ಅಯೋಧ್ಯೆಯಲ್ಲಿ ಪೇಜಾವರ ಶ್ರೀ ನೇತೃತ್ವದಲ್ಲಿ 48 ದಿನಗಳ ಮಂಡಲೋತ್ಸವ ಆರಂಭ

ಉಡುಪಿ: ಅಯೋಧ್ಯೆಯ ನೂತನ ಮಂದಿರದಲ್ಲಿ ಶ್ರೀರಾಮನ‌ ವಿಧ್ಯುಕ್ತ ಪ್ರತಿಷ್ಠಾಪನೆಯ ನಂತರ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳ ನೇತೃತ್ವದಲ್ಲಿ ಇಂದಿನಿಂದ 48 ದಿನಗಳ ಮಂಡಲೋತ್ಸವ ಆರಂಭಗೊಂಡಿದೆ .

ಪೇಜಾವರ ಶ್ರೀಗಳು ಮಂಗಳವಾರವೂ ವಿವಿಧ ಮಂತ್ರಗಳಿಂದ ಪ್ರತಿಮೆಗೆ ತತ್ವನ್ಯಾಸಾದಿಗಳನ್ನು ನೆರವೇರಿಸಿ ಕಲಶಪೂಜೆ, ಚಾಮರಸೇವೆ, ಮಂಗಳಾರತಿಗಳನ್ನು ನೆರವೇರಿಸಿ ಪೂಜೆ ಸಲ್ಲಿಸಿದರು .

ಇದಕ್ಕೂ ಮೊದಲು ಪಿಲೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣಾಚಾರ್ಯ , ವಿಷ್ಣುಮೂರ್ತಿ ಆಚಾರ್ಯ , ಶಶಾಂಖ ಭಟ್ ಲಕ್ಷ್ಮೀನಾರಾಯಣ ಭಟ್ ಮೊದಲಸದವರ ನೇತೃತ್ವದಲ್ಲಿ ವಿವಿಧ ಹೋಮಹವನಾದಿಗಳು ಕಲಶಾರಾಧನೆ ಇತ್ಯಾದಿಗಳು ನೆರವೇರಿದವು

Font Awesome Icons

Leave a Reply

Your email address will not be published. Required fields are marked *