ಅನ್ನಪೂರ್ಣಿ ಸಿನಿಮಾ ಪರ ನಿಂತ ನಿರ್ದೇಶಕ ವೆಟ್ರಿಮಾರನ್

ಬೆಂಗಳೂರು: ನಯನತಾರಾ  ನಟನೆಯ ಅನ್ನಪೂರ್ಣಿ ಸಿನಿಮಾದಲ್ಲಿ ಶ್ರೀರಾಮನನ್ನು ಮಾಂಸಾಹಾರಿಯಾಗಿ ತೋರಿಸಲಾಗಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಓಟಿಟಿಯಿಂದ ತೆಗೆದು ಹಾಕಲಾಗಿತ್ತು. ಈ ಕ್ರಮವನ್ನು ಖ್ಯಾತ ನಿರ್ದೇಶಕ ವೆಟ್ರಿಮಾರನ್ ವಿರೋಧಿಸಿದ್ದಾರೆ.

ಸೆನ್ಸಾರ್ ಆದ ಮೇಲೂ ಈ ರೀತಿ ಒತ್ತಡ ಹಾಕುವುದು ಸರಿಯಾದದ್ದು ಅಲ್ಲವೆಂದು ಅವರು ಹೇಳಿದ್ದಾರೆ.

ಅನ್ನಪೂರ್ಣಿ ಸಿನಿಮಾದಲ್ಲಿ ಶ್ರೀರಾಮನಿಗೆ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ಆಗುವಂತಹ ಸನ್ನಿವೇಶಗಳ ಇವೆ ಎನ್ನುವ ಕಾರಣಕ್ಕಾಗಿ ಹಲವಾರು ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು.

ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಟಿ ನಯನತಾರಾ ಅವರ ಮೇಲೂ ಪ್ರಕರಣ ದಾಖಲಾಗಿತ್ತು. ಮಧ್ಯ ಪ್ರದೇಶದ ಜಬಲ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Font Awesome Icons

Leave a Reply

Your email address will not be published. Required fields are marked *