reply

Your email address will not be published. Required fields are marked *