ಅಲರ್ಟ್ ಆದ CEN ಪೊಲೀಸರು – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಗಾಂಜಾ ಮಾರಾಟ, ಸಾಗಾಟ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಗಾಂಜಾ ಪ್ರಕರಣಗಳು ಏರುತ್ತಲೇ ಇವೆ. ಇದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸರು ಅಭಿಯಾನ ಆರಂಭಿಸಿದ್ದಾರೆ.

ಅದರಂತೆ ಇಂದು CEN ಪೊಲೀಸರು ಹುಬ್ಬಳ್ಳಿಯ ಹೊಸ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಜನಜಂಗುಳಿ ಪ್ರದೇಶದಲ್ಲಿ ಇನ್ಸ್‌ಪೆಕ್ಟರ್ ಬಿ.ಕೆ ಪಾಟೀಲ್ ನೇತೃತ್ವದಲ್ಲಿ ಅನುಮಾನಾಸ್ಪದ ಜನರನ್ನು ತಡೆದು ಶ್ವಾನದಳದಿಂದ ತಪಾಸಣೆ ನಡೆಸಿದ್ದಾರೆ.

ಈ ವೇಳೆ ಸಾರ್ವಜನಿಕರಿಗೆ ಗಾಂಜಾ ಮಾರಾಟ ಹಾಗೂ ಸಾಗಾಟ ಕಂಡು ಬಂದಲ್ಲಿ, ಸ್ಥಳೀಯ ಪೊಲೀಸರು ಇಲ್ಲವೇ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು. ಅವಳಿನಗರದಲ್ಲಿ ಗಾಂಜಾ ತಡೆಯಲು ಸಹಕರಿಸಲು ತಿಳಿಸಿದರು.

Font Awesome Icons

Leave a Reply

Your email address will not be published. Required fields are marked *