ಅಪಹರಣ ನಾಟಕವಾಡಿ ತಂದೆ ಬಳಿ 30 ಲಕ್ಷ ರೂ,ಗೆ ಬೇಡಿಕೆ ಇಟ್ಟ ಮಗಳು

ಮಧ್ಯಪ್ರದೇಶ: ತಾನು ಕಿಡ್ನ್ಯಾಪ್​ ಆಗಿದ್ದೇನೆ ಎಂದು ಮಗಳೊಬ್ಬಳು ತಂದೆಗೆ ಸುಳ್ಳು ಹೇಳಿ 30 ಲಕ್ಷ ರೂ. ದೋಚಲು ಪ್ರಯತ್ನಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೋಟಾಗೆ ಅಧ್ಯಯನಕ್ಕೆಂದು ಹೋಗಿದ್ದ ವಿದ್ಯಾರ್ಥಿನಿ ಕಾವ್ಯಾ ಅಲ್ಲಿಂದ ವಿದೇಶಕ್ಕೆ ಹೋಗಲು ನಿರ್ಧರಿಸಿದ್ದಳು. ಹಾಗಾಗಿ ತಾನು ಅಪಹರಣವಾಗಿದ್ದೇನೆಂದು ತಂದೆಗೆ ಸುಳ್ಳು ಫೋಟೊ ಕಳಿಸಿ 30 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಳು.

ಕೋಟಾದ ಹಾಸ್ಟೆಲ್‌ಗೆ ಕೋಚಿಂಗ್​ಗೆ ಸೇರಲು ತನ್ನ ತಾಯಿಯೊಂದಿಗೆ ಕಾವ್ಯಾ ಬಂದಿದ್ದಳು. ಹಾಸ್ಟೆಲ್‌ನಲ್ಲಿ ಕೇವಲ ಮೂರು ದಿನಗಳನ್ನು ಕಳೆದಿದ್ದಷ್ಟೆ ನಂತರ ತನ್ನ ಸ್ನೇಹಿತರೊಬ್ಬರೊಂದಿಗೆ ಇಂದೋರ್‌ಗೆ ಹೋಗಿದ್ದಳು ಅವರು ಕೂಡ ವಿದೇಶಕ್ಕೆ ಪ್ರಯಾಣಿಸಲು ಬಯಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 18 ರಂದು, ಕಾವ್ಯಾ ತಂದೆ ರಘುವೀರ್ ಧಾಕಡ್ ಅವರು ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಕೋಟಾ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ತನಿಖೆ ನಡೆಸಿ ಇಂದೋರ್​ನಲ್ಲಿ ಆಕೆಯನ್ನು ಪತ್ತೆ ಹಚ್ಚಿದ್ದಾರೆ. ಇನ್ನು ತನಿಖೆಗೆ ಸಹಕರಿಸಿದ ಕಾವ್ಯಾಳ ಸ್ನೇಹಿತರೊಬ್ಬರು ಮಾತನಾಡಿ, ಕಾವ್ಯ ಮತ್ತು ಆಕೆಯ ಸ್ನೇಹಿತರೊಬ್ಬರು ವಿದೇಶಕ್ಕೆ ಹೋಗಲು ಬಯಸಿದ್ದರು ಆದರೆ ಸಾಕಷ್ಟು ಹಣವಿರಲಿಲ್ಲ ಹಾಗಾಗಿ ಅಪಹರಣ ನಾಟಕವಾಡಿದ್ದಾರೆ ಎಂದು ತಿಳಿಸಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *