ಅಯೋಧ್ಯೆಗೆ ಭೇಟಿ ಕೊಟ್ಟ ರಾಮ, ಸೀತೆ, ಲಕ್ಷ್ಮಣ

ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು ಜನವರಿ 22 ರಂದು ಉದ್ಘಾಟನೆಗೊಳ್ಳಲಿದೆ. ಹೀಗಾಗಿ ದೇಶದ ಗಣ್ಯರು, ರಾಮನ ಭಕ್ತರು ಅಯೋಧ್ಯೆಯತ್ತ ಹೊರಟಿದ್ದಾರೆ. ಅಂತೆಯೇ ಜನಪ್ರಿಯ ಟಿವಿ ಶೋ ರಮಾನಂದ್ ಸಾಗರ್ ಅವರ ‘ರಾಮಾಯಣ’ದ ತಾರಾಗಣ ಅಯೋಧ್ಯೆಯನ್ನು ತಲುಪಿದೆ.

ನಟರಾದ ಅರುಣ್ ಗೋವಿಲ್, ದೀಪಿಕಾ ಚಿಖಾಲಿಯಾ, ಸುನಿಲ್ ಲಾಹಿರಿ ಕಳೆದ ದಿನ ಅಯೋಧ್ಯೆ ತಲುಪಿದ್ದಾರೆ. ಇವರು ರಾಮಾಯಣ ಶೋನಲ್ಲಿ ರಾಮ-ಸೀತೆ ಮತ್ತು ಲಕ್ಷ್ಮಣ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಇಂದಿಗೂ ಕೂಡ ಅದೆಷ್ಟೋ ಜನ ಇವರನ್ನು ದೇವರ ರೂಪದಲ್ಲಿ ಕಾಣುತ್ತಾರೆ.

ರಮಾನಂದ್ ಸಾಗರ್ ಅವರ ‘ರಾಮಾಯಣ’ ಶೋನ ಮೊದಲ ಎಪಿಸೋಡ್ 1987, ಜನವರಿ 25 ರಂದು ಪ್ರಸಾರವಾಗಿತ್ತು. ದೂರದರ್ಶನ್ ಮತ್ತು ಡಿಡಿ ನ್ಯಾಷನಲ್​​ನಲ್ಲಿ ಪ್ರಸಾರವಾಗುತ್ತಿತ್ತು. ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ತಲೆ ಎತ್ತಿ ನಿಂತಿರುವ ಸಂದರ್ಭದಲ್ಲಿ ರಾಮಜನ್ಮ ಭೂಮಿ ಟ್ರಸ್ಟ್, ಅಂದಿನ ‘ರಾಮಯಾಣ ಶೋ’ನ ಪಾತ್ರಧಾರಿಗಳನ್ನು ಶುಭ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಅಂತೆಯೇ ಈ ಬಾಲಿವುಡ್​ ತಾರೆಯರು ಅಯೋಧ್ಯೆಯನ್ನು ಈಗಾಗಲೇ ತಲುಪಿದ್ದಾರೆ.

ಅಯೋಧ್ಯೆಗೆ ಆಗಮಿಸಿದ್ದ ಅರುಣ್ ಗೋವಿಲ್​ಗೆ ಅಭಿಮಾನಿಗಳು ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು. ಜೊತೆಗೆ ಅದೆಷ್ಟೋ ಜನ ಅವರ ಪಾದವನ್ನು ಮುಟ್ಟಿ ಆಶೀರ್ವಾದ ಪಡೆದರು.

ಇನ್ನು ರಾಮನ ಪಾತ್ರದಲ್ಲಿ ಅರುಣ್ ಗೋವಿಲ್, ದೀಪಿಕಾ ಚಿಖಿಲಾ ಸೀತಾ ಪಾತ್ರದಲ್ಲಿ ನಟಿಸಿದ್ದರೆ, ಸುನಿಲ್ ಲಾಹಿರಿ ಲಕ್ಷಣನ ಪಾತ್ರದಲ್ಲಿ ಸೈ ಎನಿಸಿಕೊಂಡಿದ್ದರು.

 

Font Awesome Icons

Leave a Reply

Your email address will not be published. Required fields are marked *