ಅಫ್ಘಾನ್​​ಕ್ಕೆ 213 ರನ್​​ ಬಿಗ್​ ಟಾರ್ಗೆಟ್​ ಕೊಟ್ಟ ಟೀಂ ಇಂಡಿಯಾ

ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಕೊನೇ ಟಿ20 ಪಂದ್ಯದಲ್ಲಿ ಅಫ್ಘಾನ್​​ ತಂಡಕ್ಕೆ ಟೀಂ ಇಂಡಿಯಾ 213 ರನ್​​ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಕಾದಿತ್ತು. ಆರಂಭದಲ್ಲೇ ಟೀಂ ಇಂಡಿಯಾ ಸಾಲು ಸಾಲು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆರಂಭದಿಂದಲೂ ಏಕಾಂಗಿ ಹೋರಾಟ ನಡೆಸಿದ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೇವಲ 69 ಬಾಲ್​ನಲ್ಲಿ 8 ಸಿಕ್ಸರ್​​, 11 ಫೋರ್​ ಸಮೇತ 121 ರನ್​ ನೀಡಿದರು. ಟಿ20 ಕ್ರಿಕೆಟ್​​ನಲ್ಲೇ ರೋಹಿತ್​ ತನ್ನ 5ನೇ ಶತಕ ದಾಖಲಿಸಿದರು.

ಇನ್ನೊಂದೆಡೆ ಅಬ್ಬರಿಸಿದ ರಿಂಕು ಸಿಂಗ್​​ ಕೇವಲ 39 ಬಾಲ್​ನಲ್ಲಿ 6 ಸಿಕ್ಸರ್​​, 2 ಫೋರ್​​ ಸಮೇತ 69 ರನ್​ ನೀಡಿದರು.

ಟೀಂ ಇಂಡಿಯಾ 4 ವಿಕೆಟ್​ ನಷ್ಟಕ್ಕೆ 212 ರನ್​ ಪೇರಿಸಿದೆ. ಈ ಮೂಲಕ ಅಫ್ಘಾನ್​ ತಂಡಕ್ಕೆ 213 ರನ್​ ಬಿಗ್​ ಟಾರ್ಗೆಟ್​ ಕೊಟ್ಟಿದೆ.

Font Awesome Icons

Leave a Reply

Your email address will not be published. Required fields are marked *