ಅನಿಮಲ್‌ ಕಲೆಕ್ಷನ್‌ ಕೇಳಿದ್ರೆ ಶಾಕ್‌ ಆಗ್ತೀರಾ

ಮುಂಬೈ: ರಣ್‌ ಬೀರ್‌ ಕಪೂರ್‌ ರಶ್ಮಿಕಾ ಅಭಿನಯದ ಅನಿಮಲ್‌ ಚಿತ್ರ ಮೂರುದಿನಗಳಲ್ಲಿ 356 ಕೋಟಿ ರೂ ಗಳಿಕೆ ಮಾಡಿದೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.

ರಣಬೀರ್ ಕಪೂರ್ ಕರಿಯರ್‌ನಲ್ಲಿ ಇದುವರೆಗೂ ಯಾವ ಸಿನಿಮಾವೂ ಮಾಡಿರದಂತಹ ದಾಖಲೆಯನ್ನು ‘ಅನಿಮಲ್’ ಸೃಷ್ಟಿಸಿದೆ. ಅನಿಮಲ್‌’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲದೆ, ಇದು ಅಡಲ್ಟ್ ಸಿನಿಮಾ. 18 ವರ್ಷ ವಯಸ್ಸು ಮೇಲ್ಪಟ್ಟವರು ಮಾತ್ರವರು ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಜೊತೆಗೆ ಯಾವುದೇ ಹಬ್ಬದ ದಿನ ಅಥವಾ ರಜೆಯು ಈ ಸಿನಿಮಾಗೆ ಸಿಕ್ಕಿಲ್ಲ. ಯಾವ ಸ್ಟಾರ್ ನಟರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿಲ್ಲ. ಇದೆಲ್ಲರ ಜೊತೆಗೆ ಈ ಸಿನಿಮಾದ ಅವಧಿ 3 ಗಂಟೆ 21 ನಿಮಿಷ ಇದೆ. ಈ ಬಗ್ಗೆ ಸಾಕಷ್ಟು ನೆಗೆಟಿವ್ ಅಭಿಪ್ರಾಯಗಳಿದ್ದವು. ಹೀಗಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ‘ಅನಿಮಲ್’ ನಾಗಾಲೋಟ ಮುಂದುವರಿದಿದೆ

Font Awesome Icons

Leave a Reply

Your email address will not be published. Required fields are marked *