ಅಭಿಮಾನ ತೋರಿಸೋ ಭರದಲ್ಲಿ ನಿಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಡಿ

ಗದಗ: ಬ್ಯಾನರ್ ಅಳವಡಿಸುವಾಗ ಮೂವರು ಫ್ಯಾನ್ಸ್ ವಿದ್ಯುತ್ ಸ್ಪರ್ಶಿಸಿ ​ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ನಟ ಯಶ್ ಅವರು ಗದಗದ ಸೂರಣಗಿ ಗ್ರಾಮಕ್ಕೆ ತಲುಪಿ ಮನೆಯವರೊಂದಿಗೆ ಸಾಂತ್ವನ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಯಶ್  ನಮ್ಮ ಮೇಲೆ ಅಭಿಮಾನ ತೋರಿಸೋ ಭರದಲ್ಲಿ ನಿಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಡಿ, ನನ್ನ ಬರ್ತ್​ಡೇಯಿಂದ ಯಾರಿಗೂ ತೊಂದರೆ ಆಗಬಾರದು ಎಂದು ಆಚರಿಸಿಕೊಂಡಿಲ್ಲ ಎಂದು ಯಶ್ ಅವರು ಬೇಸರಲ್ಲಿಯೇ ಹೇಳಿದ್ದಾರೆ.

ಏನು ಹೇಳಿದರು ಆ ತಂದೆ ತಾಯಿಗೆ ಮಗ ತಿರುಗಿ ಬರುತ್ತಾನಾ? ಎಲ್ಲ ಹುಡಗರು 25 ವರ್ಷಗಳ ಒಳಗಿನವರು. ಅಭಿಮಾನ ತೋರಿಸೋದರಲ್ಲಿ ಈ ಬ್ಯಾನರ್ ಕಟ್ಟೋದು, ಬೈಕ್​ ಚೇಸ್​​​ ಮಾಡಿಕೊಂಡು ಬಂದು ಫೋಟೋ ತೆಗೆಯೋದು ಎಲ್ಲ ಬಿಟ್ಟು ಬಿಡಿ. ನಿಜವಾಗಲು ನಿಮ್ಮ ಪ್ರೀತಿ ತೋರಿಸಬೇಕು ಅಂದರೆ ನಿಮ್ಮ ಜೀವನಕ್ಕೆ ಒಳ್ಳೆಯದನ್ನು ಮಾಡಿಕೊಳ್ಳಿ ಅಷ್ಟು ಸಾಕು. ದಯವಿಟ್ಟು ಈ ರೀತಿ ಯಾರು ಮಾಡಬಾರದು ಎಂದು ಹೇಳಿದರು.

Font Awesome Icons

Leave a Reply

Your email address will not be published. Required fields are marked *