ಅಪ್ರಾಪ್ತ ಬಾಲಕಿಯ ಗರ್ಭಪಾತ ಮಾಡಲು ಅನುಮತಿ ನಿರಾಕರಿಸಿದ ಹೈಕೋರ್ಟ್

ತಿರುವನಂತಪುರಂ: ತನ್ನ ಅಪ್ರಾಪ್ತ ಸಹೋದರನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ 12 ವರ್ಷದ ಅಪ್ರಾಪ್ತ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿದೆ.

ಭ್ರೂಣವು 34 ವಾರಗಳ ಗರ್ಭಾವಸ್ಥೆಯನ್ನು ತಲುಪಿದ್ದ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದೆ ಎಂದು ಗರ್ಭಾವಸ್ಥೆಯನ್ನು ಅಂತ್ಯಗೊಳಿಸುವ ಆಯ್ಕೆಯನ್ನು ನ್ಯಾಯಾಲಯವು ತಳ್ಳಿಹಾಕಿತು. ಇದು ಅಪ್ರಾಪ್ತರಿಗೆ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಕೋರ್ಟ್ ಹೇಳಿದೆ.

ಇತ್ತೀಚಿನವರೆಗೂ ಹುಡುಗಿಯ ಪೋಷಕರಿಗೆ ಮಗಳು ಗರ್ಭಿಣಿ ಆಗಿದ್ದಾಳೆ ಎಂಬುದರ ಬಗ್ಗೆ ತಿಳಿದಿರಲಿಲ್ಲ ಎಂದು ಲೈವ್ ಲಾ ವರದಿ ಮಾಡಿದೆ.

ಲೈವ್ ಲಾ ಪ್ರಕಾರ, ʼಭ್ರೂಣವು ಈಗಾಗಲೇ 34 ವಾರಗಳ ಗರ್ಭಾವಸ್ಥೆಯನ್ನು ತಲುಪಿದೆ. ಈಗ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ್ದು, ಗರ್ಭಾಶಯದ ಹೊರಗೆ ತನ್ನ ಜೀವನಕ್ಕಾಗಿ ತಯಾರಿ ನಡೆಸುತ್ತಿದೆ. ಈ ಹಂತದಲ್ಲಿ ಗರ್ಭಪಾತ ಸರಿಯಲ್ಲ, ಆದರೆ ಅಸಾಧ್ಯವಲ್ಲ.ಆದ್ದರಿಂದ, ಮಗುವನ್ನು ಹುಟ್ಟಲು ಅನುಮತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾ. ದೇವನ್ ರಾಮಚಂದ್ರನ್ ಅವರು ಅಪ್ರಾಪ್ತ ಬಾಲಕಿಯು ಆಕೆಯ ಪೋಷಕರ ರಕ್ಷಣೆ ಮತ್ತು ಅರ್ಜಿದಾರರ ಕಸ್ಟಡಿಯಲ್ಲಿರಬೇಕು ಎಂದು ನಿರ್ದೇಶನ ನೀಡಿದರು. ಆರೋಪ ಮಾಡಿರುವ ಸಹೋದರನನ್ನು ಬಾಲಕಿಯಿಂದ ದೂರವಿಡುವಂತೆ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪೋಷಕರಿಗೆ ನ್ಯಾಯಾಲಯ ಸೂಚನೆ ನೀಡಿದೆ.

Font Awesome Icons

Leave a Reply

Your email address will not be published. Required fields are marked *